ರಕ್ಷಣಾ, ರೈಲ್ವೆ ವಲಯಕ್ಕೂ ತಟ್ಟಿದ ಯುದ್ಧದ ಬಿಸಿ: ಟೂಲ್ಸ್ ಪ್ರೊಪೈಲ್ ಕಚ್ಚಾವಸ್ತು ಸರಬರಾಜು ಮಾಡುವ ಆಟೋಮೊಬೈಲ್ ಇಂಡಸ್ಟ್ರಿ ಬಂದ್

ರಕ್ಷಣಾ, ರೈಲ್ವೆ ವಲಯಕ್ಕೂ ತಟ್ಟಿದ ಯುದ್ಧದ ಬಿಸಿ: ಟೂಲ್ಸ್ ಪ್ರೊಪೈಲ್ ಕಚ್ಚಾವಸ್ತು ಸರಬರಾಜು ಮಾಡುವ ಆಟೋಮೊಬೈಲ್ ಇಂಡಸ್ಟ್ರಿ ಬಂದ್


ರಕ್ಷಣಾ, ವಲಯಕ್ಕೂ ತಟ್ಟಿದ ಯುದ್ಧದ ಬಿಸಿ: ಟೂಲ್ಸ್ ಪ್ರೊಪೈಲ್ ಕಚ್ಚಾವಸ್ತು ಸರಬರಾಜು ಮಾಡುವ ಆಟೋಮೊಬೈಲ್ ಇಂಡಸ್ಟ್ರಿ ಬಂದ್

ಬೆಂಗಳೂರು, ಮಾರ್ಚ್ 23: ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಯುದ್ಧದ (ಯುಎಸ್-ಇಸ್ರೇಲ್-ಇರಾನ್ ಯುದ್ಧ) ಪರಿಣಾಮ ಇದೀಗ ಕರ್ನಾಟಕ ರಾಜಧಾನಿ ಬೆಂಗಳೂರಿಗೂ (ಬೆಂಗಳೂರು) ತಟ್ಟಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕಚ್ಚಾ ತೈಲ ಬೆಲೆ ಏರಿಕೆಯಷ್ಟೇ ಅಲ್ಲ, ನಗರದ ಸಣ್ಣ ಮಧ್ಯಮ ಕೈಗಾರಿಕೆಗಳ ಮೇಲೂ ನೇರ ಪರಿಣಾಮ ಬೀರುತ್ತಿದೆ. ಇದು ದೇಶದ ರಕ್ಷಣಾ ಕ್ಷೇತ್ರ ಮತ್ತು ಇಲಾಖೆ ಮೇಲೂ ಪರಿಣಾಮ ಬೀರುತ್ತಿದೆ. ರಕ್ಷಣಾ ಇಲಾಖೆಯ ವಾಹನಗಳ ತಯಾರಿಕೆ ಹಾಗೂ ಇಲಾಖೆಗೆ ಟೂಲ್ಸ್ ಪ್ರೊಪೈಲ್ ಕಚ್ಚಾವಸ್ತು ಸರಬರಾಜು ಮಾಡುವ ಪೀಣ್ಯದಲ್ಲಿರುವ ಶ್ರೀ ಲಕ್ಷ್ಮಿ ಪ್ರೊಪೈಲ್ ಆಟೋಮೊಬೈಲ್ ಇಂಡಸ್ಟ್ರಿಯನ್ನು ತಾತ್ಕಲಿಕವಾಗಿ ಬಂದ್ ಮಾಡಲಾಗಿದೆ.

ಪೀಣ್ಯ ಕೈಗಾರಿಕಾ ವಲಯಕ್ಕೆ ಬಿಗ್ ಶಾಕ್

ಬೆಂಗಳೂರು ನಗರದಲ್ಲಿರುವ ಪೀಣ್ಯ ಕೈಗಾರಿಕಾ ವಲಯದ ಸಣ್ಣ ಕೈಗಾರಿಕೆಗಳು ಈಗ ಗಂಭೀರ ಸಂಕಷ್ಟ ಎದುರಿಸುತ್ತಿವೆ. ವಿಶೇಷವಾಗಿ ಟೂಲ್ಸ್, ಪ್ರೊಫೈಲ್ ಮತ್ತು ಆಟೋಮೊಬೈಲ್ ಬಿಡಿ ತಯಾರಿಕಾ ಕಂಪನಿಗಳು ಕಚ್ಚಾ ವಸ್ತು ಮತ್ತು ಇಂಧನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ.

ಎಲ್ ಪಿಜಿ ಕೊರತೆಯಿಂದ ಇಂಡಸ್ಟ್ರಿ ಬಂದ್

ಪೀಣ್ಯದಲ್ಲಿರುವ ಶ್ರೀ ಲಕ್ಷ್ಮಿ ಪ್ರೊಪೈಲ್ ಆಟೋಮೊಬೈಲ್ ಇಂಡಸ್ಟ್ರಿ ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಿದೆ. ಈ ಸಂಸ್ಥೆ ಭಾರತೀಯ ರಕ್ಷಣಾ ವಲಯ ಮತ್ತು ಅಗತ್ಯವಿರುವ ಬಿಡಿಭಾಗಗಳನ್ನು ಪೂರೈಸುತ್ತಿತ್ತು. ಜೊತೆಗೆ ವಿಪ್ರೋ ಸೇರಿದಂತೆ ಹಲವು ಕಂಪನಿಗಳಿಗೆ ಪೂರೈಕೆ ಮಾಡಲಾಗುತ್ತಿದೆ.

ಕಳೆದ ಒಂದು ವಾರದಿಂದ LPG ಗ್ಯಾಸ್ ಸಿಲಿಂಡರ್ ಲಭ್ಯವಾಗದೆ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರತೀ ಶಿಫ್ಟ್‌ಗೆ 8 ರಿಂದ 10 ಸಿಲಿಂಡರ್ ಅಗತ್ಯವಿದ್ದರೂ, ಸರಬರಾಜು ನಿಂತ ಕಂಪನಿ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ.

ನೂರಾರು ಉದ್ಯೋಗಿಗಳಿಗೆ ಸಂಕಷ್ಟ

ಈ ಕಂಪನಿಯಲ್ಲಿ ಪ್ರತಿ ಶಿಫ್ಟ್‌ಗೆ ಸುಮಾರು 50 ಮಂದಿ ಕೆಲಸ ಮಾಡಿದ್ದಾರೆ. ಈಗ ಗ್ಯಾಸ್ ಕೊರತೆಯಿಂದ ನೂರಾರು ಉದ್ಯೋಗಿಗಳು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೇತನ ಕಡಿತ ಹಾಗೂ ಉದ್ಯೋಗ ಕಳೆದುಕೊಳ್ಳುವ ಭೀತಿ.

400ಕ್ಕೂ ಹೆಚ್ಚು ಕೈಗಾರಿಕೆಗಳಿಗೆ ಎಫೆಕ್ಟ್

ಪೀಣ್ಯದಲ್ಲಿ 12 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿದ್ದು, ಸಾವಿರಾರು ಕಂಪನಿಗಳು LPG ಗ್ಯಾಸ್ ಮೇಲೆ ಅವಲಂಬಿತವಾಗಿದೆ. ಇತ್ತೀಚೆಗೆ ಇಂಡರಿಯಲ್ ಗ್ಯಾಸ್ ಸರಬರಾಜು ಕಡಿಮೆಯಾಗಿರುವ 400ಕ್ಕೂ ಹೆಚ್ಚು ಕೈಗಾರಿಕೆಗಳು ತಾತ್ಕಾಲಿಕವಾಗಿ ಬಂದ್ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ಕೈಗಾರಿಕೆಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ, ಅವರ ಕುಟುಂಬಗಳ ಜೀವನೋಪಾಯದ ಮೇಲೆ ಅವಲಂಬಿತವಾಗಿದೆ. ಕೆಲಸ ನಿಂತ ನೂರಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಪ್ರವಾಸೋದ್ಯಮಕ್ಕೂ ತಟ್ಟಿದ LPG ಅಭಾವ: ಕರಾವಳಿ ಖಾದ್ಯಗಳಿಗೆ ಬ್ರೇಕ್; ಚಿಕಿತ್ಸೆಗೆ ನಿರಾಶೆ

ಒಟ್ಟಿನಲ್ಲಿ, ಪ್ರಾಚ್ಯ ಸಂಘರ್ಷದ ಪರಿಣಾಮ ಬೆಂಗಳೂರಿನ ಕೈಗಾರಿಕಾ ವಲಯಕ್ಕೂ ತಟ್ಟಿದ್ದು, ಯುದ್ಧವು ಇನ್ನಷ್ಟು ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ. ಉದ್ಯಮ ವಲಯದಲ್ಲಿ ಈಗಲೇ ಅನಿಶ್ಚಿತತೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *