ಪತ್ನಿ‌ ಕೊಲೆ ಮಾಡಿ ಮನೆ ಆವರಣದಲ್ಲೇ ಶವ ಹೂತ ಪತಿ: ತನಿಖೆ ವೇಳೆ ಬಯಲಾಯ್ತು ಹೆಂಡತಿ ನಾಪತ್ತೆ ನಾಟಕ

ಪತ್ನಿ‌ ಕೊಲೆ ಮಾಡಿ ಮನೆ ಆವರಣದಲ್ಲೇ ಶವ ಹೂತ ಪತಿ: ತನಿಖೆ ವೇಳೆ ಬಯಲಾಯ್ತು ಹೆಂಡತಿ ನಾಪತ್ತೆ ನಾಟಕ


ಆರೋಪಿ ಮತ್ತು ಮೃತ ಮಹಿಳೆಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ

ವಿಜಯಪುರ, ಫೆಬ್ರವರಿ 18: ಪತ್ನಿಯನ್ನು ತಾನೇ ಕೊಂದು ಶವವನ್ನು ಮನೆಯಲ್ಲಿಯೇ ಹೂತುಹಾಕಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ಕತೆ ಕಟ್ಟಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟದಲ್ಲಿ ನಡೆದಿದೆ. ಕೊಲೆ ನಡೆದು ಬರೋಬ್ಬರಿ 24 ದಿನಗಳ ಬಳಿಕ ಆರೋಪಿ ಅಸಲೀ ಮುಖ ಅನಾವರಣಗೊಂಡಿದ್ದು, ಸಾಲದ ವಿಚಾರಕ್ಕೆ ಜಗಳ ನಡೆದ ಹಿನ್ನೆಲೆ ಪತ್ನಿಯನ್ನ ದುಷ್ಕರ್ಮಿಗಳು ಕೊಂದಿದ್ದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಸರೋಜಿನಿ (45) ಪತಿಯಿಂದಲೇ ದಾರುಣವಾಗಿ ಹತ್ಯೆಯಾದ ದುರ್ದೈವಿ ಮಹಿಳೆ ಆರೋಪಿ ರತ್ನಾಕರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಪತ್ನಿ ಸರೋಜಿನಿ ಹೆಸರಲ್ಲಿ ಆರೋಪಿ ಸಾಲಮಾಡಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ಜ.24ರಂದೂ ಗಲಾಟೆ ನಡೆದಿತ್ತು. ಈ ವೇಳೆ ಸರೋಜಿನಿ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಪ್ರಭು ರತ್ನಾಕರ ಹತ್ಯೆ ಮಾಡಿದ್ದಾನೆ. ಬಳಿಕ ಶವವನ್ನು ಮನೆಯಲ್ಲಿಯೇ ಹೂತು ಹಾಕಿದ್ದ ಎಂಬ ವಿಚಾರ ತನಿಖೆ ವೇಳೆ ಘೋರಬಂದಿದೆ.

ಇದನ್ನೂ ಓದಿ: ನಾನು ಸತ್ತರೆ ನಿನ್ನನ್ನು ಯಾರು ನೋಡಿಕೊಳ್ಳುತ್ತಾರೆ; ಪತ್ನಿಯನ್ನ ಕೊಂದ ಇಸ್ರೋ ನಿವೃತ್ತ ನೌಕರ

ತಾನೇ ಪತ್ನಿ ಕೊಂದು ನಾಪತ್ತೆ ದೂರು ನೀಡಿದ್ದ ಆರೋಪಿ

ಇನ್ನು ಪತ್ನಿ ಸರೋಜಿನಿಯನ್ನು ತಾನೇ ಕೊಂದಿದ್ದ ಪ್ರಭು ರತ್ನಾಕರ ಆಕೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಸವದತ್ತಿಗೆ ಹೋಗುವ ಸಲುವಾಗಿ ದೇವರಹಿಪ್ಪರಗಿ ಪಟ್ಟದ ಕಿರಾಣಿ ಅಂಗಡಿಗೆ ಬೇಕಾದ ಸಾಮಗ್ರಿ ತರೋದಾಗಿ ಹೇಳಿ ಹೋಗಿದ್ದ ಪತ್ನಿ ಸರೋಜಿನಿ ತಿರುಗಿ ಬಂದಿಲ್ಲ. ಹೀಗಾಗಿ ಆಕೆಗಾಗಿ ತಾನು ಮತ್ತು ಮಗ ಪಟ್ಟದ ತುಂಬೆಲ್ಲ ಹುಡುಕಾಡಿದ್ದೇವೆ. ಆದರೆ ಅವಳಿಲ್ಲ. ಇದರಿಂದ ಮತ್ತಷ್ಟು ಆತಂಕಗೊಂಡು ಜೊತೆಗೂಡಿ ಹುಡುಕಾಡಿದ್ದಾರೆ. ನೆಂಟರಿಷ್ಟರ ಮನೆಗಳಿಗೆ ಕರೆ ಮಾಡಿ ಆಕೆಯ ಬಗ್ಗೆ ವಿಚಾರಿಸಿದರೂ ಪತ್ನಿಯ ಸುಳಿವು ಸಿಕ್ಕಿಲ್ಲ ಎಂದು ದೇವರಹಿಪ್ಪರಗಿ ಪೊಲೀಸ್ ಠಾಣೆಗೆ ಕಂಪ್ಲೇಂಟ್ ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತನಿಖೆ ವೇಳೆ ಪ್ರಭು ರತ್ನಾಕರನ ಮೇಲೆಯೇ ಅನುಮಾನಗೊಂಡ. ಹೀಗಾಗಿ ಆತನನ್ನು ಕರೆಸಿ ವಿಚಾರಣೆ ನಡೆಸಿದಾಗ ಅಸಲೀ ಸತ್ಯ ಬಯಲಾಗಿದೆ. ಸದ್ಯ ಕಾನೂನು ಪ್ರಕಾರ ಹೂತಿರುವ ಶವ ಹೊರ ತೆಗೆಯಲಾಗಿದೆ, ಮರಣೋತ್ತರ ಪರೀಕ್ಷೆ ಬಳಿಕ ಶವ ಹಸ್ತಾಂತರಿಸಲಾಗಿದೆ. ಸರೋಜಿನಿ ತಾಯಿ ಪ್ರಭು ರತ್ನಾಕರ್ ವಿರುದ್ಧ ದೂರು ನೀಡಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *