ಊಟ ಮಾಡಿ ಒಂದು ಸಣ್ಣ ವಾಕ್ ಹೋಗುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ

ಊಟ ಮಾಡಿ ಒಂದು ಸಣ್ಣ ವಾಕ್ ಹೋಗುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ


ಊಟ ಮಾಡಿ ಒಂದು ಸಣ್ಣ ವಾಕ್ ಹೋಗುವ ಅಭ್ಯಾಸ

ನಡಿಗೆ (ವಾಕಿಂಗ್) ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅದರಲ್ಲಿಯೂ ಊಟ ಮಾಡಿದ ನಂತರ 15 ನಿಮಿಷ ನಡೆದಾಡುವುದು (ಊಟದ ನಂತರದ ನಡಿಗೆ) ಇನ್ನೂ ಉತ್ತಮ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಅಭ್ಯಾಸದಿಂದ ಅನೇಕ ರೀತಿಯ ಸಮಸ್ಯೆಗಳನ್ನು ತಡೆಗಟ್ಟಬಹುದು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದನ್ನು ಮಾಡುವುದರಿಂದ ರಕ್ತ ಪರಿಚಲನೆ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಕಾಲಾನಂತರದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ ಎಂದು ಸಂಶೋಧಕರು ಹೇಳುತ್ತಾರೆ. ಇದೊಂದು ಸಣ್ಣ ಅಭ್ಯಾಸವಾದರೂ ಕೂಡ ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಇದರಿಂದ ಯಾವ ರೀತಿಯ ಲಾಭಗಳಿವೆ, ಯಾಕೆ ಒಳ್ಳೆಯದು ಎಂದು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಊಟದ ನಂತರ ನಡಿಗೆ ಅಥವಾ ವಾಕಿಂಗ್ ರಕ್ತದಲ್ಲಿನ ಸಕ್ಕರೆ ಸ್ಥಿರವಾಗಿರುತ್ತದೆ. ನಡೆಯುವುದರಿಂದ ಸ್ನಾಯುಗಳು ಕಾರ್ಯನಿರತ ಮತ್ತು ರಕ್ತದಲ್ಲಿನ ಸಕ್ಕರೆಯ ಹೆಚ್ಚಳದ ಅಪಾಯವನ್ನು ಕಡಿಮೆ ಮಾಡುತ್ತದೆ. ಮಧುಮೇಹ ಇರುವವರಿಗೆ ಅಥವಾ ಇನ್ಸುಲಿನ್ ಪ್ರತಿರೋಧದಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲ ಜೀರ್ಣಕ್ರಿಯೆಯ ತೊಂದರೆ ಕೂಡ ನಿವಾರಿಸುತ್ತದೆ, ಊತ ಮತ್ತು ಹೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಗಂಟೆಗಟ್ಟಲೆ ಕುಳಿತು ಕೆಲಸ ಮಾಡಿ ಮತ್ತೆ ವಾಕ್ ಮಾಡಿದ್ರೆ ಪ್ರಯೋಜನವಿಲ್ಲ ಎನ್ನುತ್ತಾರೆ ಡಾ. ಸುಮಿತ್!

ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ:

ನಡಿಗೆಯು ಹೃದಯವನ್ನು ಸುಧಾರಿಸಿ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಸೌಮ್ಯವಾದ ನಡಿಗೆ ರಾತ್ರಿ ಒಳ್ಳೆ ನಿದ್ರೆ ಮಾಡಲುಮಾಡಿಕೊಡುತ್ತದೆ. ಜೊತೆಗೆ ಒತ್ತಡವನ್ನು ಕಡಿಮೆ ಮಾಡುವುದರಿಂದ ಕಾರ್ಟಿಸೋಲ್ ಮಟ್ಟ ಕಡಿಮೆಯಾಗಿದೆ, ಮನಸ್ಸು ಶಾಂತವಾಗಿರುತ್ತದೆ. ದೇಹಕ್ಕೆ ವಿಶ್ರಾಂತಿ ನೀಡಲು ಇದೊಂದು ನೈಸರ್ಗಿಕ ಮಾರ್ಗ ಮತ್ತು ಊಟದ ನಂತರ ನಡೆಯುವುದರಿಂದ ಹೆಚ್ಚುವರಿ ಕ್ಯಾಲೊರಿಯೂ ಇದೆ. ಇದು ದೇಹದ ತೂಕವನ್ನು ಕಡಿಮೆ ಮಾಡಿ, ತೂಕ ಇಳಿಸಿಕೊಳ್ಳಲು ಕೂಡ ತುಂಬಾ ಸಹಕಾರಿಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *