ಐಪಿಎಲ್ ನಡುವೆ ‘ಧರುಂಧರ್ 2’ ನೋಡಿದ ವಿರಾಟ್ ಅನುಷ್ಕಾ
‘ಧುರಂಧರ್ 2’ (Dhurandhar 2) ಸಿನಿಮಾ ಬಾಕ್ಸಾಫೀಸ್ನಲ್ಲಿಒ ಬರೋಬ್ಬರಿ 1700 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದೀಗ ಧುರಂದರ್-2 ಚಿತ್ರವನ್ನ ಕ್ರಿಕೆಟ್ಗ ಜಗತ್ತಿನ ಸೂಪರ್ ಸ್ಟಾರ್ ವಿರಾಟ್ ಕೋಹ್ಲಿ ಹಾಗು ಪತ್ನಿ ಅನುಷ್ಕಾ ಶರ್ಮಾ ಕಣ್ತುಂಬಿಕೊಂಡಿದ್ದಾರೆ. ಸಿನಿಮಾ ನೋಡಿದ ವಿರಾಟ್ ದಂಪತಿ ಧರುಂದರ್2 ಬಗ್ಗೆ ಹಾಡಿ ಹೊಗಳಿದ್ದಾರೆ. ಇನ್ಸ್ಟಾಗ್ರಾಮ್ ಧುರಂದರ್-2 ಬಗ್ಗೆ ಬರೆದುಕೊಂಡಿರೋ ಕೋಹ್ಲಿ ‘ನಾನು ಧುರಂಧರ್ 2’ ಸಿನಿಮಾ ವೀಕ್ಷಿಸಿದೆ. ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ.ಈ ಸಿನಿಮಾ ನನ್ನಲ್ಲಿರುವ ಎಲ್ಲಾ ರೀತಿಯ ಭಾವನೆಗಳನ್ನು ಹೊರತಂದಿತು’ ಎಂದಿದ್ದಾರೆ.