Headlines

ವಿರೇಂದ್ರ ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ಯಾರು? ಅವರ ಬ್ಯುಸಿನೆಸ್ ಏನು ಗೊತ್ತಾ?

ವಿರೇಂದ್ರ ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ಯಾರು? ಅವರ ಬ್ಯುಸಿನೆಸ್ ಏನು ಗೊತ್ತಾ?



ವಿರೇಂದ್ರ ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ಯಾರು? ಅವರ ಬ್ಯುಸಿನೆಸ್ ಏನು ಗೊತ್ತಾ?
ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಪತ್ನಿ ಆರತಿ ಅಹ್ಲಾವತ್ ದೆಹಲಿ ಮೂಲದ ಯಶಸ್ವಿ ಉದ್ಯಮಿ. ಸೆಹ್ವಾಗ್ ಕ್ರಿಕೆಟ್ ಜಗತ್ತಿನಲ್ಲಿ ಎಷ್ಟು ಸಕ್ರಿಯರಾಗಿದ್ದರೋ, ಆರತಿ ಕಾರ್ಪೊರೇಟ್ ಜಗತ್ತಿನಲ್ಲಿ ಅಷ್ಟೇ ಸಕ್ರಿಯರಾಗಿದ್ದಾರೆ. ಅಷ್ಟಕ್ಕೂ ಅವರು ಯಾವ ಬ್ಯುಸಿನೆಸ್ ಮಾಡ್ತಾರೆ ಗೊತ್ತಾ?<img><p>ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವೀರೇಂದ್ರ ಸೆಹ್ವಾಗ್ ಅತ್ಯಂತ ಸ್ಫೋಟಕ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರು. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ 2000ನೇ ದಶಕದಲ್ಲಿ ಟೀಂ ಇಂಡಿಯಾಗೆ ಹಲವಾರು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಇತ್ತೀಚೆಗೆ ಅವರ ವೃತ್ತಿ ಜೀವನದಷ್ಟೇ ವೈಯಕ್ತಿಕ ಜೀವನವೂ ಸುದ್ದಿಯಲ್ಲಿದೆ. ಸೆಹ್ವಾಗ್ ದಂಪತಿ ಸದ್ಯ ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ, ಸೆಹ್ವಾಗ್ ಪತ್ನಿ ಯಾರು ಮತ್ತು ಅವರು ಏನು ಮಾಡುತ್ತಾರೆ ಎಂಬುದನ್ನು ತಿಳಿಯೋಣ.</p><img>ವೀರೇಂದ್ರ ಸೆಹ್ವಾಗ್ ತಮ್ಮ ಬಾಲ್ಯದ ಗೆಳತಿ ಆರತಿ ಅಹ್ಲಾವತ್ ಅವರನ್ನು ವಿವಾಹವಾದರು. ಇವರಿಬ್ಬರ ಮದುವೆ ಏಪ್ರಿಲ್ 22, 2004 ರಂದು ದಿವಂಗತ ಬಿಜೆಪಿ ನಾಯಕ ಹಾಗೂ ಅಂದಿನ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಮನೆಯಲ್ಲಿ ನಡೆಯಿತು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2007ರಲ್ಲಿ ಆರ್ಯವೀರ್ ಮತ್ತು 2010ರಲ್ಲಿ ವೇದಾಂತ್ ಜನಿಸಿದರು.<img>ಸೆಹ್ವಾಗ್ ಮತ್ತು ಆರತಿ ಅವರ ಸಂಬಂಧ ಮದುವೆಗೂ ಹಲವು ವರ್ಷಗಳ ಹಿಂದೆಯೇ ಶುರುವಾಗಿತ್ತು. ಬಾಲ್ಯದಲ್ಲಿ ಕುಟುಂಬದ ಮದುವೆ ಸಮಾರಂಭವೊಂದರಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದರು. ವರ್ಷಗಳು ಕಳೆದಂತೆ ಅವರ ಸ್ನೇಹ ಪ್ರೀತಿಗೆ ತಿರುಗಿತು. ಆರತಿ ಅಹ್ಲಾವತ್ ದೆಹಲಿಯ ಭಾರತೀಯ ವಿದ್ಯಾಭವನ ಮತ್ತು ಲೇಡಿ ಇರ್ವಿನ್ ಸೆಕೆಂಡರಿ ಶಾಲೆಯಲ್ಲಿ ಓದಿದ್ದಾರೆ. ನಂತರ ದೆಹಲಿ ವಿಶ್ವವಿದ್ಯಾಲಯದ ಮೈತ್ರೇಯಿ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾ ಪಡೆದರು. ವೃತ್ತಿಪರವಾಗಿ, ಆರತಿ ಕಾರ್ಪೊರೇಟ್ ವಲಯದಲ್ಲಿದ್ದಾರೆ. ಅವರು ಎವಿಎಸ್ ಹೆಲ್ತ್‌ಕೇರ್ ಮತ್ತು ಇವೆಂಚುರಾ ಕ್ರಿಯೇಷನ್ಸ್‌ನಂತಹ ಹಲವಾರು ಕಂಪನಿಗಳಿಗೆ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.<img>ವೀರೇಂದ್ರ ಸೆಹ್ವಾಗ್ ತಮ್ಮ ಕುಟುಂಬದ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಅವರು ತಮ್ಮ ಪತ್ನಿ ಆರತಿ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡುತ್ತಿಲ್ಲ ಎಂದು ಅಭಿಮಾನಿಗಳು ಗಮನಿಸಿದ್ದಾರೆ. ಇದು ಅವರ ವಿಚ್ಛೇದನದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಅಷ್ಟೇ ಅಲ್ಲ, ವೀರೇಂದ್ರ ಮತ್ತು ಆರತಿ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿರುವುದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.<img><p>ಇತ್ತೀಚೆಗೆ ಆರತಿ ಅವರ ಹುಟ್ಟುಹಬ್ಬದಂದು ಕೂಡ ಸೆಹ್ವಾಗ್ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿರಲಿಲ್ಲ. ಅಷ್ಟೇ ಅಲ್ಲದೆ, ವೀರೇಂದ್ರ ಸೆಹ್ವಾಗ್ ಮತ್ತು ಆರತಿ ಒಂದು ವರ್ಷದಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.&nbsp;</p><img><p>ಒಬ್ಬ ಮಗ ತಂದೆಯ ಜೊತೆಗಿದ್ದರೆ, ಇನ್ನೊಬ್ಬ ಮಗ ತಾಯಿಯ ಜೊತೆಗಿದ್ದಾನೆ ಎನ್ನಲಾಗಿದೆ. &nbsp;ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ಮನ್ಹಾನ್ ಜತೆಗೆ ಆರತಿ ಅವರ ಹೆಸರು ಇತ್ತೀಚಿಗಿನ ದಿನಗಳಲ್ಲಿ ಕೇಳಿ ಬರುತ್ತಿದೆ. ಈ ಎಲ್ಲದರ ಹಿಂದಿನ ಕಾರಣಗಳು ಸಂಪೂರ್ಣವಾಗಿ ವೈಯಕ್ತಿಕವಾಗಿದ್ದರೂ, ಇದು ಸೆಹ್ವಾಗ್ ಅಭಿಮಾನಿಗಳಿಗೆ ಬೇಸರ ತರಿಸಿದೆ.&nbsp;</p>



Source link

Leave a Reply

Your email address will not be published. Required fields are marked *