ನವದೆಹಲಿ, ನವೆಂಬರ್ 16: ಚಲಿಸುತ್ತಿರುವ ಆಟೋದ ಹಿಂಭಾಗದಲ್ಲಿ ಯುವಕನೊಬ್ಬ ಅಪಾಯಕಾರಿ ಸ್ಟಂಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆಟೋ ಒಳಗಿರುವ ವ್ಯಕ್ತಿ ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ಅದರಲ್ಲಿದೆ. ಆಟೋದೊಳಗೆ ಯುವತಿಯಿದ್ದು ಆಕೆಯನ್ನು ರಕ್ಷಿಸಲು ಒಬ್ಬ ವ್ಯಕ್ತಿ ಇಷ್ಟು ಕಷ್ಟ ಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಆದರೆ ಅದರ ಅಸಲಿಯತ್ತೇ ಬೇರೆ, ಇದು ನಿಜವಾದ ಘಟನೆಯಲ್ಲ ಬದಲಾಗಿ ಶಾರ್ಟ್ ಫಿಲ್ಮ್ ಎಂದು ಕಾಣಿಸುತ್ತದೆ. ನಿಜವಾಗಿಯೂ ಅಂಥಾ ಯಾವುದೇ ಘಟನೆಯೂ ನಡೆದಿಲ್ಲ. ಯೂಟ್ಯೂಬ್ ಅಥವಾ ಟಿಕ್‌ಟಾಕ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ವೀಕ್ಷಣೆಗಳು ಮತ್ತು ಚಂದಾದಾರರನ್ನು ಆಕರ್ಷಿಸುವ ನಿರ್ಮಾಣ ತಂಡಗಳು ಈ ರೀತಿಯ ಕಿರುಚಿತ್ರಗಳನ್ನು ಮಾಡುತ್ತಿವೆ. ವೈಶಾಲಿ ಮಿಶ್ರಾ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ