ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ: ನಾನು ಬಡವ ಕಣಮ್ಮ

ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ: ನಾನು ಬಡವ ಕಣಮ್ಮ


ಮಹಿಳೆಯೊಬ್ಬಳು ತಾನು ಕೇಳಿದ 12 ಸಾವಿರ ರೂ. ವಸ್ತುವನ್ನು ಪತಿ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹಿಳೆ 12 ಸಾವಿರ ರೂ. ಬಟ್ಟೆ ಕೊಡಬೇಕು ಎಂದು ಅಂಗಡಿಯಲ್ಲಿ ಒಂದು ಗಂಟೆ ಕೂತಿದ್ದಾಳೆ, ಆದ್ರೂ ಗಂಡ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಗಂಡ ನಿರಾಕರಿಸಿದ್ದಾನೆ. ಈ ಕಾರಣಕ್ಕೆ ಚಿಕ್ಕ ಮಕ್ಕಳಂತೆ ಕಣ್ಣೀರು ಹಾಕಿದ್ದಾಳೆ. ಮಾಧ್ಯಮ ವರ್ಗದಲ್ಲಿ ಇಂತಹ ಆಸೆಗಳು ಸಹಜ, ಆದರೆ ಇಂತಹ ಆಸೆಗಳನ್ನು ನಿರೀಕ್ಷಿಸುವ ಮುನ್ನ ಮನೆಯ ಗಂಡಸಿನ ಪರಿಸ್ಥಿತಿ ನೋಡಬೇಕು ಎಂದು ನೆಟ್ಟಿಗರು ಹೇಳಿದ್ದಾರೆ. ವಿಡಿಯೋದಲ್ಲಿ ಪುಟ್ಟ ಮಗು ತಾಯಿಯ ಕಣ್ಣೀರನ್ನು ಒರೆಸಿ ಸಮಾಧಾನ ಮಾಡುವುದನ್ನು ನೋಡಬಹುದು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಒಬ್ಬಳೇ ಮನೆಯಲ್ಲಿ ಕೆಲಸ ಮಾಡುವ ಗೃಹಿಣಿಗೆ ತನ್ನ ಆಸೆಗಳನ್ನು ಸ್ವೀಕರಿಸಲು ಪತಿಯ ಮೇಲೆಯೇ ಅವಲಂಬಿತಳಾಗಬೇಕಾದ ಅಸಹಾಯಕತೆ ಇದು ಒಂದು ಕಡೆ ವಾದವಾಗಿದೆ. ಇನ್ನೊಂದು ಕಡೆ ಇಂದಿನ ದಿನಗಳಲ್ಲಿ ₹12,000 ಎಂಬುದು ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ದೊಡ್ಡ ಮೊತ್ತ. ಕೇವಲ ಒಂದು ವಸ್ತುವಿಗಾಗಿ ಇಷ್ಟು ಹಣ ಖರ್ಚು ಮಾಡುವುದು ಸರಿಯಲ್ಲ. ಹಣದ ಮೌಲ್ಯ ತಿಳಿಯದೆ ಕಣ್ಣೀರು ಹಾಕುವುದು ಸಣ್ಣ ಬುದ್ಧಿ ಎಂದು ಹೇಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *