ವಿಜಯಲಕ್ಷ್ಮೀಗೆ ಅಶ್ಲೀಲ ಕಮೆಂಟ್ ಹಾಕಿದ ಇಬ್ಬರು ಅರೆಸ್ಟ್; ಬಂಧಿತರು ಯಾರು?

ವಿಜಯಲಕ್ಷ್ಮೀಗೆ ಅಶ್ಲೀಲ ಕಮೆಂಟ್ ಹಾಕಿದ ಇಬ್ಬರು ಅರೆಸ್ಟ್; ಬಂಧಿತರು ಯಾರು?


ಸೋಶಿಯಲ್ ಮೀಡಿಯಾದಲ್ಲಿ ತಮಗೆ ಬರೋ ಅಶ್ಲೀಲ ಕಮೆಂಟ್‌ಗಳು, ಮೆಸೇಜ್‌ಗಳ ಸೆಲೆಬ್ರಿಟಿಗಳು ಮೊದಲು ಸಹಿಸಿಕೊಳ್ಳುತ್ತಾರೆ. ಆದರೆ, ಈಗ ಇದರ ವಿರುದ್ಧ ಸಿಟ್ಟಿಗೇಳುತ್ತಿದ್ದಾರೆ. ಅನೇಕರು ಈ ವಿಷಯದಲ್ಲಿ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಾರೆ. ರಮ್ಯಾ ಅವರು ಇದೇ ರೀತಿ ಮಾಡಿದ್ದರು. ಆ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮೀ (ವಿಜಯಲಕ್ಷ್ಮಿ) ಕೂಡ ಅಶ್ಲೀಲ ಕಮೆಂಟ್ ಬಗ್ಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಈಗ ಇಬ್ಬರನ್ನು ಬಂಧಿಸಲಾಗಿದೆ. ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯಲಕ್ಷ್ಮೀ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಹಾಗೂ ಮೆಸೇಜ್‌ಗಳು ಬಂದಿದ್ದರು. ಇದರ ವಿರುದ್ಧ ಅವರು ಪೊಲೀಸರಿಗೆ ದೂರು ನೀಡಿದ್ದರು. ‘ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಆರೋಪಿಸಿದ್ದರು. ಈ ಬೆನ್ನಲ್ಲೇ ಇಬ್ಬರ ಬಂಧನ ನಡೆದಿದೆ.

ಬೆಂಗಳೂರಿನ ಚಿಕ್ಕಬಾಣಾವರದ ಆಟೋ ಚಾಲಕ ಚಂದ್ರು ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಬಂಧಿತರು. ಇಬ್ಬರೂ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿದ್ದರು. ಇವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಕಮೆಂಟ್ ಹಾಕಿದವರಿಗೆ ಸಂಕಷ್ಟ; ದೂರು ದಾಖಲಿಸಿ, ದಾಖಲೆ ಕೊಟ್ಟ ವಿಜಯಲಕ್ಷ್ಮೀ

ತಪ್ಪಿಸಿಕೊಳ್ಳಲು ನಡೆದಿತ್ತು ಪ್ರಯತ್ನ

ಅಶ್ಲೀಲ ಪದಗಳಿಂದ ನಿಂದನೆ ನೋಡಿ ಸಹಿಸದ ವಿಜಯಲಕ್ಷ್ಮೀ ಅವರು ದೂರು ದಾಖಲು ಮಾಡಿದ್ದರು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಇವರು, ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದರು. ಈ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಐಪಿ ಅಡ್ರೆಸ್ ಮೂಲಕ ಇವರ ಮೂಲ ಪತ್ತೆ ಹಚ್ಚಲಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ಮಂದಿಯನ್ನು ಬಂಧಿಸುವ ಸಾಧ್ಯತೆಯಿದೆ. ಅಂದಹಾಗೆ ಇವರು ಯಾವ ನಟನ ಅಭಿಮಾನಿಗಳು ಎಂಬುದು ಇನ್ನೂ ತಿಳಿದಿಲ್ಲ.

(ವರದಿ: ಪ್ರಜ್ವಲ್ ಎನ್ವೈ)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 12:20 pm, ಶುಕ್ರ, 2 ಜನವರಿ 26



Source link

Leave a Reply

Your email address will not be published. Required fields are marked *