
ವಿಜಯಪುರ, ಏಪ್ರಿಲ್ 12: ಜೀವಾವಧಿ ಶಿಕ್ಷೆಗೆ ಗುರಿಯಾಗಿ 21 ವರ್ಷಗಳಿಂದ ತಲೆಮರೆಸಿಕೊಂಡಿದ್ದಾರೆ (ಕೈದಿ) ವಿಜಯಪುರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಯುಕ್ತ ಕಾರ್ಯಾಚರಣೆ ನಡೆಸಿ ಅಜಾನ್ ಮಜಾವರ್ ಕೈದಿಯನ್ನು ಬಂಧಿಸಿದ್ದಾರೆ.
ಪೆರೋಲ್ ರಜೆ ಮೇಲೆ ಸ್ವಗ್ರಾಮಕ್ಕೆ ತೆರಳಿದ್ದ ಆರೋಪಿ
ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆಜಾನ್ ಮಜಾವರ್ 2005 ರಲ್ಲಿ ಮಾರ್ಚ್ 25 ರಂದು 10 ದಿನ ಪೆರೋಲ್ ರಜೆಯ ಮೇಲೆ ವಿಜಯಪುರ ಕೇಂದ್ರ ಕಾರಾಗೃಹದಿಂದ ಮಹಾರಾಷ್ಟ್ರದ ತನ್ನ ಸ್ವಗ್ರಾಮ ವಾಗೋಳಿಗೆ ತೆರಳಿದ್ದ. ಆದರೆ ಪೆರೋಲ್ ಅವಧಿ ಮುಗಿದ ಬಳಿಕ ಕಾರಾಗೃಹಕ್ಕೆ ವಾಪಸ್ ಆಗಲಿಲ್ಲ. ಈ ಸಲ್ಲಿಸಿದ ಕಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ನಲ್ಲಿ ಪಾಸಾದ ಬಳ್ಳಾರಿ ಸೆಂಟ್ರಲ್ ಜೈಲಿನ ಶಿಕ್ಷಾ ಬಂಧಿ
ಆರೋಪಿಯನ್ನು ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ನಿರ್ದೇಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ. 206ರ ಏಪ್ರಿಲ್ 11 ರಂದು ಕೊನೆಗೂ ಮಹಾರಾಷ್ಟ್ರ ರಾಜ್ಯದ ಇಚಲಕರಂಜಿ ಪಟ್ಟಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.
ಹಳೆ ವೈಷಮ್ಯಕ್ಕೆ ರಕ್ತಪಾತ: ಹತ್ತು ಹಂತಕರಿಗೆ ಜೀವಾವಧಿ ಶಿಕ್ಷೆ
ಗ್ರಾಮ ಪಂಚಾಯತ್ಯ ಕಿಡಿ, ಗ್ರಾಮಕ್ಕೆ ರಕ್ತದ ಹೋಕುಳಿಯನ್ನೇ ಹರಿಸಿತ್ತು. ಕಣ್ಣಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ 10 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಸೇರಿದಂತೆ ತಲಾ 19,500 ರೂ ದಂಡ ವಿಧಿಸಿ ರಾಯಚೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ವಿಧಿಸಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ಇದೀಗ ತಾರ್ಕಿಕ ಅಂತ್ಯ ಸಿಕ್ಕಿದೆ.
ಆ ರಾತ್ರಿ ನಡೆದಿದ್ದೇನು?
2021 ರ ಫೆಬ್ರುವರಿ 15 ರಂದು ರಾತ್ರಿ 10:30 ರ ಸಮಯಕ್ಕೆ ಇಡೀ ಗ್ರಾಮ ಮಲಗುವ ಸಜ್ಜಾಗಿತ್ತು. ಹನಮಂತಮ್ಮ ಅವರ ಮನೆಯ ಮುಂದೆ ಅಟ್ಟಹಾಸ ಮೆರೆದಿದ್ದ ಅಕ್ರಮ ಕೂಟವೊಂದು ದಾಳಿ ನಡೆಸಿತ್ತು. ಹನಮಂತಮ್ಮ ಹಾಗೂ ಅವರ ಪುತ್ರರಾದ ಶರಣಬಸವ ಮತ್ತು ಅಮರೇಶ್ ಮೇಲೆ ಮನಬಂದಂತೆ ಹಲ್ಲೆ ನಡೆಸಿ ರಕ್ತಪಾತ ನಡೆಸಿದರು. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಏಪ್ರಿಲ್ 10 ರಂದು ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ಪ್ರಕಟಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.