Headlines

Bigg Boss 12 ಗೆಲ್ಲೋದು ಇವರೇ! ಶನೈಶ್ಚರ ದೇವ ಹೀಗೆ ಪ್ರಸಾದ ಕೊಟ್ರಾ? ಹಲ್​ಚಲ್​ ಸೃಷ್ಟಿಸ್ತಿದೆ ವಿಡಿಯೊ!

Bigg Boss 12 ಗೆಲ್ಲೋದು ಇವರೇ! ಶನೈಶ್ಚರ ದೇವ ಹೀಗೆ ಪ್ರಸಾದ ಕೊಟ್ರಾ? ಹಲ್​ಚಲ್​ ಸೃಷ್ಟಿಸ್ತಿದೆ ವಿಡಿಯೊ!

Bigg Boss 12 ಗೆಲ್ಲೋದು ಇವರೇ! ಶನೈಶ್ಚರ ದೇವ ಹೀಗೆ ಪ್ರಸಾದ ಕೊಟ್ರಾ? ಹಲ್​ಚಲ್​ ಸೃಷ್ಟಿಸ್ತಿದೆ ವಿಡಿಯೊ!
ಬಿಗ್​ಬಾಸ್​ 12ರ ಫೈನಲ್​ ಹತ್ತಿರವಾಗುತ್ತಿದ್ದಂತೆ, ಗಿಲ್ಲಿ ನಟನ ಗೆಲುವಿನ ಬಗ್ಗೆ ಚರ್ಚೆ ಜೋರಾಗಿದೆ. ಈ ನಡುವೆ, ಶನೈಶ್ಚರ ದೇಗುಲದಲ್ಲಿ ಗಿಲ್ಲಿ ನಟನ ಗೆಲುವಿಗೆ ದೇವರೇ ಪ್ರಸಾದ ನೀಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದ್ದು, ಇದರ ಅಸಲಿಯತ್ತಿನ ಬಗ್ಗೆ ಅನುಮಾನಗಳು ಮೂಡಿವೆ.
ಬಿಗ್​ಬಾಸ್​ 12 (Bigg Boss 12) ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಯಾರು ಗೆಲ್ಲುತ್ತಾರೆ ಎನ್ನುವ ಬಗ್ಗೆ ಲಕ್ಷಾಂತರ ಬಿಗ್​ಬಾಸ್​ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈ ಬಾರಿ ಮಹಿಳೆಯೊಬ್ಬಳು ಬಿಗ್​ಬಾಸ್​ ಗೆಲ್ಲುವುದು ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದರೆ, ಎಲ್ಲರ ಬಾಯಲ್ಲೂ ಇರುವ ಹೆಸರು ಗಿಲ್ಲಿ ನಟ (Bigg Boss Gilli Nata) ವಿನ್ನರ್​ ಎನ್ನುವುದು. ಇವೆಲ್ಲಕ್ಕೂ ಶೀಘ್ರವೇ ತೆರೆ ಬೀಳಲಿದೆ.

ಇದೇ ವೇಳೆ ಗಿಲ್ಲಿ ನಟನಿಗಾಗಿ ಲಕ್ಷಾಂತರ ಫ್ಯಾನ್ಸ್​ ಪೂಜೆ ಸಲ್ಲಿಸುತ್ತಿದ್ದರೆ, ಇಲ್ಲೊಂದು ಕುತೂಹಲದ ವಿಡಿಯೋ ವೈರಲ್​ ಆಗಿದೆ. ತೀರ್ಥ ಸಿಕೆಎಂ ಎನ್ನುವವರು ಇದನ್ನು ಶೇರ್​ ಮಾಡಿಕೊಂಡಿದ್ದಾರೆ.

ಶ್ರೀ ಶನಿ ಕ್ಷೇತ್ರ ಕೋಟಹಳ್ಳಿ ಶನೈಶ್ಚರ ದೇಗುಲದಲ್ಲಿ ಗಿಲ್ಲಿ ನಟನಿಗಾಗಿ ಪ್ರಾರ್ಥನೆ ಸಲ್ಲಿಸುವಾಗ, ದೇವರು ಗಿಲ್ಲಿ ನಟನೇ ವಿನ್​ ಆಗುವುದು ಎಂದು ಪ್ರಸಾದ ಕೊಟ್ಟಿರುವುದಾಗಿ ಈ ವಿಡಿಯೋದಲ್ಲಿ ಹೇಳಲಾಗುತ್ತಿದೆ.

ಈ ವೈರಲ್​ ವಿಡಿಯೋದಲ್ಲಿ ಶನೀಶ್ಚರನಿಗೆ ಹೂವನ್ನು ಹಾಕಲಾಗಿದೆ. ಇದು ಸಾಮಾನ್ಯವಾಗಿ ಪ್ರಸಾದ ಕೇಳುವಾಗ ಹಾಕುತ್ತಾರೆ. ಆಗ ಹಿನ್ನೆಲೆಯಲ್ಲಿ ಗಿಲ್ಲಿ ನಟನ ಬಗ್ಗೆ ಪ್ರಶ್ನಿಸಿರುವಂತೆ ತೋರಿಸಲಾಗಿದೆ. ಆದರೆ ಅಚ್ಚರಿ ಎನ್ನುವಂತೆ ದೇವರ ಪ್ರಸಾದ ಆಗಿದೆ.

ಅರ್ಥಾತ್​ ದೇವರ ಬಲಭಾಗದಿಂದ ಹೂವು ಬಿದ್ದರೆ ಅಂದುಕೊಂಡದ್ದು ಆಗುತ್ತದೆ ಎನ್ನುವ ನಂಬಿಕೆ ಇದೆ. ಅದರಂತೆ ಇದರಲ್ಲಿ ತೋರಿಸಲಾಗಿದೆ. ಆದರೆ ಈ ವಿಡಿಯೋದ ಬಗ್ಗೆ ಹಲವಾರು ರೀತಿಯ ಅನುಮಾನಗಳು ಕೂಡ ಇದೇ ವೇಳೆ ಹುಟ್ಟಿಕೊಂಡಿವೆ. ಹೇಳಿ ಕೇಳಿ ಇದು ಎಐ ಯುಗ. ನಿಜವಾಗಿದ್ದರೂ ಎಐ ಎಂದು, ಎಐ ಆಗಿದ್ದರೂ ನಿಜವೆಂದು ನಂಬುವ ಕಾಲ ಇದು.

ವಿಡಿಯೋ ವೈರಲ್​ ಆಗಬೇಕು ಎನ್ನುವ ಕಾರಣಕ್ಕೆ ಸದ್ಯ ಹಲವಾರು ಯುಟ್ಯೂಬರ್​ಗಳು ಬಿಗ್​ಬಾಸ್​ ಅನ್ನು ತಮ್ಮ ಮಾಧ್ಯಮ ಮಾಡಿಕೊಳ್ಳುತ್ತಿದ್ದಾರೆ. ಕಂಟೆಂಟ್​ಗಳನ್ನು ಹಾಕುತ್ತಿದ್ದಾರೆ. ಅದರಲ್ಲಿಯೂ ಗಿಲ್ಲಿ ನಟನ ಹವಾ ಜೋರಾಗಿಯೇ ಇದೆ. ಆದ್ದರಿಂದ ಈ ವಿಡಿಯೋದ ಅಸಲಿಯತ್ತು ಏನು ಎನ್ನುವುದು ತಿಳಿಯಬೇಕಿದೆ ಅಷ್ಟೇ.

Source link

Leave a Reply

Your email address will not be published. Required fields are marked *