Headlines

‘ಅದ್ಭುತ ಅನುಭವ’; ‘ಧರುಂಧರ್ 2’ ನೋಡಿ ವಿಮರ್ಶೆ ತಿಳಿಸಿದ ವಿರಾಟ್ ಕೊಹ್ಲಿ

‘ಅದ್ಭುತ ಅನುಭವ’; ‘ಧರುಂಧರ್ 2’ ನೋಡಿ ವಿಮರ್ಶೆ ತಿಳಿಸಿದ ವಿರಾಟ್ ಕೊಹ್ಲಿ


'ಅದ್ಭುತ ಅನುಭವ'; 'ಧರುಂಧರ್ 2' ನೋಡಿ ವಿಮರ್ಶೆ ತಿಳಿಸಿದ ವಿರಾಟ್ ಕೊಹ್ಲಿ

‘ಧುರಂಧರ 2’ ಚಿತ್ರ (ಧುರನಧರ್ ೨) ಎಲ್ಲರೂ ವೀಕ್ಷಿಸಿ ತಮ್ಮ ವಿಮರ್ಶೆಯನ್ನು ತಿಳಿಸುತ್ತಿದ್ದಾರೆ. ಆದಿತ್ಯ ಧಾರ್ ಅವರ ನಿರ್ದೇಶನ ಹಾಗೂ ರಣವೀರ್ ಸಿಂಗ್ ಅವರ ನಟನೆಯನ್ನು ಹೊಗಳುತ್ತಿದ್ದಾರೆ. ಈಗ ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ‘ಧುರಂಧರ 2’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಅವರು ಈ ಚಿತ್ರವನ್ನು ಹಾಡಿಹೊಗಳಿದ್ದಾರೆ. ಇತ್ತೀಚಿಗಿನ ವರ್ಷಗಳಲ್ಲಿ ನೋಡಿದ ಅದ್ಭುತ ಸಿನಿಮಾ ಇದು ಮೆಚ್ಚಿದೆ.

ಇನ್ಸ್ಟಾಗ್ರಾಮ್ ಸ್ಟೇಟಸ್ ಅಲ್ಲಿ ಕೊಹ್ಲಿ ಅವರ ಸಿನಿಮಾ ಬಗ್ಗೆ ವಿಮರ್ಶೆ ಬಂತು. ‘ನಾನು ಧುರಂಧರ 2′ ಸಿನಿಮಾ ನೋಡಿದೆ. ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ.ಈ ಸಿನಿಮಾ ನನ್ನಲ್ಲಿರುವ ಎಲ್ಲಾ ರೀತಿಯ ಭಾವನೆಗಳನ್ನು ಹೊರತಂದಿತು’ ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ: ‘ಎಲ್ಲೂ ಇಲ್ಲ ಅಂದ್ರೆ ಕೊನೆಗೆ ಸ್ಯಾಂಡಲ್ ವುಡ್ ನಲ್ಲಾದರೂ ಕೆಲಸ ಮಾಡಬಹುದು’; ವಿರಾಟ್ ಕೊಹ್ಲಿ

‘4 ಗಂಟೆಗಳ ಕಾಲ ನಾನು ಎಲ್ಲಿಯೂ ಬೇಸರ ಮಾಡಿಕೊಂಡಿಲ್ಲ. ಆದಿತ್ಯ ಧಾರ್ ಅವರೇ ನಿಮ್ಮ ಪ್ರತಿಭೆ ಮತ್ತು ನಿಶ್ಚಯವು ನೀವು ಸೃಷ್ಟಿಸಿದ್ದರಲ್ಲಿ ಪ್ರತಿಫಲಿಸುತ್ತದೆ. ನಿಮಗೆ ಹ್ಯಾಟ್ಸ್ ಆಫ್. ಎಲ್ಲಾ ನಟರು ತಮ್ಮ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ರಣವೀರ್ ಸಿಂಗ್ ಈ ಸಿನಿಮಾದಲ್ಲಿ ಬೇರೆ ಹಂತ ತಲುಪಿದ್ದೀರಿ. ನಿಮ್ಮ ಅಭಿನಯ ಅದ್ಭುತವಾಗಿತ್ತು. ತಕ್ಷಣ ವಾವ್’ ಎಂದು ಅವರು ಬರೆದಿದ್ದಾರೆ.

ವಿರಾಟ್ ಕೊಹ್ಲಿ ಅವರಿಗೆ ಇನ್ಸ್ಟಾಗ್ರಾಮ್ ಅಲ್ಲಿ 27 ಕೋಟಿಗೂ ಹೆಚ್ಚು ಹಿಂಬಾಲಕರು ಇದ್ದಾರೆ. ಅವರ ಸಿನಿಮಾ ನೋಡಿ ಒಂದಷ್ಟು ಮಂದಿ ಸಿನಿಮಾ ನೋಡಲು ತೆರಳಬಹುದು. ಇದರಿಂದ ಸಿನಿಮಾದ ಗಳಿಗೆ ಹೆಚ್ಚಲಿದೆ.
‘ಧುರಂಧರ 2’ ಸಿನಿಮಾ ಭಾರತದ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಿಂದಿ ಸಿನಿಮಾ ಒಂದು ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದು ಇದೇ ಮೊದಲು ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.





Source link

Leave a Reply

Your email address will not be published. Required fields are marked *