ಆಸ್ಟ್ರೇಲಿಯಾ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಟ್ವೀಟ್: ಹೊಸ ಚರ್ಚೆ ಶುರು

ಆಸ್ಟ್ರೇಲಿಯಾ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಟ್ವೀಟ್: ಹೊಸ ಚರ್ಚೆ ಶುರು


ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಿದೆ. ಈ ಸರಣಿಯ ಮೂಲಕ ವಿರಾಟ್ ಕೊಹ್ಲಿ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಂದರೆ ಕಿಂಗ್ ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ ಟೀಮ್ ಇಂಡಿಯಾ ಪರ ಒಂದೇ ಪಾಂಡು ಮ್ಯಾಚ್ ಆಡಿಲ್ಲ. ಇದೀಗ ಆಸೀಸ್ ಪಿಚ್ನಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವ ಕೊಹ್ಲಿ ಸರಣಿ ಆರಂಭಕ್ಕೂ ಮುನ್ನ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಅದು ಸಹ ನಿಗೂಢ ಅರ್ಥ ಹೊಂದಿರುವ ಟ್ವೀಟ್‌ನೊಂದಿಗೆ..!

ಸಾಮಾನ್ಯವಾಗಿ ವಿರಾಟ್ ಕೊಹ್ಲಿ ತಮ್ಮ ವೈಯುಕ್ತಿಕ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಿಲ್ಲ. ಅದರಲ್ಲೂ ಅಭಿಮಾನಿಗಳ ತಲೆಗೆ ಹುಳ ಬಿಡುವಂಥ ಟ್ವೀಟ್‌ಗಳಿಂದ ಕೊಂಚ ದೂರ. ಆದರೆ ಈ ಬಾರಿ ನೀಡಿರುವ ಟ್ವೀಟ್‌ವೊಂದು ಚರ್ಚೆಗೆ ಕಾರಣವಾಗಿದೆ.

ನೀವು ನಿಜವಾಗಲೂ ಸೋಲುವುದು ಯಾವಾಗ ಅಂದರೆ, ನೀವು ಬಿಟ್ಟು ಕೊಡಲು ನಿರ್ಧರಿಸಿದಾಗ… ಎಂಬರ್ಥದ ವಾಕ್ಯವನ್ನು ವಿರಾಟ್ ಕೊಹ್ಲಿ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇತ್ತ ಆಸ್ಟ್ರೇಲಿಯಾ ಸರಣಿಗೂ ಮುನ್ನ ಕೊಹ್ಲಿ ಹೀಗಂದಿರುವುದು ಯಾಕೆ ಎಂಬುದು ಈಗ ಅಭಿಮಾನಿಗಳ ಪ್ರಶ್ನೆ.

ಕೌಂಟರ್ ಕೊಟ್ರಾ ಕೊಹ್ಲಿ?

ಆಸ್ಟ್ರೇಲಿಯಾ ವಿರುದ್ಧದ ಸರಣಿಯು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಏಕದಿನ ಸರಣಿ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ ಅತ್ತ ವಿರಾಟ್ ಕೊಹ್ಲಿ ಮುಂಬರುವ ಏಕದಿನದಲ್ಲಿ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ.

ಇದಾಗ್ಯೂ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಬಗ್ಗೆ ಮಾತನಾಡಲು ಗೌತಮ್ ಗಂಭೀರ್ ನಿರಾಕರಿಸಿದ್ದರು. ಜೊತೆಗೆ ಇನ್ನೂ ಸಾಕಷ್ಟು ಸಮಯವಿದೆ, ಆಮೇಲೆ ನೋಡೋಣ ಎಂಬ ಮೂಲಕ ಉತ್ತರ ನೀಡಿದ್ದರು.

ಇತ್ತ ಗೌತಮ್ ಗಂಭೀರ್‌ಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮುಂದಿನ ಏಕದಿನದಲ್ಲಿ ಕಣಕ್ಕಿಳಿಯುವ ಗುರಿ ಹೊಂದಿರುವುದು ಗೊತ್ತಿದೆ. ಇದಾಗ್ಯೂ ಸ್ಪಷ್ಟ ಉತ್ತರ ನೀಡದೇ ನುಣುಚಿಕೊಂಡಿದೆ.

ಇದರ ಬೆನ್ನಲ್ಲೇ ಗೌತಮ್ ಗಂಭೀರ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಮುಂಬರುವ ಏಕದಿನ ಪಂದ್ಯದವರೆಗೆ ತಂಡದಲ್ಲಿ ಉಳಿಸಿಕೊಳ್ಳುವುದು ಅನುಮಾನ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಸುದ್ದಿಗಳ ಹರಿದಾಟದ ನಡುವೆ ಇದೀಗ ವಿರಾಟ್ ಕೊಹ್ಲಿ ಸೋಲೊಪ್ಪುದಿಲ್ಲ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ನೀವು ಬಿಟ್ಟು ಕೊಡಲು ನಿರ್ಧರಿಸಿದರೆ, ಅದುವೇ ನಿಜವಾದ ಸೋಲು ಎಂಬಾರ್ಥದಲ್ಲಿ ಟ್ವೀಟ್ ಮಾಡಿ ಇದೀಗ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಗೆ ಕೌಂಟರ್ ಕೊಟ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇದನ್ನೂ ಓದಿ: ರಾಕಿಂಗ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನು ಹಿಂದಿಕ್ಕಿದ ಅಫ್ಘಾನ್ ಬ್ಯಾಟರ್

ಒಟ್ಟಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ನಿಗೂಢತೆಯಿಂದ ಕೂಡಿದ ಟ್ವೀಟ್‌ನೊಂದಿಗೆ ಹೊಸ ಚರ್ಚೆ ಹುಟ್ಟುಹಾಕಿದ್ದು, ಈ ಮೂಲಕ ಸದ್ಯಕ್ಕಂತು ಕೆರಿಯರ್ ಅಂತಿಮವಾಗಿ ಸ್ಪಷ್ಟ ಉತ್ತರ ನೀಡಿದೆ.





Source link

Leave a Reply

Your email address will not be published. Required fields are marked *