ಆದಿತ್ಯ ಧಾರ್ ನಿರ್ದೇಶನ ಮಾಡಿದರು ‘ಧುರಂಧರ’ (ಧುರಂಧರ) ಸಿನಿಮಾವನ್ನು ನೋಡಿ ಜನಸಾಮಾನ್ಯರು ಎಂದು ಸೆಲೆಬ್ರಿಟಿಗಳು ಕೂಡ ವಿಮರ್ಶೆ ತಿಳಿಸುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (ವಿವೇಕ್ ಅಗ್ನಿಹೋತ್ರಿ) ಅವರು ಈಗ ‘ಧುರಂಧರ’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಅವರಿಗೆ ಈ ಸಿನಿಮಾ ತುಂಬಾ ಇಷ್ಟ ಆಗಿದೆ. ಆದಿತ್ಯ ಧಾರ್ (ಆದಿತ್ಯ ಧಾರ್) ಅವರ ನಿರ್ದೇಶನ, ಕಲಾವಿದರ ನಟನೆ ಹಾಗೂ ತಂತ್ರಜ್ಞರ ಕೆಲಸವನ್ನು ವಿವೇಕ್ ಅಗ್ನಿಹೋತ್ರಿ ಅವರು ಮನಸಾರೆ ಹೊಗಳಿದ್ದಾರೆ.
‘2 ತಿಂಗಳ ಬಳಿಕ ಭಾರತಕ್ಕೆ ವಾಪಸ್ ಬಂದಿದ್ದೇನೆ. ಈಗ ಮಾಡಿದ ಮೊದಲ ಕೆಲಸ ಎಂದರೆ ಧುರಂಧರ ಸಿನಿಮಾ ನೋಡಿದ್ದು. ಅದ್ಭುತ ಮತ್ತು ಹೆಮ್ಮೆ – ಈ ಎರಡೇ ಪದಗಳು ನನ್ನ ಮನಸ್ಸಿಗೆ ಬಂದಿದ್ದು. ಈ ರೀತಿಯ ಸಿನಿಮಾ ಮಾಡುವುದು ಎಷ್ಟು ಕಷ್ಟ ಎಂಬುದು ಸಿನಿಮಾ ಮೇಕಿಂಗ್ ಬಲ್ಲವರಿಗೆ ಮಾತ್ರ ಗೊತ್ತು. ಈ ರೀತಿಯ ಸಿನಿಮಾ ತಂತಾನೇ ಆಗುವುದಿಲ್ಲ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
‘ಪ್ರೊಡಕ್ಷನ್ ಡಿಸೈನ್ ಬಹಳ ಚೆನ್ನಾಗಿದೆ, ಸಂಗೀತ ಅತ್ಯದ್ಭುತವಾಗಿದೆ. ವೀಕಾಸ್ ನೌಲಂಕಾ ಅವರ ಛಾಯಾಗ್ರಹಣ ಹೊಸ ಛಾಯಾಗ್ರಾಹಕರಿಗೆ ಪಠ್ಯಪುಸ್ತಕದ ರೀತಿ ಇದೆ. ನಟನೆ ಬಗ್ಗೆ ಹೆಚ್ಚು ಹೇಳಲೇಬೇಕು. ಚಿಕ್ಕ ಚಿಕ್ಕ ಪಾತ್ರಧಾರಿಗಳು ಕೂಡ ಅದ್ಭುತವಾಗಿ ನಟಿಸಿದ್ದಾರೆ. ಅದೇ ಧುರಂಧರ ಸಿನಿಮಾದ ನಿಜವಾದ ಗೆಲುವು. ಎಲ್ಲಾ ವಿಭಾಗಗಳು ಚೆನ್ನಾಗಿ ಸಿಂಕ್ ಆಗಿವೆ. ಇದು ಆಕಸ್ಮಿಕವಾಗಿ ಆಗುವುದಿಲ್ಲ’ ವಿವೇಕ್ ಅಗ್ನಿಹೋತ್ರಿ.
ಧುರಂಧರ
ಎರಡು ತಿಂಗಳ ನಂತರ ಭಾರತಕ್ಕೆ ಮರಳಿ ಬಂದೆವು ಮತ್ತು ನಾವು ಮಾಡಿದ ಮೊದಲ ಕೆಲಸವೆಂದರೆ ವೀಕ್ಷಣೆ @AdityaDharFilms ಧುರಂಧರ.
ಮನಸ್ಸಿಗೆ ಮುದನೀಡುವ ಮತ್ತು ಹೆಮ್ಮೆಪಡುವ ಪದಗಳು ಮಾತ್ರ ನನ್ನ ಮನಸ್ಸಿಗೆ ಬರುತ್ತವೆ.
ಚಲನಚಿತ್ರವನ್ನು ನಿರ್ಮಿಸಲು ಏನಾಗುತ್ತದೆ ಎಂದು ತಿಳಿದಿರುವ ಯಾರಾದರೂ ಏನನ್ನಾದರೂ ಎಳೆಯಲು ಏನು ತೆಗೆದುಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ…
— ವಿವೇಕ್ ರಂಜನ್ ಅಗ್ನಿಹೋತ್ರಿ (@vivekagnihotri) ಜನವರಿ 5, 2026
‘ಇದು ಸಂಪೂರ್ಣವಾಗಿ ನಿರ್ದೇಶಕ/ಬರಹಗಾರರ ಸಿನಿಮಾ ಎಂಬುದು ಗೊತ್ತಾಗುತ್ತದೆ. ಆದಿತ್ಯ ಧಾರ್ ಅವರೇ, ನಾನು ಯಾವಾಗಲೂ ನಿಮ್ಮ ಕೆಲಸವನ್ನು ಮೆಚ್ಚಿದ್ದೇನೆ. ಮುಖ್ಯವಾಗಿ ನೀವು ಸಿನಿಮಾ ಮಾಡುವ ಸ್ಕೇಲ್ ಮತ್ತು ಡಿಸೈನ್ ದೊಡ್ಡದಾಗಿದೆ. ಇದು ಇನ್ನೊಂದು ಹಂತದಲ್ಲಿದೆ. ನಾನು ಬಹಳ ಹೆಮ್ಮೆಯಿಂದ ಸಿನಿಮಾ ನೋಡಿದೆ. ಇದು ಭಾರತೀಯ ಚಿತ್ರರಂಗದ ಹೆಮ್ಮೆ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಹೊಗಳಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ ‘ಧುರಂಧರ’ ಬಗ್ಗೆ ಮನಸಾರೆ ಮಾತಾಡಿದ ಶಿವರಾಜ್ ಕುಮಾರ್
‘ನೀವು ಧನ್ಯ. ನಿಜವಾಗಿಯೂ ನೀವು ದೇವರ ಮಗ. ನಿಮಗೆ ಇನ್ನಷ್ಟು ಶಕ್ತಿ ಸಿಗಲಿ. ಹೀಗೆ ಮುಂದುವರಿಯಿರಿ. ಇನ್ನೂ ಎತ್ತರಕ್ಕೆ ಬೆಳೆಯಿರಿ. ಯುವ ಜನತೆ ಇಂಥ ಕೆಲಸ ಮಾಡಿದರೆ ಭಾರತೀಯ ಚಿತ್ರರಂಗ ಬೆಳೆಯುತ್ತದೆ’ ಎಂದು ವಿವೇಕ್ ವಿವೇಕ್ ಅವರು ಆದಿತ್ಯ ಧಾರ್ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾಗೆ 774 ಕೋಟಿ ರೂಪಾಯಿಗೂ ಅಧಿಕ ಭಾರತದ ಕಲೆಕ್ಷನ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.