ನೀರನ್ನು ‘ಜೀವಜಲ’ ಅಂತ ಕರೆಯುತ್ತಾರೆ ಎಂದು ಹಲವರಿಗೆ ಗೊತ್ತಿಲ್ಲದಿರಬಹುದು. ಹೌದು, ನೀರೇ ಜೀವಜಲ, ಅದಕ್ಕಿಂತ ಮಿಗಿಲಾದುದು ಜೀವ ಸಂಕುಲಕ್ಕೆ ಬೇರೇನೂ ಇಲ್ಲ, Water ಬಗ್ಗೆ ಸರಿಯಾದ ಮಾಹಿತಿ ತಿಳಿಯಲು ಈ ಸ್ಟೋರಿ ನೋಡಿ..

ಭೂಮಿಯ ಮೇಲಿನ ಎಲ್ಲಾ ಜೀವಸಂಕುಲಕ್ಕೆ ನೀರು (Water) ಬೇಕೇಬೇಕು. ಬದುಕು ನಡೆಯಲು ನೀರು ಎಂಬುದು ಬಹಮುಖ್ಯ.

ನೀರನ್ನು ಜೀವಜಲ ಎಂದು ಸುಮ್ಮನೇ ಹೇಳೋದಲ್ಲ.. ನೀರು ಎಲ್ಲಾ ಜೀವಗಳ ಮೂಲ. ನೀರು ಇಲ್ಲದಿದ್ದರೆ ಪ್ರಕೃತಿಯ ಯಾವುದೇ ಜೀವಸಂಕುಲವೂ ಉಳಿಯೋದಿಲ್ಲ.

ಮಾನವಜೀವಿಗೆ ಕೂಡ ನೀರು ಅತ್ಯಗತ್ಯ. ನೀರಿಂದಲೇ ಜೀವಸಂಕುಲಗಳ ಉಗಮವಾಯ್ತು ಎಮದೇ ವಿಜ್ಞಾನ ಹೇಳುತ್ತದೆ. ಜೊತೆಗೆ, ನೀರು ಎಲ್ಲಿಂದ ಉಗಮ ಆಯ್ತು? ಆ ಬಳಿಕ ಜೀವದ ಸೃಷ್ಟಿ ಹೇಗಾಯ್ತು ಎಂಬ ಎಲ್ಲಾ ಅಂಶಗಳಿಗೂ ನೀರಿನ ಮೂಲಕವೇ ಉತ್ತರ ಸಿಗುತ್ತದೆ.

ಜೀವಕ್ಕೆ, ಜೀವನಕ್ಕೆ ನೀರು ಅತ್ಯಗತ್ಯ ಎಂಬ ಕಾರಣಕ್ಕೇ ನೀರನ್ನು ‘ಜೀವಜಲ’ ಎಂದು ಕರೆಯುತ್ತಾರೆ. ಜೀವಜಲ ಎಂದು ನೀರಿನಲ್ಲಿ ಇನ್ಯಾವುದೋ ವಿಧ ಇದೆ ಅಂತಲ್ಲ.

ನೀರೇ ಜೀವಜಲ, ಹಾಗೂ ನೀರು ಸೇವಿಸದಿದ್ದರೆ ಯಾವ ಜೀವ ಸಂಕಲವೂ ಬಹಳಷ್ಟು ಕಾಲ ಬದುಕಲಾಗದು. ಹೀಗಾಗಿಯೇ ನೀರನ್ನು ಅಮೃತಕ್ಕೆ ಸಮಾನ ಎನ್ನುತ್ತಾರೆ. ಅದಕ್ಕೇ ನೀರಿಗೆ ಜೀವಸಂಕುಲ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತದೆ.

Source link
ಜೀವಜಲ ಎಂದರೆ ಇದೇ, ಬೇರೇನೋ ಅಲ್ಲ.. ಇದು ಸಿಗದಿದ್ದರೆ ನಿಮ್ಮ ಬದುಕು ಗೋವಿಂದ..!