ಬೆಂಗಳೂರು, ಜ.20: ಬೆಂಗಳೂರಿನ ಬಗ್ಗೆ ಕೆಲವರು ದೂರುತ್ತಾರೆ, ಇನ್ನು ಕೆಲವರು ಮೆಚ್ಚಿಕೊಳ್ಳುತ್ತಾರೆ. ಸಿಲಿಕಾನ್ ಸಿಟಿಯಲ್ಲಿ ಎಲ್ಲವೂ ಸಿಗುತ್ತದೆ. ಎಲ್ಲದಕ್ಕೂ ಅವಕಾಶವಿದೆ. ಅದಕ್ಕೆ ಅನೇಕರಿಗೆ ಇಷ್ಟ, ಇನ್ನು ಕೆಲವೊಮ್ಮೆ ಕೊಲೆ, ದರೋಡೆ, ಅತ್ಯಾಚಾರ, ಬೆಚ್ಚಿ ಬೀಳಿಸುವ ಘಟನೆಗಳು, ಜೊತೆಗೆ ಹೆಚ್ಚಿನ ಜನರಿಗೆ ತೊಂದರೆ ಆಗಿರುವುದು ಜನರಿಗೆ ಟ್ರಾಪಿಕ್, ಈ ಕಾರಣಗಳಿಂದ ಬೆಂಗಳೂರು ಅಪಾಯ ಎಂದು ಕೆಲವರಿಗೆ ಅನ್ನಿಸುತ್ತದೆ. ಉಳಿದಂತೆ ಬೆಂಗಳೂರಿನಲ್ಲಿ ಎಲ್ಲವೂ ಉತ್ತಮವಾಗಿದೆ. ಅದರಲ್ಲೂ ಆಹಾರ ವಿಚಾರದಲ್ಲಿ (ಬೆಂಗಳೂರು ಆಹಾರ) ಒಂದು ಕೈ ಹೆಚ್ಚು, ಇಲ್ಲಿ ಎಲ್ಲಿಲ್ಲದ, ಎಲ್ಲ ಬಗೆಯ ಆಹಾರಗಳು ಸಿಗುತ್ತವೆ. ಈಗ ಜಪಾನ್ ನ ವ್ಯಕ್ತಿಗೆ ಆಹಾರದಿಂದ ಬೆಂಗಳೂರು ತುಂಬಾ ಇಷ್ಟವಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಜಪಾನಿನ ಕಂಟೆಂಟ್ ಕ್ರಿಯೇಟರ್ ಒಬ್ಬರು ಮೊದಲ ಬಾರಿಗೆ ಭೇಟಿ ನೀಡಿದರು. ಇವರು ತಮಗೆ ಇಷ್ಟವಾದ ವಸ್ತುಗಳನ್ನು ಖರೀದಿಸುವ ಬದಲು, ತಪ್ಪಿ ದಕ್ಷಿಣ ಭಾರತದ ಆಹಾರ ಆರ್ಡರ್. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಶೋ ಟೇಕಿ ಎಂಬ ಕಾಂಟೆಂಟ್ ಕ್ರಿಯೇಟರ್ ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸಸ್ಯಾಹಾರಿ ಉಪಹಾರ ಗೃಹಕ್ಕೆ ನಾನು ಮೊದಲ ಬಾರಿಗೆ ಭೇಟಿ ನೀಡಿದ್ದೇನೆ. ಇಲ್ಲಿ ನಾನು ನನಗೆ ಇಷ್ಟವಾದ ಆಹಾರ ಆರ್ಡರ್ ಮಾಡುವ ಬದಲು, ಹೊಸದಾಗಿ ಏನಿದೆ ಎಂದು ಅಲ್ಲಿನ ಸಿಬ್ಬಂದಿಯನ್ನು ಕೇಳಿದ್ದೇನೆ. ಅದಕ್ಕೆ ಅವರು ಕರ್ನಾಟಕ ಶೈಲಿಯ ಮುದ್ದೆ ಊಟ ಕೊಟ್ಟಿದ್ದಾರೆ. ವರ್ಣರಂಜಿತ, ಸಾಂಪ್ರದಾಯಿಕ ಖಾದ್ಯಗಳು, ಸಾದಾ ಅನ್ನ, ರಾಗಿ ಮುದ್ದೆ, ಮಸಾಲೆ ವಡೆ, ಪರಿಮಳಯುಕ್ತ ಸಾಂಬಾರ್, ಮೆಣಸಿನಕಾಯಿ ರಸಂ, ಕೋಸಂಬರಿ, ಉಪ್ಪಿನಕಾಯಿ, ಮೊಸರು ಮತ್ತು ಮೆಣಸಿನಕಾಯಿ ಪ್ರದರ್ಶನ. ಕೊನೆಗೆ ಒಂದು ಕಪ್ ಫಿಲ್ಟರ್ ಕಾಫಿ ಕುಡಿದು ಊಟದ ಗಮ್ಮತ್ತನ್ನು ಮುಗಿಸಿದ್ದೇನೆ ಎಂದು ಹೇಳಿದ್ದಾರೆ. ಊಟ ಎಲ್ಲ ಮುಗಿಸಿದ ನಂತರ ಬಿಲ್ ನೋಡಿ ಅಚ್ಚರಿಗೊಂಡಿದ್ದಾರೆ. ಕೇವಲ 200 ರೂ. ಆಗಿದೆ ಎಂದು ಹೇಳಿದ್ದಾರೆ. ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಸಸ್ಯಾಹಾರಿ ಆಹಾರವನ್ನು ಕಡಿಮೆ ಸೇವಿಸುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಗ್ರಾಮೀಣ ಮಹಿಳೆಯರಿಗೆ ಬಿಗ್ ಶಾಕ್: ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗುತ್ತಿದೆ
ಇಲ್ಲಿದೆ ನೋಡಿ ವೈರಲ್ ಪೋಸ್ಟ್:
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ನೀವು ಸಾಂಪ್ರದಾಯಿಕ ತಿಂಡಿ ಕೇಳಿದ್ದೀರಿ, ಅದಕ್ಕೆ ಈ ಮಾಹಿತಿ ನೀಡಿದೆ. ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರು. ಇತರರು ತುಂಬಾ ಯೋಗ್ಯ ಸ್ಥಳದಲ್ಲಿ ಊಟ ಮಾಡಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ. ಇಲ್ಲಿ ಎಲ್ಲರೂ ಅಕ್ಷರಶಃ ಇಂಗ್ಲಿಷ್ ಮಾತನಾಡುತ್ತಾರೆ. ಅವರಿಗೆ ಏನು ಬೇಕಾದರೂ ಕೇಳಿ ನಿರಾಳರಾಗಿರಿ. ಅವರು ಕೇಳಲು ಮತ್ತು ಸಹಾಯ ಮಾಡಲು ಸಿದ್ಧ ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವು ಇನ್ನೊಮ್ಮೆ ಮೇಘನಾ ಬಿರಿಯಾನಿ ಪ್ರಯತ್ನಿಸಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ