ಬೀದರ್​​ನ​ ಬಿದ್ರಿ ಕಲೆಗೂ ತಟ್ಟಿದ ಯುದ್ಧದ ಬಿಸಿ: ವಿದೇಶಿ ವಹಿವಾಟು ಕುಸಿತ; ಸಂಕಷ್ಟದಲ್ಲಿ ಕಲಾವಿದರು

ಬೀದರ್​​ನ​ ಬಿದ್ರಿ ಕಲೆಗೂ ತಟ್ಟಿದ ಯುದ್ಧದ ಬಿಸಿ: ವಿದೇಶಿ ವಹಿವಾಟು ಕುಸಿತ; ಸಂಕಷ್ಟದಲ್ಲಿ ಕಲಾವಿದರು


ಬೀದರ್ ನ ಬಿದ್ರಿ ಕಲೆಗೂ ತಟ್ಟಿದ ಯುದ್ಧದ ಬಿಸಿ: ವಿದೇಶಿ ವಹಿವಾಟು ಕುಸಿತ; ಸಂಕಷ್ಟದಲ್ಲಿ ಕಲಾವಿದರು

ಬೀದರ್, ಮಾರ್ಚ್ 13: ಜಗತ್ತಿನಾದ್ಯಾಂತ ಪ್ರಸಿದ್ಧಿ ಪಡೆದಿರುವ ಐತಿಹಾಸಿಕ ಬೀದರಿ ಕಲೆಗೆ ಅಮೆರಿಕಾ, ಇಸ್ರೇಲ್, ಇರಾನ್ ಯುದ್ಧದಿಂದಾಗಿ (ಇರಾನ್ ಇಸ್ರೇಲ್ ಯುದ್ಧ) ವ್ಯಾಪಾರ ಕುಸಿತವಾಗಿದೆ. ಬೀದರಿ ಕಲೆಯನ್ನ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ. ಬೀದರಿ ಕಲೆಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕರು ಈ ಕಲೆಯನ್ನ ಪ್ರೋತ್ಸಾಹಿಸಬೇಕಾದ ಸರ್ಕಾರ ಕಂಡು ಕುಳಿತುಬಿಟ್ಟಿದ್ದು, ಯುದ್ಧದ ಎಫೆಕ್ಟ್ ಹಿನ್ನಲೆಯಲ್ಲಿ ಬಿದ್ರಿ ಕಲಾಕೃತಿಗಳು ಮಾರಾಟವಾಗುತ್ತಿಲ್ಲ.

ಬೀದರ್ ಜಿಲ್ಲೆ ಎಂದ ಕೂಡಲೇ ನಮಗೆ ನೆನಪಾಗುವುದು ಜಗತ್ತಿನಾದ್ಯಾಂತ ಪ್ರಸಿದ್ಧಿ ಪಡೆದಿರುವ ಬೀದರಿ ಕಲೆ. ಇಂತಹ ಅಪರೂಪದ ಕಲೆಗಳು ಮಾರಾಟವಾಗದೆ ಕಲಾವಿದರಿಗೆ ಸಂಕಷ್ಟ ಎದುರಾಗಿದೆ. ಬೀದರ್ನ (ಬಿದ್ರಿ ಕಲೆ)ಗೂ ಈಗ ಯುದ್ಧದ ಬಿಸಿ ತಟ್ಟಿದ್ದು, ವಿದೇಶಿ ಮಾರಾಟದಲ್ಲಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡುಬಂದಿದೆ. 50ರಷ್ಟು ವಿದೇಶಿ ವ್ಯವಹಾರ ಕಡಿಮೆಯಾಗುವುದರಿಂದ ಬಿದ್ರಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಪ್ಪು ಮಿಶ್ರಿತ ಲೋಹದ ಮೇಲಿನ ಬೆಳ್ಳಿಯ ನವಿರು ಕೆತ್ತನೆಯಿಂದ ತಯಾರಾಗುವ ಬಿದ್ರಿ ಕಲಾಕೃತಿಗಳು ವಿಶ್ವದ ಗ್ರಾಹಕರನ್ನು ಸೆಳೆದವು. ವಿಶೇಷವಾಗಿ USD, ದುಬೈ, ಫ್ರಾನ್ಸ್ ಮತ್ತು ಕೆನಾಡಾ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಯುದ್ಧದ ಕರಿನೆರಳು ಮುಂದುವರಿದರೆ, ಬೀದರ್‌ನ ಈ ಪಾರಂಪರಿಕ ಕೈಗಾರಿಕೆಗೆ ಮತ್ತಷ್ಟು ಹೊಡೆತ ಬೀಳುವ ಭೀತಿ ಎದುರಾಗಿದೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಸಿಲಿಂಡರ್ ಕೊರತೆ: ಸೌದೆ ಓಲೆ ಮೇಲೆ ಅಡುಗೆ ಮಾಡಿದ ಇಂದಿರಾ ಕ್ಯಾಂಟಿನ್ ಸಿಬ್ಬಂದಿ

ಈ ವಿದೇಶಿ ಗ್ರಾಹಕರು ದುಬಾರಿ ಬಿದ್ರಿ ಕಲಾಕೃತಿಗಳ ಪ್ರಮುಖ ಬೆಂಬಲವಾಗಿದ್ದರು. ಆದರೆ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಸಾಗಾಟ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿದೆ. ವಿಮಾನಗಳು ಮತ್ತು ಹಡಗುಗಳ ಸಂಚಾರದಲ್ಲಿ ಲಭ್ಯವಿರುವ ಕಲಾಕೃತಿಗಳು ವಿದೇಶಗಳಿಗೆ ಕಳುಹಿಸುವಲ್ಲಿ ವಿಳಂಬವಾಗುತ್ತಿದೆ. ಆನ್‌ಲೈನ್ ಮೂಲಕ ಬುಕ್ಕಿಂಗ್ ಪ್ರಮಾಣ ಹೆಚ್ಚಿದ್ದರೂ ಸಾಗಾಟದ ಸಮಸ್ಯೆಯಿಂದ ರಫ್ತು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಬಿದ್ರಿ ಕಲೆ ನಂಬಿರುವ ನೂರಾರು ಕಲಾವಿದರಲ್ಲಿ ಆತಂಕ ಉಂಟಾಗಿದೆ.

ಅತ್ಯಂತ ಸೂಕ್ಷ್ಮವಾದ ಕುಸುರಿ ಕಲೆಯಿಂದ ವಸ್ತುಗಳನ್ನ ತಯಾರು ಮಾಡುವುದಕ್ಕೆ ತಿಂಗಳಾಯಿತು. ಕಷ್ಟಪಟ್ಟು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಇಲ್ಲ, ಕಲೆಯನ್ನ ನಂಬಿಕೊಂಡವರಿಗೆ ಆತಂಕ ಹೆಚ್ಚಿಸುವಂತೆ ಮಾಡಿದೆ. ಎರಡು ವರ್ಷದ ಹಿಂದೆ ಬಿದರಿ ಕಲೆಗಾರ ಷಾ ರಷೀದ್ ಅಹ್ಮದ್ ಖಾದ್ರಿಗೆ ಈ ಕಲೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ವಂಶಪರಂಪರೆಯಾಗಿ ಬಂದಿದ್ದ ಕುಶಲಕರ್ಮಿಗೆ ಸರ್ಕಾರ ಗುರುತಿಸಿ 74ನೇ ಗಣರಾಜ್ಯೋತ್ಸವದಂದು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಇನ್ನು ಶೇಕಡ 50ರಷ್ಟು ವಿದೇಶದಲ್ಲಿ ಬಿದ್ರಿ ಕಲೆಗಳು ಮಾರಾಟವಾಗಿವೆ. ಇನ್ನೂಳಿದ 50% ನಮ್ಮ ದೇಶದ ಮಾರಾಟ ಆದರೆ ವಂಶಪಾರಂಪರ್ಯವಾಗಿ ಬಂದಿರುವ ಈ ಕಲೆಯಿಂದಲೇ ಬದುಕು ಕಟ್ಟಿಕೊಂಡಿರುವ ಕಲಾವಿದರಿಗೆ ಇವರು ತಯಾರಿಸಿದ ವಸ್ತುಗಳಿಗೆ ಮಾರಾಟಕ್ಕೆ ಸರ್ಕಾರ ಪ್ರೋತ್ಸಾಹ ಕೊಡುತ್ತಿದ್ದಾರೆ. ಜೊತೆಗೆ ಈ ವಸ್ತುಗಳನ್ನ ತಯಾರಿಸಲು ಬೇಕಾದ ಕಚ್ಚಾವಸ್ತುಗಳನ್ನು ಪೂರೈಸುತ್ತಿಲ್ಲ. ಈ ಕಲೆಯನ್ನೇ ನಂಬಿಕೊಂಡು ಬದುಕಿಕೊಂಡು ಕಟ್ಟಿಕೊಂಡಿರುವ ಜನರ ಸ್ಥಿತಿ ಆರಕ್ಕೇರದೆ ಮೂರಕ್ಕಿಳಿಯ ಆಧಾರ. ನಮ್ಮ ಕಲೆಗೆ ಸರಕಾರದ ಬೆಂಬಲ ಬೇಕಾಗಿದೆ ಎಂದು ಕಲಾವಿದರು ಅಳಲು ತೊಡಿಕೊಂಡಿದ್ದಾರೆ.

ಇದನ್ನೂ ಓದಿ: ಗ್ಯಾಸ್ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!

ಶತಮಾನಗಳ ಇತಿಹಾಸ ಹೊಂದಿರುವ ಬೀದರಿ ಕಲೆ ಇಂದು ಯುದ್ದಕ್ಕಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಬಂದ್ ಆಗಿದೆ. ಹಾಗೂ ಸರಕಾರದ ದಿವ್ಯ ನಿರ್ಲಕ್ಷದಿಂದ ಇಡೀ ಜಗತ್ತಿಗೆ ಕರ್ನಾಟಕದ ಬೀದರಿ ಕಲೆಯನ್ನ ಪರಿಚಯಿಸಿದ ಕಲಾವಿದರು ಬದುಕು ಮಾತ್ರ ಬೀದಿಗೆ ಬಂದಿದೆ. ಕಲೆ ಹಾಗೂ ಕಲಾವಿದರನ್ನ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಅಗತ್ಯಕ್ಕಿದೆ. ಇಂತಹ ಅಪರೂಪದ ಅಪರೂಪದ ಕಲೆಗಳ ಪ್ರಚಾರ ಮತ್ತು ಮಾರುಕಟ್ಟೆಯ ಕೊರತೆಯಿದ್ದು, ಸರ್ಕಾರದ ಮುಂದೆ ಬಂದು ಬೀದರಿ ಕಲೆಯನ್ನ ಉಳಿಸುವ ಕಡೆಗೆ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *