ಹುಚ್ಚಾಟ ಅತಿಯಾದ್ರೆ ಪ್ರಾಣವೇ ಹೋಗುವುದು: ಮಾಲ್​​ನ ರೇಲಿಂಗ್ ಬಳಿ ತಮಾಷೆ ಮಾಡಲು ಹೋಗಿ ಕೆಳಗೆ ಬಿದ್ದ ಯುವಕರು

ಹುಚ್ಚಾಟ ಅತಿಯಾದ್ರೆ ಪ್ರಾಣವೇ ಹೋಗುವುದು: ಮಾಲ್​​ನ ರೇಲಿಂಗ್ ಬಳಿ ತಮಾಷೆ ಮಾಡಲು ಹೋಗಿ ಕೆಳಗೆ ಬಿದ್ದ ಯುವಕರು


ಹುಚ್ಚಾಟ ಅತಿಯಾದರೆ ಪ್ರಾಣವೇ ಹೋಗುವುದು: ಮಾಲ್ನ ರೇಲಿಂಗ್ ಬಳಿ ತಮಾಷೆ ಮಾಡಿ ಕೆಳಗೆ ಬಿದ್ದ ಯುವಕರು

ಶಾಪಿಂಗ್ ಮಾಲ್ನ ಕಾರಿಡಾರ್‌ನಲ್ಲಿ ಮೋಜು ಮಾಡಲು ಹೋಗಿ ಇಬ್ಬರು ಸ್ನೇಹಿತರು ತಮ್ಮ ಪ್ರಾಣವನ್ನೇ ಕಳೆದುಕೊಂಡ ದಾರುಣ ಘಟನೆ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ವೈರಲ್ ವಿಡಿಯೋದ ಪ್ರಕಾರ, ಇಬ್ಬರು ಸ್ನೇಹಿತರು ಮಾಲ್ನ ಮೇಲಿನ ಅಂತಸ್ತಿನ ಕಾರಿಡಾರ್ನಲ್ಲಿ ನಡೆದು ಹೋಗುತ್ತಿದ್ದಾರೆ. ಈ ವೇಳೆ ಒಬ್ಬ ಸ್ನೇಹಿತ ಮತ್ತೊಬ್ಬನ ಹೆಗಲ ಮೇಲೆ ಹತ್ತಿ ಕುಳಿತುಕೊಳ್ಳುತ್ತಾನೆ. ಈ ರೀತಿ ಮೋಜು ಮಾಡುತ್ತಾ ಸಾಗುವಾಗ, ಕಾರಿಡಾರ್‌ನ ರೇಲಿಂಗ್ (ರೈಲಿಂಗ್) ಬಳಿ ಹೋದಾಗ ಮೇಲೆ ಕುಳಿತಿದ್ದ ವ್ಯಕ್ತಿ ಆಯತಪ್ಪಿ ರೇಲಿಂಗ್ ಮೇಲೆ ಬೀಳುತ್ತಾನೆ. ಅವನನ್ನು ಹಿಡಿಯಲು ಹೋದ ಕೆಳಗಿದ್ದ ಸ್ನೇಹಿತನೂ ನಿಯಂತ್ರಣ ಕಳೆದುಕೊಂಡು, ಇಬ್ಬರೂ ರೇಲಿಂಗ್‌ನಿಂದ ನೇರವಾಗಿ ಮಾಲ್‌ನ ನೆಲ ಅಂತಸ್ತಿಗೆ ಬಿದ್ದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *