Headlines

ಕನ್ಯಾ ರಾಶಿಗೆ ಮಾರ್ಚ್ ತಿಂಗಳಲ್ಲಿ ಈ ದಶೆಯಿಂದ ವೃತ್ತಿಯಲ್ಲಿ ಯಶಸ್ಸು, ಲಾಭ

ಕನ್ಯಾ ರಾಶಿಗೆ ಮಾರ್ಚ್ ತಿಂಗಳಲ್ಲಿ ಈ ದಶೆಯಿಂದ ವೃತ್ತಿಯಲ್ಲಿ ಯಶಸ್ಸು, ಲಾಭ


ಮಾರ್ಚ್ ತಿಂಗಳು ನಿಮಗೆ ಸವಾಲುಗಳು ಮತ್ತು ಅವಕಾಶಗಳು ಮಿಶ್ರ ಇದೆ. ನಿಮ್ಮ ರಾಶ್ಯಾಧಿಪತಿ ಬುಧನ ಚಲನೆಯು ನಿಮ್ಮ ಆಲೋಚನೆ ಶಕ್ತಿಯನ್ನು ಹೆಚ್ಚಿಸಿದರೆ, ಶನಿ ಮತ್ತು ರಾಹುವಿನ ಪ್ರಭಾವವು ನಿಮ್ಮನ್ನು ಸ್ವಲ್ಪ ಪರೀಕ್ಷೆಗೆ ಒಳಪಡಿಸುತ್ತದೆ.

ವೃತ್ತಿ ಮತ್ತು ಉದ್ಯೋಗ

ಶುಭ: ಬುಧನ ಅನುಗ್ರಹದಿಂದ ಕಚೇರಿಯಲ್ಲಿ ನಿಮ್ಮ ಮಾತುಗಳಿಗೆ ಮನ್ನಣೆ ಸಿಗಲಿದೆ. ಹೊಸ ಯೋಜನೆಗಳಿಗೆ ಸಹಿ ಹಾಕಲು ಇದು ಸಕಾಲ.

ಅಶುಭ : ಶನಿಯ ದಶೆಯು ಕೆಲಸದಲ್ಲಿ ವಿಳಂಬವನ್ನು ಉಂಟುಮಾಡಬಹುದು. ಮೇಲಧಿಕಾರಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು. ಕಠಿಣ ಪರಿಶ್ರಮಕ್ಕೆ ತಕ್ಷಣ ಫಲ ಸಿಗದಿದ್ದರೂ ಧೃತಿಗೆಡಬೇಡಿ. ಮಾರ್ಚ್ 15 ರ ಅನಂತರ ವೃತ್ತಿಯಲ್ಲಿ ಹೊಸ ತಿರುವು ಸಿಗುವ ಸಾಧ್ಯತೆಯಿದೆ. ​
ಆರ್ಥಿಕ ಸ್ಥಿತಿ

ಶುಭ: ಶುಕ್ರನ ಬಲದಿಂದ ಹಣದ ಹರಿವು ಉತ್ತಮವಾಗಿದೆ. ಹಳೆಯ ಸಾಲಗಳು ತೀರುವ ಸಾಧ್ಯತೆಯಿದೆ. ಅಧಿಕ ಮೌಲ್ಯದ ವಸ್ತುಗಳ ಮೇಲೆ ಹಣ ವ್ಯಯಿಸುವಿರಿ.

ಅಶುಭ: ಕೇತುವಿನ ಪ್ರಭಾವದಿಂದ ಅನಿರೀಕ್ಷಿತ ವೈದ್ಯಕೀಯ ಖರ್ಚು ಬರಬಹುದು. ಷೇರು ಹೆಚ್ಚಿನ ಹೂಡಿಕೆ ಮಾಡುವ ಮುನ್ನ ಸಲಹೆ ಪಡೆಯಿರಿ.

ಮಿಶ್ರಫಲ: ಆದಾಯವಿದ್ದರೂ ಕೈಯಲ್ಲಿ ಹಣ ಉಳಿಯುವುದು ಕಷ್ಟ.

ಕುಟುಂಬ ಮತ್ತು ಪ್ರೇಮ ಜೀವನ

ಶುಭ: ಗುರುವು ಧರ್ಮಸ್ಥಾನದಲ್ಲಿ ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸೂಚನೆ ಇದೆ. ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗಲಿದೆ.

ಅಶುಭ: ಮಂಗಳನ ದಶೆಯಿಂದಾಗಿ ಒರಟುತನದ ಮಾತುಗಳು ಸಂಬಂಧದಲ್ಲಿ ಬಿರುಕು ಬಿಡಬಹುದು. ಹಿರಿಯ ಕುಟುಂಬದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಆರೋಗ್ಯ

ಅಶುಭ: ಈ ತಿಂಗಳು ನಿಮಗೆ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆ ಅಥವಾ ನಿದ್ರಾಹೀನತೆ ಕಾಡಬಹುದು. ಶನಿಯ ಪ್ರಭಾವದಿಂದ ಕಾಲು ನೋವು ಅಥವಾ ಬೆನ್ನು ನೋವು ಕಾಣಿಸಿಕೊಳ್ಳಬಹುದು. ಯೋಗ ಮತ್ತು ಪ್ರಾಣಾಯಾಮ ಮಾಡುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ.

ಗ್ರಹ ದಶೆಗಳ ಪ್ರಭಾವ:

ಬುಧ ದಶೆ:

ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ. ಈ ಸಮಯದಲ್ಲಿ ನೀವು ಮಾಡುವ ಪತ್ರವ್ಯವಹಾರಗಳು ಯಶಸ್ವಿಯಾಗುತ್ತವೆ.

ಶನಿ ದಶೆ:

ಇದು ನಿಮ್ಮನ್ನು ಸೋಮಾರಿತನಕ್ಕೆ ದೂಡಬಹುದು. ಶನಿಯು ನಿಮ್ಮನ್ನು ಶಿಸ್ತುಬದ್ಧವಾಗಿರಲು ಪ್ರೇರೇಪಿಸುತ್ತಾನೆ, ಇಲ್ಲದಿದ್ದರೆ ಶಿಸ್ತು ಮೀರಿದ ಸಂಕಷ್ಟ ಎದುರಾಗಬಹುದು.

ಗುರು ದಶೆ:

ಸಮಾಜದಲ್ಲಿ ಗೌರವ ಹೆಚ್ಚಿಸಿದರೂ, ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಬಹುದು.

ಈ ತಿಂಗಳ ಅಶುಭ ಫಲಗಳನ್ನು ತಗ್ಗಿಸಲು

ಬುಧವಾರ ಹಸಿರು ಬಟ್ಟೆ ಧರಿಸಿ ಅಥವಾ ಹೆಸರು ಬೇಳೆಯನ್ನು ದಾನ ಮಾಡಿ. ಶನಿವಾರ ಶನಿ ದೇವಸ್ಥಾನದಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ. ನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಕನ್ಯಾ ರಾಶಿಯವರಿಗೆ ಅತ್ಯಂತ ಶ್ರೇಯ

ಲೋಹಿತ ಹೆಬ್ಬಾರ್



Source link

Leave a Reply

Your email address will not be published. Required fields are marked *