Headlines

Weekly Horoscope 2026: ಮಾರ್ಚ್ ನಾಲ್ಕನೇ ವಾರ ಹೇಗಿರಲಿದೆ? ನಿಮ್ಮ ರಾಶಿಗನುಗುಣವಾಗಿ ವಾರ ಭವಿಷ್ಯ ತಿಳಿಯಿರಿ

Weekly Horoscope 2026: ಮಾರ್ಚ್ ನಾಲ್ಕನೇ ವಾರ ಹೇಗಿರಲಿದೆ? ನಿಮ್ಮ ರಾಶಿಗನುಗುಣವಾಗಿ ವಾರ ಭವಿಷ್ಯ ತಿಳಿಯಿರಿ


ಸಾಪ್ತಾಹಿಕ ಭವಿಷ್ಯ 2026: ಮಾರ್ಚ್ ನಾಲ್ಕನೇ ವಾರ ಹೇಗಿರಲಿದೆ? ನಿಮ್ಮ ರಾಶಿಗನುಗುಣವಾಗಿ ವಾರ ಭವಿಷ್ಯ ತಿಳಿಯಿರಿ

ಇದು 2026ರ ಮಾರ್ಚ್ ನ ನಾಲ್ಕನೇ ವಾರದಲ್ಲಿ ಗ್ರಹಗತಿಗಳ ಬದಲಾವಣೆಯಾಗಲಿದೆ. ಸೂರ್ಯ ಮತ್ತು ಶನಿಯ ಸಂಯೋಗವಿರಲಿದೆ. ತಂದೆ ಮಕ್ಕಳ ನಡುವೆ ವೈಷಮ್ಯ, ನೌಕರ, ಬಾಸ್ ಗಳ ನಡುವೆ ಕಲಹ ಇರಲಿದೆ ಸರ್ಕಾರದ ಕಾರ್ಯಕ್ಕೆ ವಿಘ್ನಗಳೂ ಇರಲಿದೆ. ಯಾವುದನ್ನಾದರೂ ಸ್ವೀಕರಿಸುವ ಮನೋಭಾವ ನಿಮ್ಮದಾಗಲಿ.

ಮೇಷ ರಾಶಿ:

ಈ ವಾರ ನಿಮಗೆ ಶುಭ ಫಲಗಳಿವೆ. ವೃತ್ತಿಯಲ್ಲಿ ಪ್ರಗತಿ ಇದೆ, ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕುಟುಂಬದೊಂದಿಗೆ ಸಮಯ ಕಳೆಯಿರಿ. ಆರೋಗ್ಯದ ಕಡೆ ಸ್ವಲ್ಪ ಗಮನಹರಿಸಿ. ಹೊಸ ಹೂಡಿಕೆಗೆ ಇದು ಸಕಾಲ.

ವೃಷಭ ರಾಶಿ:

ಕೆಲಸದ ಒತ್ತಡ ಹೆಚ್ಚಿದ್ದು, ತಾಳ್ಮೆಯಿಂದ ಇರುವುದು ಒಳಿತು. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ದೂರದ ಪ್ರಯಾಣದ ಸಾಧ್ಯತೆ ಇದೆ.

ಮಿಥುನ ರಾಶಿ:

ವ್ಯಾಪಾರದಲ್ಲಿ ಲಾಭದಾಯಕ ದಿನಗಳು. ಹೊಸ ಮಿತ್ರರ ಭೇಟಿಯಾಗಲಿದೆ. ಮನೆ ರಿಪೇರಿ ಅಥವಾ ಶುಭ ಕಾರ್ಯಗಳ ಬಗ್ಗೆ ಯೋಚಿಸಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಯಶಸ್ಸು ಸಿಗಲಿದೆ. ಮನಸ್ಸು ಪ್ರಸನ್ನ ಇದೆ.

ಕರ್ಕಾಟಕ ರಾಶಿ:

ಉದ್ಯೋಗ ಬದಲಾವಣೆಗೆ ಯತ್ನಿಸುತ್ತಿದ್ದಾರೆ ಈ ವಾರ ಶುಭ ವಾರ್ತೆ ಕೇಳುವಿರಿ. ಭೂಮಿ ಅಥವಾ ವಾಹನ ಖರೀದಿ ಯೋಗವಿದೆ. ತಾಯಿಯ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಹಿರಿಯರ ಆಶೀರ್ವಾದದಿಂದ ಕಾರ್ಯಗಳು ಸುಗಮವಾಗಿ ಸಾಗಲಿವೆ.

ಸಿಂಹ ರಾಶಿ:

ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು. ಸಹೋದರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು, ಎಚ್ಚರ. ಆರ್ಥಿಕ ಲಾಭ ಮಧ್ಯಮಕ್ಕಾಗಿ.

ಕನ್ಯಾ ರಾಶಿ:

ಮಾತಿನ ಮೇಲೆ ಹಿಡಿತವಿರಲಿ, ವಾದ, ವಿವಾದಗಳಿಂದ ದೂರವಿರಿ. ಕಣ್ಣಿನ ಅಥವಾ ಹಲ್ಲಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಸಾಲದ ವ್ಯವಹಾರ ಮಾಡಬೇಡಿ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಹಠಾತ್ ಧನಲಾಭದ ಸಾಧ್ಯತೆಯಿದೆ.

ತುಲಾ ರಾಶಿ:

ವೈವಾಹಿಕ ಜೀವನ ಸುಖಮಯಕ್ಕಾಗಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಸಿಗಲಿದೆ. ಮಾಡಿದ ಕೆಲಸಗಳಿಗೆ ಮನ್ನಣೆ ಸಿಗುವುದು. ಆರೋಗ್ಯ ಉತ್ತಮವಾಗಿದೆ. ಹೊಸ ಯೋಜನೆಗಳನ್ನು ಜಾರಿಗೆ ತರಲು ಇದು ಅತ್ಯುತ್ತಮ ಸಮಯವಾಗಿದೆ.

ವೃಶ್ಚಿಕ ರಾಶಿ:

ಶತ್ರುಗಳ ಕಾಟವಿದ್ದರೂ ನೀವು ಜಯಶೀಲರಾಗುವಿರಿ. ಕೋರ್ಟ್ ವ್ಯವಹಾರಗಳಲ್ಲಿ ಪ್ರಗತಿ ಇದೆ. ಖರ್ಚುಗಳು ಆದಾಯಕ್ಕಿಂತ ಹೆಚ್ಚಿರಬಹುದು. ವಿದೇಶಿ ಸಂಬಂಧಿತ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ವಿಶ್ರಾಂತಿಗೆ ಸಮಯ ಮೀಸಲಿಡಿ.

ಧನು ರಾಶಿ:

ಸಂತಾನ ಭಾಗ್ಯದ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ ಸಿಗಲಿದೆ. ಷೇರು ಲಾಭದ ನಿರೀಕ್ಷೆಯಿದೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ. ಹಳೆಯ ಬಾಕಿ ವಸೂಲಿಯಾಗಲಿದೆ. ಹೆಚ್ಚಿನ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ.

ಮಕರ ರಾಶಿ:

ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಮನೆಯಲ್ಲಿ ಸುಖ-ಸಂತೋಷ ನೆಲೆಸಲಿದೆ. ಅಧಿಕಾರಿಗಳಿಂದ ಮೆಚ್ಚುಗೆ ಪಡೆದಿರಿ. ಇರುವವರು ಜಾಗರೂಕರಾಗಿರಬೇಕು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದೆ.

ಕುಂಭ ರಾಶಿ:

ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗಲಿದೆ. ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ನೆರೆಹೊರೆಯವರೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ. ಕೆಲಸದಲ್ಲಿ ಬದಲಾವಣೆ ಇಷ್ಟಪಡುವವರಿಗೆ ಅವಕಾಶಗಳು ಸಿಗಲಿವೆ. ಅದೃಷ್ಟ ನಿಮ್ಮ ಪರವಾಗಿರಲಿದೆ.

ಮೀನ ರಾಶಿ:

ಆರ್ಥಿಕವಾಗಿ ಬಲಿಷ್ಠರಾಗುವಿರಿ. ಕುಟುಂಬದಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ರುಚಿಕರವಾದ ಭೋಜನ ಸವಿಯುವಿರಿ. ಹೂಡಿಕೆಗಳಿಗೆ ಉತ್ತಮ ಆದಾಯ ಸಿಗಲಿದೆ. ನಿಮ್ಮ ವ್ಯಕ್ತಿತ್ವದಿಂದ ಇತರರನ್ನು ಆಕರ್ಷಿಸುವಿರಿ. ಮಾನಸಿಕ ಶಾಂತಿ ದೊರೆಯಲಿದೆ.

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *