ಬೆಳಗಾವಿ, (ಡಿಸೆಂಬರ್ 14): ಶಿವಾಜಿ ಮಹಾರಾಜರು ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು. ಬಸನಗೌಡ ಇದ್ದವ ನಾನು ಬಷೀರ್ ಅಹ್ಮದ್ ಆಗಬೇಕಾಗುತ್ತಿತ್ತು ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಇಂದು (ಡಿಸೆಂಬರ್ 14) ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್, ಶಿವಾಜಿ ಮಹಾರಾಜರು ನಮ್ಮ ದೇಶದ ಆದರ್ಶ. ವಿಜಯಪುರದಲ್ಲಿ ಶಿವಾಜಿ ಪ್ರತಿಮೆ ಕೂರಿಸುವುದು ಸುಲಭ ಅಲ್ಲ, ಏಕೆಂದರೆ ಅಲ್ಲಿ ಪಾಕಿಸ್ತಾನ ಮೇಡ್ ಬಹಳಷ್ಟಿದೆ ಎಂದು ಕಿಡಿಕಾರಿದರು.
ಮರಾಠ ಅಭಿವೃದ್ಧಿ ನಿಗಮ ವಿಚಾರವಾಗಿ ಚರ್ಚೆ. ಮರಾಠಿ ಭಾಷೆಯನ್ನು ವಿರೋಧಿಸುತ್ತೀರಿ, ಉರ್ದು ಭಾಷೆ ಎಲ್ಲಿಯದ್ದು? ಮರಾಠಿ ಭಾಷೆ ವಿರೋಧಿಸುವವರು, ಉರ್ದು ಯಾಕೆ ವಿರೋಧಿಸುವುದಿಲ್ಲ. ಧಮ್, ತಾಕತ್ ಇದ್ದರೆ ಉರ್ದು ಭಾಷೆ ಬೋರ್ಡ್ ತೆಗೆಸಿ. ಇಲ್ಲಿ ನಾವು ಮುಂದೆ ಜೀವನ ಮಾಡುವುದೇ ಕಷ್ಟ. ಎಲ್ಲರೂ ಯೋಗಿ ಆದಿತ್ಯನಾಥ್ ಆಗಬೇಕು. ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು. ಬಸನಗೌಡ ಇದ್ದವ ನಾನು ಬಷೀರ್ ಅಹ್ಮದ್ ಆಗಬೇಕಾಗಿದ್ದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.