ಚುನಾವಣೆ ಭರವಸೆ ಘೋಷಣೆ ಮಾಡಿದ ವಿಜಯ್: ಮಹಿಳೆಯರಿಗೆ ಉಚಿತ ಬಸ್, ಮಗುವಿಗೆ ಚಿನ್ನದ ಉಂಗುರ

ಚುನಾವಣೆ ಭರವಸೆ ಘೋಷಣೆ ಮಾಡಿದ ವಿಜಯ್: ಮಹಿಳೆಯರಿಗೆ ಉಚಿತ ಬಸ್, ಮಗುವಿಗೆ ಚಿನ್ನದ ಉಂಗುರ


ಚುನಾವಣೆ ಭರವಸೆ ಘೋಷಣೆ ಮಾಡಿದ ವಿಜಯ್: ಮಹಿಳೆಯರಿಗೆ ಉಚಿತ ಬಸ್, ಮಗುವಿಗೆ ಚಿನ್ನದ ಉಂಗುರ

ಮಹಾಬಲಿಪುರಂ ಮಾ.7: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ವಿಜಯ್, ತಮ್ಮ ‘ತಮಿಳಗ ವೆಟ್ರಿ ಕಳಗಂ’ ( TVK ) ಪಕ್ಷದ ವತಿಯಿಂದ ಇಂದು (ಮಾ.7) ಚುನಾವಣೆ ಭರವಸೆಯನ್ನು ನೀಡಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಕಟಿಸಲಾಗಿದೆ. “ವಿಜಯದ ಪಯಣ” (ವೆಟ್ರಿ ಪಯಣಂ) ಎಂಬ ಹೆಸರಿನಡಿ ಮಹಿಳೆಯರಿಗೆ ಹಲವು ಕೊಡುಗೆಗಳನ್ನು ಅವರು ಪ್ರಕಟಿಸಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣದ ಸೌಲಭ್ಯ.

ಮಹಿಳಾ ಸುರಕ್ಷತೆಗಾಗಿ ವಿಶೇಷ ಪಡೆ ರಚನೆ. ಈ ಪಡೆಯ ಮಹಿಳಾ ಅಧಿಕಾರಿಗಳು ಬಾಡಿ ಕ್ಯಾಮೆರಾಗಳೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ. ಖಾಸಗಿ ಶೇರ್ ಆಟೋಗಳೂ ಸೇರಿದಂತೆ ಎಲ್ಲಾ ಸಾರ್ವಜನಿಕ ವಾಹನಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಕೆ. ತುರ್ತು ಸಂದರ್ಭದಲ್ಲಿ 5 ನಿಮಿಷಗಳಲ್ಲಿ ಸಹಾಯ ಲಭ್ಯವಾಗುವಂತೆ ಕ್ರಮ.

ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ. ಸಿಸಿಟಿವಿ ಮತ್ತು ಸರಿಯಾದ ಬೀದಿ ದೀಪಗಳ ಮೂಲಕ ಕತ್ತಲೆ ಪ್ರದೇಶಗಳನ್ನು ಇಲ್ಲದಂತೆ ಮಾಡುವುದು. ರೇಷನ್ ಅಂಗಡಿಗಳು, ಶಾಲೆ ಮತ್ತು ಕಾಲೇಜುಗಳು ಉಚಿತ ಮೂಲಕ ಸ್ಯಾನಿಟರಿ ಪ್ಯಾಡ್ ವಿತರಣೆ. ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷದವರೆಗೆ ಬಡ್ಡಿರಹಿತ ಹಣಕಾಸು ನೆರವು.ನೋಂದಾಯಿತ ಸಣ್ಣ ಉದ್ದಿಮೆಗಳಾಗಿ ಬದಲಾಗುವ ಸಂಘಗಳಿಗೆ ವಾರ್ಷಿಕ ₹5 ಲಕ್ಷದವರೆಗೆ 100% ಅನುದಾನ.

ಇದನ್ನೂ ಓದಿ: ತ್ರಿಷಾ, ವಿಜಯ್ ಖುಲ್ಲಂ ಖುಲ್ಲಾ ತಿರುಗಾಡಿದ್ದು ಸರಿಯೇ? ಖಾರವಾಗಿ ಪ್ರತಿಕ್ರಿಯಿಸಿದ ಫ್ಯಾನ್ಸ್

ಮಕ್ಕಳಿಗಾಗಿ ‘ತಾಯಿ ಮಾಮನ್’ ಯೋಜನೆ:

ತಮಿಳುನಾಡಿನಲ್ಲಿ ಜನಿಸುವ ಪ್ರತಿಯೊಂದು ಮಗುವಿಗೆ ಚಿನ್ನದ ಉಂಗುರ ಉಡುಗೊರೆ. ಮಗುವಿಗೆ ಬೇಕಾದ ಬಟ್ಟೆ, ಸಾಬೂನು, ಆಟಿಕೆಗಳು, ಸೊಳ್ಳೆ ಪರದೆ ಮತ್ತು ನ್ಯಾಪ್ಕಿನ್ ಒಳಗೊಂಡ ಸಂಪೂರ್ಣ ಕಿಟ್ ವಿತರಣೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 





Source link

Leave a Reply

Your email address will not be published. Required fields are marked *