ಬೆಂಗಳೂರಿನ ಅಮೃತಹಳ್ಳಿಯ ವಿದ್ಯಾರ್ಥಿನಿ ಮೇಲಿನ ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಕಾರ್ಪೋರೇಟರ್ ಪುತ್ರ ಅನಿರುಧ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಿಖಿಲ್‌ನ ಸ್ನೇಹಿತನಾಗಿರುವ ಈತ, ಘಟನೆ ನಡೆದಿದೆ ಎನ್ನಲಾದ ವಿಲ್ಲಾವನ್ನು ಬುಕ್ ಮಾಡಿದ್ದನು.
15
Image Credit : Asianet News
ಅನಿರುಧ್
ಬೆಂಗಳೂರಿನ ಅಮೃತಹಳ್ಳಿಯ ವಿದ್ಯಾರ್ಥಿನಿ ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿ ಪುತ್ರನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅನಿರುಧ್ ಎಂದು ಗುರುತಿಸಲಾಗಿದೆ. ಅನಿರುಧ್ ಸೇರಿದಂತೆ ಒಟ್ಟು ಐವರ ಬಂಧನವಾಗಿದೆ.
25
Image Credit : Asianet News
ಮಾಜಿ ಕಾರ್ಪೋರೇಟರ್ ಪುತ್ರ
ಮಾಜಿ ಕಾರ್ಪೋರೇಟರ್ ಪುತ್ರನಾಗಿರುವ ಅನಿರುಧ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅತ್ಯಾ*ಚಾರ ನಡೆದಿದೆ ಸ್ಥಳ ಎನ್ನಲಾದ ವಿಲ್ಲಾ ಬುಕಿಂಗ್ ಸಂಬಂಧ ವಿಚಾರಣೆ ನಡೆಸಲು ಅನಿರುಧ್‌ಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆ ಬಳಿಕ ಹೆಚ್ಚಿನ ತನಿಖೆಗಾಗಿ ಅನಿರುಧ್‌ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
35
Image Credit : Asianet News
ನಿಖಿಲ್ ಸ್ನೇಹಿತನೇ ಈ ಅನಿರುಧ್
ಗುತ್ತಿಗೆದಾರನಾಗಿರುವ ಅನಿರುಧ್, ದಾವಣಗೆರೆ ಮೂಲದ ನಿವಾಸಿ. ಅನಿರುಧ್ ತಂದೆ ದಾವಣಗೆರೆಯ ಮಾಜಿ ನಗರ ಪಾಲಿಕೆ ಸದಸ್ಯ ಎಂದು ಹೇಳಲಾಗುತ್ತಿದೆ. ಅನಿರುಧ್‌ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅನಿರುಧ್ ಪ್ರಮುಖ ಆರೋಪಿಯಾಗಿರುವ ನಿಖಿಲ್ ಸ್ನೇಹಿತನಾಗಿದ್ದಾನೆ.
45
Image Credit : Asianet News
ಕಾರು ಮಾರಾಟ ಮಳಿಗೆ
55
Image Credit : Asianet News