ದ್ರಾಕ್ಷಿ ಕೃಷಿಯಲ್ಲಿ ವಿಜಯಪುರ ರೈತನ ಕ್ರಾಂತಿ; 4 ಎಕರೆ ಜಮೀನಿನಲ್ಲಿ 40-45 ಲಕ್ಷ ಆದಾಯ

ದ್ರಾಕ್ಷಿ ಕೃಷಿಯಲ್ಲಿ ವಿಜಯಪುರ ರೈತನ ಕ್ರಾಂತಿ; 4 ಎಕರೆ ಜಮೀನಿನಲ್ಲಿ 40-45 ಲಕ್ಷ ಆದಾಯ

ದ್ರಾಕ್ಷಿ ಕೃಷಿಯಲ್ಲಿ ವಿಜಯಪುರ ರೈತನ ಕ್ರಾಂತಿ; 4 ಎಕರೆ ಜಮೀನಿನಲ್ಲಿ 40-45 ಲಕ್ಷ ಆದಾಯ

ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ರೈತ ಎತ್ತರದ ಪ್ರದೇಶದಲ್ಲಿ ವೈಜ್ಞಾನಿಕವಾಗಿ ದ್ರಾಕ್ಷಿ ಬೆಳೆದು ಯಶಸ್ಸು ಕಂಡಿದ್ದಾರೆ. ತಮ್ಮ 4 ಎಕರೆ ಜಮೀನಿನಲ್ಲಿ ಸುಮಾರು 40-45 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದು, ಅವರ ಈ ಸಾಧನೆಯನ್ನು ಸಚಿವ ಎಂ.ಬಿ. ಪಾಟೀಲ್ ಶ್ಲಾಘಿಸಿದ್ದಾರೆ.

ಭೂಮಿ ತಾಯಿಯನ್ನು ನಂಬಿ ಕೆಟ್ಟವರಿಲ್ಲ ಎಂಬ ಮಾತು ನಿಜಕ್ಕೂ ಸತ್ಯ. ಲಭ್ಯವಿರೋ ಜಮೀನಿನಲ್ಲಿಯೇ ವೈಜ್ಞಾನಿಕವಾಗಿ ಕೃಷಿ ಮಾಡಿದ್ರೆ ಕೈ ತುಂಬಾ ಹಣ ಸಂಪಾದನೆ ಮಾಡಬಹುದು ಎಂದು ವಿಜಯಪುರ ಜಿಲ್ಲೆಯ ರೈತ ಸಾಬೀತು ಮಾಡಿದ್ದಾರೆ.

ಯಾವುದೇ ಬೆಳೆಯನ್ನು ಬೆಳೆದ್ರೆ ಅದರಲ್ಲಿ ಸುಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಹಾಗೆಯೇ ಯಾವ ಮಣ್ಣಿನಲ್ಲಿ ಏನು ಬೆಳೆಯಬೇಕು ಎಂದು ತಿಳಿಯಲು ಮಣ್ಣಿನ ಫಲವತ್ತತೆಯ ಪರೀಕ್ಷೆ ಮಾಡಿಸಬೇಕು. ಇದರಿಂದ ಮಣ್ಣಿಗೆ ಯಾವ ಫಲವತ್ತತೆ ಹೆಚ್ಚುವರಿಯಾಗಿ ನೀಡಬೇಕು ಅನ್ನೋದು ಗೊತ್ತಾಗುತ್ತದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ರೈತ ಬಶೀರ್ ಮುಲ್ಲಾ ಎತ್ತರ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದು ಕೃಷಿ ಕ್ರಾಂತಿ ಮಾಡಿದ್ದಾರೆ.

ಬಶೀರ್ ಮುಲ್ಲಾ ಅವರ ಸಾಧನೆಗೆ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ (MB Patil) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಶೀರ್ ಅವರ ಕೃಷಿ ಕ್ರಾಂತಿಯನ್ನು ಎಂ.ಬಿ.ಪಾಟೀಲ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಬಶೀರ್ ಮುಲ್ಲಾ ಅವರು ತಾವು ಬೆಳೆದ ದ್ರಾಕ್ಷಿಯನ್ನು ಸಚಿವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಕೇವಲ 10 ಸಾವಿರ ಸಾಕು, ಮನೆಯಲ್ಲೇ ಲಾಭದಾಯಕ ಬ್ಯುಸಿನೆಸ್ ಮಾಡಿ, ಒಳ್ಳೆಯ ಆದಾಯ ಗಳಿಸಿ

ನೀರಾವರಿಯ ನೆರವಿನಿಂದ ಎತ್ತರ ಪ್ರದೇಶದಲ್ಲೂ ದ್ರಾಕ್ಷಿಯ ಕಾಂತಿ 4 ಎಕರೆ ಬೆಳೆ, ರೂ. 40-45 ಲಕ್ಷ ಆದಾಯ ನಿರೀಕ್ಷೆ! ಬಬಲೇಶ್ವರ ಮತಕ್ಷೇತ್ರದ ಕನಮಡಿ ಗ್ರಾಮದ ರೈತರಾದ ಶ್ರೀ ಬಶೀರ್ ಮುಲ್ಲಾ ಅವರು ಮಹಾರಾಷ್ಟ್ರ ಗಡಿಗೆ ಸಮೀಪವಿರುವ ಅತಿ ಎತ್ತರದ ಧರಿದೇವರ ಗುಡ್ಡದ ಬಳಿ 4 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದು ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. ಈ ವರ್ಷ ಅವರು ರೂ. 40–45 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಸಚಿವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕಡಿಮೆ ರಿಸ್ಕ್‌ನಲ್ಲಿ ಹೆಚ್ಚು ಲಾಭ; ಲಕ್ಷ ಲಕ್ಷ ಸಂಪಾದಿಸುವ ಆಸೆಯಿದ್ರೆ ಆರಂಭಿಸಿ ಅತ್ಯುತ್ತಮ ಬ್ಯುಸಿನೆಸ್

ಈ ಎತ್ತರ ಪ್ರದೇಶದಲ್ಲಿಯೂ ನೀರಾವರಿ ಕಲ್ಪಿಸಿರುವುದರಿಂದ ತೋಟಗಾರಿಕೆ ಸಾಧ್ಯವಾಗಿದೆ ಎಂದು ಅವರು ಅಭಿಮಾನದಿಂದ ತಿಳಿಸಿದರು. ಜೊತೆಗೆ, ತಾವು ಬೆಳೆದ ದ್ರಾಕ್ಷಿಯನ್ನು ಬೆಂಗಳೂರಿನ ನನ್ನ ನಿವಾಸಕ್ಕೆ ತಂದುಕೊಟ್ಟರು. ಅವರ ಆತ್ಮೀಯತೆಗೆ ಹೃತ್ಪೂರ್ವಕ ಧನ್ಯವಾದಗಳು. ಬಶೀರ್ ಮುಲ್ಲಾ ಅವರ ಕೃಷಿ ಹಾಗೂ ತೋಟಗಾರಿಕೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂಬುದು ನನ್ನ ಹಾರೈಕೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಐಲ್ಯಾಂಡ್ ಮಾದರಿಯಲ್ಲಿ ಶಿವಮೊಗ್ಗದ 15 ಕೆರೆಗಳ ‘ಹಸಿರು’ ರೂಪಾಂತರ: 43 ಕೋಟಿ ಮೀಸಲು

Source link

Leave a Reply

Your email address will not be published. Required fields are marked *