Headlines

ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!: ವಿಜಯಪುರ ರಾಬರಿ ಕೇಸ್​​ಗೆ ಹೊಸ ಟ್ವಿಸ್ಟ್​​

ಟಾರ್ಗೆಟ್ಟೇ ಬೇರೆ, ದರೋಡೆ ಮಾಡಿದ ಬಂಗಾರದ ಅಂಗಡಿಯೇ ಬೇರೆ!: ವಿಜಯಪುರ ರಾಬರಿ ಕೇಸ್​​ಗೆ ಹೊಸ ಟ್ವಿಸ್ಟ್​​


ವಿಜಯಪುರ, ಜನವರಿ 27: ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಭೂಮಿಕಾ ಜ್ಯೂವೆಲರಿ ಶಾಪ್ ದರೋಡೆ ಪ್ರಕರಣ ಸಂಬಂಧ ಅಚ್ಚರಿಯ ಮಾಹಿತಿ ತನಿಖೆ ವೇಳೆ ಬಯಲಾಗಿದೆ. ದರೋಡೆಕೋರರು ರಾಬರಿ ಮಾಡಲು ಪ್ಲ್ಯಾನ್ ಮಾಡಿಕೊಂಡು ಬಂದಿದ್ದ ಬಂಗಾರದ ಅಂಗಡಿಯೇ ಬೇರೆಯಾಗಿತ್ತು. ಆದರೆ ಅಲ್ಲಿ ಹೆಚ್ಚು ಜನರಿದ್ದ ಕಾರಣ ಯೂಟರ್ನ್ ಮಾಡಿಕೊಂಡು ಬಂದು ಈ ಶಾಪ್ ಗೆ ನುಗ್ಗಿದ್ದಾರೆ ಎಂಬುದು ಗೊತ್ತಾಗಿದೆ. ವಿಜಯಪುರದಿಂದ ಸೊಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 52ರ ಮೂಲಕ ಹಲಸಂಗಿ ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ ಆರೋಪಿಗಳು, ಗ್ರಾಮ ಪಂಚಾಯಿತಿ ಬಳಿಯ ರಸ್ತೆಯಿಂದ ಗ್ರಾಮದ ಮಧ್ಯ ಭಾಗದಲ್ಲಿರುವ ಜ್ಯುವೆಲರಿ ಶಾಪ್‌ಗಳತ್ತ ಚಿತ್ತನೆಟ್ಟಿದ್ದರು. ಭೂಮಿಕಾ ಜ್ಯೂವೆಲರಿ ಶಾಪ್ ದಾಟಿ ಬೇರೆ ಬಂಗಾರದ ಅಂಗಡಿಗಳಲ್ಲಿ ಮೊದಲು ಹೋಗಿದ್ದರು. ಬಳಿಕ ಹಿಂದಿರುಗಿ ಗನ್ ತೋರಿಸಿ ಭೂಮಿಕಾ ಜ್ಯೂವೆಲರಿ ಶಾಪ್‌ನಲ್ಲಿ ದರೋಡೆ ಲಭ್ಯವಿರುತ್ತದೆ. ಬಂದ ಮಾರ್ಗದ ಮೂಲಕವೇ ಆರೋಪಿಗಳು ಎಸ್ಕೇಪ್ ಆಗಿದ್ದು, ದರೋಡೆಕೋರರ ಪತ್ತೆಗೆ ವಿಶೇಷ ತಂಡಗಳ ರಚನೆ ಮಾಡಿ ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *