
<p>ಒಂದೇ ಚಾರ್ಜ್ಗೆ 450 ಕಿ.ಮಿ ಮೈಲೇಜ್, ಅತೀ ಕಡಿಮೆ ಬೆಲೆ ಕಾರು ಭಾರತದಲ್ಲಿ ಶೀಘ್ರದಲ್ಲೇ ಲಾಂಚ್, ಪ್ರಮುಖ ಎರಡು ಕಾರುಗಳು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಕಾರುಗಳು ಅತೀ ಕಡಿಮೆ ಬೆಲೆ ಮಾತ್ರವಲ್ಲ, ಅತ್ಯುತ್ತಮ ಮೈಲೇಜ್ ಕೂಡ ನೀಡಲಿದೆ. </p><img>ಭಾರತದಲ್ಲಿ 7 ಅಥವಾ 8 ಮಂದಿ ಪ್ರಯಾಣಿಸುವ ಫ್ಯಾಮಿಲಿ ಕಾರುಗಳಿಗೆ ಯಾವಾಗಲೂ ಬೇಡಿಕೆ ಹೆಚ್ಚು. ಇದೇ ಹಿನ್ನೆಲೆಯಲ್ಲಿ, ಮುಂದಿನ ಎರಡು ತಿಂಗಳಲ್ಲಿ ಎರಡು ಹೊಸ 7-ಸೀಟರ್ ಕಾರುಗಳು ಮಾರುಕಟ್ಟೆಗೆ ಬರಲಿವೆ. ಅವುಗಳೆಂದರೆ ನಿಸ್ಸಾನ್ ಗ್ರಾವಿಟ್ ಮತ್ತು ವಿನ್ಫಾಸ್ಟ್ ಲಿಮೋ ಗ್ರೀನ್. ವಿಯೆಟ್ನಾಂನ ವಿನ್ಫಾಸ್ಟ್ ಕಂಪನಿಯ ಈ ಲಿಮೋ ಗ್ರೀನ್ ಎಲೆಕ್ಟ್ರಿಕ್ MPV, BYD eMax7 ಮತ್ತು ಕಿಯಾ ಕ್ಯಾರೆನ್ಸ್ ಕ್ಲೇವಿಸ್ EVಗೆ ಸ್ಪರ್ಧೆ ನೀಡಲಿದೆ. ಭಾರತಕ್ಕೆ ಬರುವ ಮಾಡೆಲ್ 60.13kWh ಬ್ಯಾಟರಿ ಪ್ಯಾಕ್ ಹೊಂದಿರಲಿದೆ.<img><p>ವಿನ್ಫಾಸ್ಟ್ ಕಾರು ಫ್ರಂಟ್-ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇದು 201bhp ಪವರ್ ಮತ್ತು 280Nm ಟಾರ್ಕ್ ಉತ್ಪಾದಿಸುತ್ತದೆ. 80kW DC ಫಾಸ್ಟ್ ಚಾರ್ಜರ್ ಬಳಸಿ, ಕೇವಲ 30 ನಿಮಿಷಗಳಲ್ಲಿ ಬ್ಯಾಟರಿಯನ್ನು 10% ರಿಂದ 70% ವರೆಗೆ ಚಾರ್ಜ್ ಮಾಡಬಹುದು. ಒಂದು ಪೂರ್ಣ ಚಾರ್ಜ್ನಲ್ಲಿ ಸುಮಾರು 450 ಕಿ.ಮೀ ಪ್ರಯಾಣಿಸಬಹುದು. ಇದರ ಬೆಲೆ 18 ಲಕ್ಷ ರೂ.ಗಳಿಂದ ಆರಂಭವಾಗುವ ನಿರೀಕ್ಷೆಯಿದೆ.</p><img><p>ಎರಡನೆಯದಾಗಿ, ನಿಸ್ಸಾನ್ ಗ್ರಾವಿಟೇಟ್ ಕಾರು ಕೂಡ ಬಿಡುಗಡೆಯಾಗಲಿದೆ. ಈ ಹೊಸ ಮಾಡೆಲ್ V-ಮೋಷನ್ ಫ್ರಂಟ್ ಗ್ರಿಲ್, ಸ್ಪೋರ್ಟಿ ಬಂಪರ್, ಬಾನೆಟ್ ಮೇಲೆ ‘ಗ್ರಾವಿಟ್’ ಬ್ಯಾಡ್ಜ್, ಡ್ಯುಯಲ್-ಸ್ಟ್ರಿಪ್ LED DRL ಹೆಡ್ಲ್ಯಾಂಪ್ಗಳು ಮತ್ತು ಹೊಸ ಅಲಾಯ್ ವೀಲ್ಗಳನ್ನು ಹೊಂದಿದೆ. ಇದರ ಒಳಭಾಗ ಸಂಪೂರ್ಣ ಕಪ್ಪು ಬಣ್ಣದಲ್ಲಿದ್ದು, ಡ್ಯಾಶ್ಬೋರ್ಡ್ನಲ್ಲಿ ಕ್ರೋಮ್ ಆಕ್ಸೆಂಟ್ಗಳಿವೆ. ಈ ಹೊಸ ನಿಸ್ಸಾನ್ ಫ್ಯಾಮಿಲಿ ಕಾರ್ 1.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72 bhp ಪವರ್ ಮತ್ತು 96 Nm ಟಾರ್ಕ್ ನೀಡುತ್ತದೆ. ಇದರ ಬೆಲೆ 7 ಲಕ್ಷ ರೂ.ಗಳಿಂದ ಆರಂಭವಾಗಬಹುದು.</p><img><p>2026ರ ಜನವರಿಯಲ್ಲಿ ಭಾರತದಲ್ಲಿ ಕಾರು ಮಾರಾಟ ಏರಿಕೆಯಾಗಿದೆ. 2025ರ ಜನವರಿಗೆ ಹೋಲಿಸಿದರ ಶೇಕಡಾ 7ರಷ್ಟು ಕಾರು ಮಾರಾಟದಲ್ಲಿ ಏರಿಕೆ ಕಂಡಿದೆ. ಫೆಬ್ರವರಿಯಲ್ಲೂ ಕಾರು ಮಾರಾಟದಲ್ಲಿ ಏರಿಕೆ ನಿರೀಕ್ಷಿಸಲಾಗಿದೆ. </p>
Source link
ಒಂದೇ ಚಾರ್ಜ್ಗೆ 450 ಕಿ.ಮಿ ಮೈಲೇಜ್, ಅತೀ ಕಡಿಮೆ ಬೆಲೆ ಕಾರು ಭಾರತದಲ್ಲಿ ಶೀಘ್ರದಲ್ಲೇ ಲಾಂಚ್