
ಹುಬ್ಬಳ್ಳಿ, ಏಪ್ರಿಲ್ 01: ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ದದಿಂದಾಗಿ ಕಮರ್ಷಿಯಲ್ ಸಿಲಿಂಡರ್ ಅಭಾವ ಉಂಟಾಗಿದೆ. ಆಮದು, ರಫ್ತು ಮೇಲೆ ಬೀರಿದ ಪರಿಣಾಮದಿಂದ ಅನೇಕ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ಇದೇ ರೀತಿ ಯುದ್ಧ ಮುಂದಾದರೆ ವೈದ್ಯಕೀಯ (ವೈದ್ಯಕೀಯ) ವಸ್ತುಗಳಿಗೆ ಕೂಡ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಬಳಕೆಯಾಗುವ ಇಂಜೆಕ್ಷನ್ ಸಿರಿಂಜ್, ಐವಿ ಕೆನಾಲ್ ಸೇರಿದಂತೆ ಇತರ ವಸ್ತುಗಳ ಉತ್ಪಾದನೆಗೆ ಕಚ್ಚಾವಸ್ತುವಿನ ಕೊರತೆ ಆರಂಭವಾಗಿದೆ. ಬಹುತೇಕ ಘಟಕಗಳು ಕಚ್ಚಾವಸ್ತುಗಳಿಲ್ಲದೇ ಬಂದ್ ಆಗುವ ಸ್ಥಿತಿಗೆ ತಲುಪಿವೆ.
ಯುದ್ದದಿಂದ ಜಗತ್ತಿನ ಅನೇಕ ದೇಶಗಳು ಹತ್ತಾರು ರೀತಿಯ ತೊಂದರೆ ಅನುಭವಿಸುತ್ತಿವೆ. ದೇಶದ ಕಮರ್ಷಿಯಲ್ ಸಿಲಿಂಡರ್ ಅಭಾವ, ಆಟೋ ಗ್ಯಾಸ್ ಸಿಗದೇ ಆಟೋ ಚಾಲಕರ ಪರದಾಟ, ಅನೇಕ ವಸ್ತುಗಳ ಬೆಲೆ ಹೆಚ್ಚಾದಂತೆ, ಅನೇಕ ವಸ್ತುಗಳ ಬೆಲೆ ಕಡಿಮೆಯಾಗುತ್ತಿದೆ ರೈತರು ಪರದಾಡುತ್ತಿದ್ದಾರೆ. ಆದರೆ ಯುದ್ದ ಹೀಗೆ ಮುಂದಕ್ಕೆ ಹೋದರೆ ಮತ್ತೊಂದು ದೊಡ್ಡ ಗಂಡಾಂತರ ಉಂಟಾಗುವ ಆತಂಕ ಇದೀಗ ಎದುರಾಗಿದೆ.
ಇದನ್ನೂ ಓದಿ: Karnataka LPG Crisis: ಬೆಂಗಳೂರಿನಲ್ಲಿ ಆಟೋ ಗ್ಯಾಸ್ ಗಾಗಿ ಕಿ.ಮೀ ದೂರ ಫುಲ್ ಕ್ಯೂ!
ಮುಂದುವರಿದರೆ ವೈದ್ಯಕೀಯ ಕ್ಷೇತ್ರದ ಮೇಲೆ ದೊಡ್ಡಂಟು ಮಾಡಲಿದೆ, ರೋಗಿಗಳ ಪರದಾಡಬೇಕಾದ ಸ್ಥಿತಿ ಯು ನಿರ್ಮಾಣ. ಕ್ಷೇತ್ರದಲ್ಲಿ ಹೆಚ್ಚಾಗಿ ಬಳಕೆಯಾಗುವುದು ಇಂಜೆಕ್ಷನ್ ಸಿರಿಂಜ್‌ಗಳು, ಡ್ರಿಪ್‌ಗೆ ಹಾಕುವ ಐವಿ ಕ್ಯಾನಲ್‌ಗಳು ಸಿಗದಂತಹ ಸ್ಥಿತಿ ನಿರ್ಮಾಣ ವೈದ್ಯಕೀಯ ತಂತ್ರಜ್ಞಾನ ಫಾರ್ಮಾ ವಸ್ತುಗಳ ಉತ್ಪಾದನಾ ಕಂಪನಿಗಳು.
ಫಾರ್ಮಾ ಕಂಪನಿಗಳ ಆತಂಕ
ಸಿರಿಂಜ್, ಐವಿ ಕ್ಯಾನಲ್ ಉತ್ಪಾದನೆಗೆ ಪೆಟ್ರೋಲಿಯಂ ಉಪವಾಗಿರುವ ಉತ್ಪನ್ನ ಪಾಲಿ ಪ್ರಿಪಲಿನ್ ಕಚ್ಚಾವಸ್ತುವಿನ ಅವಶ್ಯಕತೆ ಇದೆ. ಆದರೆ ಯುದ್ದದಿಂದಾಗಿ ಈ ಕಚ್ಚಾವಸ್ತುವಿನ ಕೊರತೆ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ. ಹುಬ್ಬಳ್ಳಿ ಹೊರವಲಯದ ರಕ್ಷಂ ಮೆಡಿಕಲ್ ಡಿವೈಸ್ ಕಂಪನಿಗೆ ತಿಂಗಳಿಗೆ 150 ಟನ್ ಪಾಲಿ ಪ್ರಿಪಲಿನ್ ಕಚ್ಚಾವಸ್ತುಬೇಕು. ಆದರೆ 20ಟನ್ ಮಾತ್ರ ಪೂರೈಕೆ ಆಗುತ್ತಿದೆ. ಹೀಗಾಗಿ ಪ್ರತಿ ದಿನ 18 ಲಕ್ಷ ಸಿರಿಂಜ್ ಉತ್ಪಾದನೆ ನಡೆಯುತ್ತಿರುವ ಘಟಕದಲ್ಲಿ ಇದೀಗ ನಾಲ್ಕು ಲಕ್ಷ ಸಿರಿಂಜ್‌ಗಳ ಉತ್ಪಾದನೆ ಮಾತ್ರ ಆಗುತ್ತಿದೆ. ಯುದ್ಧ ಹೀಗೆ ಮುಂದುವರಿದರೆ ಸಿಗುವ ಕಚ್ಚಾವಸ್ತುಗಳು ಸಿಗದಂತಾಗಬಹುದು ಎಂಬ ಆತಂಕ ಇದೀಗ ಕಂಪನಿಗಳಿಗೆ ಎದುರಾಗಿದೆ.
ಸಿರಿಂಜ್ ಬೆಲೆ ಏರಿಕೆ?
ಹುಬ್ಬಳ್ಳಿ ರಕ್ಷಂ ಮೆಡಿಕಲ್ ಡಿವೈಸ್ ಕಂಪನಿಯಲ್ಲಿ ಮೂರು ಶಿಫ್ಟ್‌ನಲ್ಲಿ 300ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಾರೆ. ಆದರೆ ಇದೀಗ ಕಚ್ಚಾವಸ್ತುಗಳ ಪೂರೈಕೆ ಕಡಿಮೆ ಆಗುತ್ತಿದೆ ಎರಡು ಶಿಫ್ಟ್ ಕ್ಯಾನ್ ಮಾಡಿದ್ದು, ಕೇವಲ ಒಂದೇ ಒಂದು ಶಿಫ್ಟ್ನಲ್ಲಿ ಮಾತ್ರ ಕೆಲಸ ನಡೆಯುತ್ತಿದೆ. ಇದೀಗ ಬರುತ್ತಿರುವ ಕಚ್ಚಾವಸ್ತುವು ಬರದೇ ಇದ್ದರೆ ಸಿರಿಂಜ್ ತಯಾರಾಗುವ ಘಟಕವನ್ನು ಬಂದ್ ಮಾಡಬೇಕಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಿರಿಂಜ್ ಬೆಲೆ ಏರಿಕೆಯಾಗಬಹುದು. ರೋಗಿಗಳಿಗೆ ಇದರಿಂದ ದೊಡ್ಡ ಮಟ್ಟದ ಹೊಡೆತ ಬೀಳಲಿದೆಯಂತೆ.
ಸದ್ಯ ಎಲ್ಲರೂ ಕೇವಲ ಪೆಟ್ರೋಲ್, ಡಿಸೇಲ್, ಕಮರ್ಷಿಯಲ್ ಸಿಲಿಂಡರ್ ಕೊರತೆ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ. ಆದರೆ ವೈದ್ಯಕೀಯ ಕ್ಷೇತ್ರದ ಮೇಲೆ ಉಂಟಾಗಿರುವ ಪರಿಣಾಮದ ಬಗ್ಗೆ ಯಾರು ಗಂಭೀರವಾಗಿಲ್ಲ. ವೈದ್ಯಕೀಯ ವಸ್ತುಗಳು ಸಿಗದಿದ್ದರೆ ಜೀವಕ್ಕೆ ಅಪಾಯವಾಗುವ ಆತಂಕ ಎದುರಾಗಿದೆ.
ಇದನ್ನೂ ಓದಿ: ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್ ಸ್ಫೋಟ: ಮನೆ ಛಿದ್ರಛಿದ್ರ
ಸದ್ಯ ಕೇಂದ್ರ ಸರ್ಕಾರ ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ವಸ್ತುಗಳು ತಯಾರಾಗಲು ಬೇಕಾದ ಕಚ್ಚಾವಸ್ತುಗಳನ್ನು ಪೂರೈಕೆ ಮಾಡೋದರ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಇಲ್ಲದೇ ಇದ್ದರೆ ಆರೋಗ್ಯ ಕ್ಷೇತ್ರದ ಮೇಲೆ ಯುದ್ಧದ ದುಷ್ಪರಿಣಾಮಗಳು ದೊಡ್ಡ ಮಟ್ಟದಲ್ಲಿ ಆಗುವ ಸಾಧ್ಯತೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.