ಪೆಂಗ್ವಿನ್ 70 ಕಿಮೀ ನಡೆದು ಹೋಗಿದ್ದೇಕೆ? ಇದರ ಹಿಂದಿನ ಅಸಲಿ ಕಥೆ ಇಲ್ಲಿದೆ

ಪೆಂಗ್ವಿನ್ 70 ಕಿಮೀ ನಡೆದು ಹೋಗಿದ್ದೇಕೆ? ಇದರ ಹಿಂದಿನ ಅಸಲಿ ಕಥೆ ಇಲ್ಲಿದೆ


ಇನ್ಸ್ಟಾಗ್ರಾಮ್ (Instagram) ರೀಲ್ಸ್ ಓಪನ್ ಮಾಡಿದರೆ ಸಾಕು ಎಲ್ಲ ಕಡೆ ಒಂಟಿ ಪೆಂಗ್ವಿನ್ ಕಥೆ. ಒಂದು ಪೆಂಗ್ವಿನ್ ಒಂಟಿಯಾಗಿ ಪರ್ವತದ ಕಡೆ ನಡೆದುಕೊಂಡು ಹೋಗುತ್ತಿದೆ. ವಿಡಿಯೋ ನೋಡಿ ತುಂಬಾನೇ ಮರುಗಿದ್ದರು. ಇನ್ನೂ ಕೆಲವರು ಮೀಮ್ ಮಾಡಿದರು. ‘ಈ ಪೆಂಗ್ವಿನ್‌ಗೆ ಏನಾಗಿದೆ’ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಆದರೆ, ಈ ವಿಡಿಯೋದ ಅಸಲಿ ಕಥೆಯೇ ಬೇರೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಈ ಒಂಟಿ ಪೆಂಗ್ವಿನ್ ಸಮುದ್ರದ ಕಡೆಗೆ ಹಿಂಡಿನ ಹಿಂದೆ ಹೋಗದೆ ಒಂಟಿಯಾಗಿ ತೆರಳಿದೆ. ಹಿಂಡಿಯಿಂದ ಬೇರ್ಪಟ್ಟ ಸ್ಥಳದಿಂದ 70 ಕಿಮೀದಿಂದ ದೂರದಲ್ಲಿರೋ ಪರ್ವತದ ಬಳಿ ಸಾಗಿದೆ. ಇದು ಡಾಕ್ಯುಮೆಂಟರಿಯೊಂದರ ದೃಶ್ಯ. ವೆನಾ ಹೆಜೋಗ್ ನಿರ್ದೇಶನದ ‘ಎನ್ ಕೌಂಟರ್ ಎಟ್ ಡಿ ಎಂಡ್ ಆಫ್ ದಿ ವರ್ಲ್ಡ್’ ಸಾಕ್ಷ್ಯ ಚಿತ್ರದ ದೃಶ್ಯದ ಭಾಗ ಇದು. ಬರೋಬ್ಬರಿ 19 ವರ್ಷಗಳ ಬಳಿಕ ಈ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ಯೂಟ್ಯೂಬ್ಗೆ ಅಪ್ಲೋಡ್ ಆಗಿದ್ದು 2010 ರಲ್ಲಿ. ‘ಖಿನ್ನತೆಗೆ ಒಳಗಾದ ಪೆಂಗ್ವಿನ್’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಶೇರ್ ಮಾಡಲಾಗಿದೆ. ಆ ಸಂದರ್ಭದಲ್ಲಿ ಇದು ಚರ್ಚೆಗೆ ಕಾರಣವಾಗಿದೆ. 2014ರಲ್ಲಿ ಈ ವಿಡಿಯೋ ಮತ್ತೊಮ್ಮೆ ಹರಿದಾಡಿದೆ.

ಅಡೆಲೀ ಪೆಂಗ್ವಿನ್‌ಗಳು ಸಾಮಾನ್ಯವಾಗಿ ತಮ್ಮ ಹುಟ್ಟಿದ ಸ್ಥಳ ಮತ್ತು ಆಹಾರ ಸಿಗೋ ಸಮುದ್ರದಂಚಿನಲ್ಲೇ ಇರುತ್ತವೆ. ಆದರೆ, ಏನೂ ಇಲ್ಲದ ಪರ್ವತದ ಕಡೆ ನಡೆದು ಹೋಗೋದು ಅಪರೂಪ.

ಈ ಬಗ್ಗೆ ಪೆಂಗ್ವಿನ್ ಬಗ್ಗೆ ಅಧ್ಯಯನ ಮಾಡೋರು ಹೇಳೋದೇ ಬೇರೆ. ಪೆಂಗ್ವಿನ್ ಕೆಲವೊಮ್ಮೆ ಬಂಡೆಗೆ ಡಿಕ್ಕಿ ಹೊಡೆದುಕೊಳ್ಳುವಂತೆ. ಕೆಲವೊಮ್ಮೆ ದಿಕ್ಕು ತಪ್ಪಿದಾಗ ಗೊಂದಲಕ್ಕೆ ಒಳಗಾಗಿ ಈ ರೀತಿ ನಡೆಯುತ್ತವೆ. ಆಗ ಅವರು ಲೆಕ್ಕವಿಲ್ಲದಷ್ಟು ದೂರ ನಡೆದು ಬಿಟ್ಟೆ. ಅವರನ್ನು ಮತ್ತೆ ಗುಂಪಿಗೆ ತಂದು ಬಿಟ್ಟರೂ ಅದು ಮತ್ತೆ ಸಾಗೋದು ಆ ಪರ್ವತದ ಕಡೆಗೆ. ನರ ಸಂಬಂಧಿ ಕಾಯಿಲೆ ಇರಬಹುದು ಎಂದು ಕೆಲವರು ಹೇಳುತ್ತಾರೆ. ಯುವ ಪೆಂಗ್ವಿನ್‌ಗಳು ಹೊಸದರ ಹುಡುಕಾಟದಲ್ಲಿ ಈ ರೀತಿ ಮಾಡುತ್ತಾರೆ ಎಂಬ ಮಾತೂ ಇದೆ.

ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿರೋದು ಆರಾಧ್ಯಾ ಖಾತೆಯಾ? ಐಶ್ವರ್ಯಾ ಸ್ಪಷ್ಟನೆ

ಪರಿಣಾಮಕಾರಿ ದೃಷ್ಟಿಕೋನದಿಂದ ಇದು ತುಂಬಾ ಚಿಂತಿಸೋ ವಿಷಯವಲ್ಲ. ಅನೇಕ ಪ್ರಾಣಿ ಪ್ರಭೇದಗಳಲ್ಲಿ ಈ ರೀತಿಯ ನಡವಳಿಕೆ ಇರುತ್ತದೆ ಎಂಬುದು ವನ್ಯಜೀವಿ ಸಂಶೋಧಕರ ಅಭಿಪ್ರಾಯ. ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಮೀಮ್ ರೂಪದಲ್ಲಿ ಬಳಸಲಾಗುತ್ತಿದೆ. ಇದನ್ನು ಇತ್ತೀಚಿಗೆ ಜನರು ಬಳಲುತ್ತಿರುವ ಖಿನ್ನತೆಗೆ ಹಾಗೂ ಒಂಟಿತನಕ್ಕೆ ಹೋಲಿಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 8:51 am, ಶನಿ, 24 ಜನವರಿ 26





Source link

Leave a Reply

Your email address will not be published. Required fields are marked *