Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ

Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ


ನವೆಂಬರ್ 30 ರಿಂದ ಡಿಸೆಂಬರ್ 6 ರ ವರೆಗೆ ಈ ವಾರವು ಡಿಸೆಂಬರ್ ಮೊದಲ ವಾರದಲ್ಲಿ ಗ್ರಹಗತಿಯಲ್ಲಿ ಬದಲಾವಣೆಯಾಗಿದ್ದರೂ ಸಣ್ಣ ಬದಲಾವಣೆಯೇ ದೊಡ್ಡ ಸಂತೋಷಕ್ಕೆ ಕಾರಣವಾಗಿದೆ. ಉದ್ಯಮದಲ್ಲಿ ಪರಿವರ್ತನೆಯನ್ನು ತಂದುಕೊಳ್ಳುವ ಸಂಭವವಿದೆ. ವಿರೋಧದಿಂದ ಭಯವಿದ್ದರೂ ಅದನ್ನು ಪ್ರಕಾಶಪಡಿಸಲಾರಿರಿ. ಯಾವುದಕ್ಕೂ ಉದ್ವೇಗ ಮಾಡದೇ ತಾಳ್ಮೆ ಕಳೆಯದೇ ಇರುವುದು ಶ್ರೇಯಸ್ಕರ

ಮೇಷ ರಾಶಿ:

ಡಿಸೆಂಬರ್ ಮೊದಲ ವಾರ ರವಿಯ ಅನುಗ್ರಹವು ಕಾರ್ಯದಲ್ಲಿ ಉತ್ಸಾಹವೃದ್ಧಿಗೆ ಕಾರಣ. ಮಧ್ಯದಲ್ಲಿ ಮಾತಿನ ಕಠೋರತೆ, ನಿಂದನೆಗಳಿದ್ದರೂ ಧೈರ್ಯ, ದಕ್ಷತೆಯಿಂದ ನೀವೇ ಮೇಲುಗೈ ಸಾಧಿಸಬಹುದು. ಸಣ್ಣ ವಿಘ್ನಗಳು ಅವಕಾಶವಾಗಿ ರೂಪಾಂತರಗೊಳ್ಳುವುದು. ವಾರಾಂತ್ಯದಲ್ಲಿ ಪುರುಷಾರ್ಥದ ಫಲ ಸ್ಪಷ್ಟವಾಗಿ ಗೋಚರಿಸುತ್ತದೆ, ಮಾನ್ಯತೆ, ನೂತನ ಕಾರ್ಯಾರಂಭದ ಸಂಕೇತ ಶುಭವಾಗಿ ಬೆಳಗುವುದು.

ವೃಷಭ ರಾಶಿ:

ಎರಡನೇ ರಾಶಿಯವರಿಗೆ ಈ ವಾರ ಶುಕ್ರ ಬಲಿಯಾದ ಕಾರಣ ಪ್ರಾರಂಭದಲ್ಲಿ ಕಾರ್ಯವ್ಯವಸ್ಥೆಯಲ್ಲಿ ಸ್ಥೈರ್ಯ, ಹಣಕಾಸು ಹಾಗೂ ದಾಖಲೆಗಳಲ್ಲಿ ಸ್ಪಷ್ಟತೆ. ಸಹೋದ್ಯೋಗಿಗಳ ಸೌಹಾರ್ದ ನೆರವಿನ ಅಪೇಕ್ಷೆಯನ್ನು ಪ್ರಕಟಿಸಿ. ಯೋಚಿಸಿ ನಡೆಯುವುದರಿಂದ ಪ್ರಯೋಜನ. ವಾರಾಂತ್ಯದಲ್ಲಿ ನೂತನ ಹೊಣೆಗಾರಿಕೆಯ ಪ್ರಯತ್ನ ಫಲಭರಿತವಾಗಿ ಪರಿಹಾರವಾಗಿ ಪರಿಣಮಿಸುತ್ತದೆ.

ಮಿಥುನ ರಾಶಿ:

ಬುಧಾಧಿಪತ್ಯದ ಈ ರಾಶಿಯವರಿಗೆ ಈ ವಾರ ತೀಕ್ಷ್ಣ ಮತಿಯವರಿಗೆ ಇನ್ನಷ್ಟು ತೀಕ್ಷ್ಣತೆ ಬರಲಿದೆ. ಗೊಂದಲಮಯ ಕಾರ್ಯಗಳು ಚರ್ಚೆಗಳ ಮೂಲಕ ಸುಲಭವಾಗಿ ಪರಿಹರಿಸಲ್ಪಡುತ್ತವೆ. ಸಂದರ್ಶನ ಹಾಗೂ ನಿಯುಕ್ತಿಗೆ ಬೇಕಾಗುವಂತೆ ಸಿದ್ಧತೆ ಇರುವುದು. ನಿಮ್ಮ ಮಾತಿಗೆ ಸರಿಯಾದ ಆಧಾರವಿರಲಿ. ಗೊಂದಲಕ್ಕೆ ಆಸ್ಪದ ಬೇಡ. ವಾರಾಂತ್ಯದಲ್ಲಿ ಪಾಂಡಿತ್ಯಕ್ಕೆ ಮೆಚ್ಚುಗೆಯನ್ನು ಪಡೆದುಕೊಳ್ಳಿ, ಕಾರ್ಯಕ್ಷೇತ್ರದಲ್ಲಿ ಶುಭಸ್ಥಿತಿಯ ಉದಯ.

ಕರ್ಕಾಟಕ ರಾಶಿ:

ಈ ರಾಶಿಯವರಿಗೆ ವಾರದ ಆರಂಭದಲ್ಲಿ ಚಂದ್ರನ ಚಂಚಲತೆಯು ನಿಮಗೂ ಬರಲಿದೆ. ಕೆಲವು ದಿನಗಳಲ್ಲಿ ಸ್ವಲ್ಪ ವ್ಯಗ್ರ ರೂಪವನ್ನು ಪಡೆದುಕೊಳ್ಳಿ. ಹಿರಿಯರ ಮಾರ್ಗದರ್ಶನದಿಂದ ನಿರುದ್ಯೋಗದ ನಿಮಗೆ ದಿಕ್ಕು ದೃಢೀಕರಣ. ವಾರಾಂತ್ಯದಲ್ಲಿ ಪ್ರಯಾಣ ಮೊದಲಿನ ಪ್ರಯಾಣಕ್ಕಿಂತ ಮತ್ತೊಂದು ಕಡೆಗೆ ಬದಲಾವಣೆ ಆಗುವುದು. ಮನಃಸ್ಥೈರ್ಯವೇ ಯಶಸ್ಸಿನ ಮೂಲ ।

ಸಿಂಹ ರಾಶಿ:

ಐದನೆಯ ರಾಶಿಯವರಿಗೆ ಡಿಸೆಂಬರ್ ಮೊದಲ ವಾರ ರವಿಯ ಪ್ರಖರದ ಕಿರಣವು ಆರೋಗ್ಯದ ಪ್ರಭಾವವನ್ನು ಬೀರುವುದು. ಹೊಸ ಯೋಜನೆಗಳ ಆರಂಭಕ್ಕೆ ಅವಕಾಶವಿದ್ದರೂ ಜೊತೆಗಾರರ ​​ಒಮ್ಮತ ಸಿಗದು. ಅನ್ಯರಲ್ಲಿ ಸ್ಪರ್ಧಾತ್ಮಕತೆಯನ್ನು ಕಂಡರೂ ಶೌರ್ಯದಿಂದ ಅದನ್ನು ಸುಲಭವಾಗಿ ಮೀರುತ್ತೀರಿ. ವಾರಾಂತ್ಯದಲ್ಲಿ ಸಾಮರ್ಥ್ಯ ಗೌರವಕ್ಕೆ ಪಾತ್ರವಾಗಿ, ಕಾರ್ಯಕ್ಷೇತ್ರದಲ್ಲಿ ಚೈತನ್ಯ ಹೆಚ್ಚುವುದು.

ಕನ್ಯಾ ರಾಶಿ:

ಡಿಸೆಂಬರ್ ಮೊದಲ ವಾರ ಬುಧಾನುಗ್ರಹದಿಂದ ಲೆಕ್ಕಪತ್ರ, ದಾಖಲೆ, ತಂತ್ರಜ್ಞಾನದಲ್ಲಿ ಮಗ್ನರು. ಹೇಗಾದರೂ ಪ್ರಸಿದ್ಧಿಯನ್ನು ಪಡೆದುಕೊಳ್ಳಿ. ವಾರದ ಮಧ್ಯದಲ್ಲಿ ನಿಮ್ಮವರಿಂದ ನಿಮ್ಮ ಪರಿಶ್ರಮ ಗುರುತಿಸಲ್ಪಡುತ್ತದೆ. ವಾರಾಂತ್ಯದಲ್ಲಿ ನಿಮ್ಮ ಸೇವೆಗೆ ಹೆಚ್ಚು ಜವಾಬ್ದಾರಿಯಿಂದ ಲಾಭ. ಕಾರ್ಯಕ್ಷೇತ್ರದಲ್ಲಿ ಸ್ಥಾನದ ಶಕ್ತಿಯನ್ನು ಪ್ರಯೋಗಿಸುವಿರಿ.

ತುಲಾ ರಾಶಿ:

ರಾಶಿಯ ಅಧಿಪತಿ ಶುಕ್ರನು ಈ ವಾರ ದ್ವಿತೀಯದಲ್ಲಿ ವ್ಯವಹಾರದ ಮಾತುಕತೆಗಳಲ್ಲಿ ಶುಭಫಲ. ಮೃದುಭಾಷೆ ಹಾಗೂ ಚಮತ್ಕಾರದ ಭಾಷೆಯೇ ಕಾರ್ಯಸಿದ್ಧಿಗೆ ಕಾರಣ. ವಾರದ ಮಧ್ಯದಲ್ಲಿ ಹಿರಿಯರ ಅನುಮೋದನೆಯಿಂದ ಸಂತಸ. ವಾರಾಂತ್ಯದಲ್ಲಿ ಗ್ರಾಹಕಸಂಪರ್ಕ, ಕಾರ್ಯದ ಸಮತೋಲನ. ಸೌಹಾರ್ದದಿಂದ ಕೆಲಸ ಕಾರ್ಯದ ಮಾತುಗಾರಿಕೆಯಲ್ಲಿ ಉತ್ಸಾಹ.

ವೃಶ್ಚಿಕ ರಾಶಿ:

ಈ ರಾಶಿಯಲ್ಲಿಯೇ ರಾಶಿಯ ಅಧಿಪತಿ ಕುಜನಿದ್ದು ಈ ವಾರ ಬಲದಿಂದ ಯಾವುದನ್ನೂ ಮಾಡಬಹುದು ಎಂಬ ಅತಿಯಾದ ಆಸೆಯುಂಟಾಗಲಿದೆ. ಸಂಶೋಧನೆಗೆ ಬೇಕಾದ ಪೂರಕ ಮಾಹಿತಿಗಳಿಂದ ನೆಮ್ಮದಿ ಹಾಗೂ ಯಶ. ವಾರದ ಮಧ್ಯದಲ್ಲಿ ಬಲವಿಲ್ಲದೇ ಇರುವ ಕಾರ್ಯಗಳು ಸುಮ್ಮನೆ ನಾಶವಾಗುವವು. ತಂತ್ರಬಲ ಹಿರಿಯರಿಂದ ಮೆಚ್ಚುಗೆ ಪಡೆದು ವಾರಾಂತ್ಯದಲ್ಲಿ ನೂತನವಾಗಿ ಬಂದ ಕರ್ತವ್ಯವನ್ನು ಕರಗತ ಮಾಡಿಕೊಳ್ಳುವಿರಿ.

ಧನು ರಾಶಿ:

ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಗುರುವು ಯಥಾಸ್ಥಾನಕ್ಕೆ ಬರಲಿದೆ, ದೃಷ್ಟಿಯು ಈ ಮೇಲೆ ಇರುವ ಕಾರಣ ನೂತನ ಅವಕಾಶಗಳ ದ್ವಾರ ತೆರೆದಂತಾಗುತ್ತದೆ. ಆರಂಭದಲ್ಲಿ ಮನಸ್ಸಿನಲ್ಲಿ ಕಂಪನವಿದ್ದರೂ ವಾರದ ಮಧ್ಯದಲ್ಲಿ ನಿರ್ಧಾರಗಳಿಗೆ ಸ್ಪಷ್ಟತೆ ಸಿಗುತ್ತದೆ. ವಿದೇಶ ಅಥವಾ ದೂರದ ಕಾರ್ಯಗಳಿಗೆ ತೆರಳುವಿರಿ. ವಾರಾಂತ್ಯದಲ್ಲಿ ತೆಗೆದುಕೊಳ್ಳುವ ನಿರ್ಣಯ ಭವಿಷ್ಯಕ್ಕೆ ಧೃಡವಾದ ದಿಕ್ಕನ್ನು ತೋರಿಸುವುದು.

ಮಕರ ರಾಶಿ:

ಡಿಸೆಂಬರ್ ಮೊದಲ ವಾರ ಶನಿಯ ಅಧಿಪತ್ಯದ ಈ ರಾಶಿಗೆ ಮತಿಯ ಸ್ಥಿರದಿಂದ ನಿಧಾನಗತಿಯಾದರೂ ಖಚಿತವಾದ ಪ್ರಗತಿ. ಆರಂಭಿಕ ಹಣಕಾಸು ಸುಧಾರಣೆಯ ಚಿಂತೆಯೇ ಹೆಚ್ಚು. ವಾರದ ಮಧ್ಯದಲ್ಲಿ ಪರಿಶ್ರಮದಿಂದ ಅನಾರೋಗ್ಯ. ವಾರದ ಕೊನೆಯಲ್ಲಿ ಕೌಶಲ್ಯದಿಂದ ತಂಡದ ಮೇಲೆ ಪ್ರಭಾವ ಬೀಳುವುದು. ಸ್ಥಿರಾಸ್ತಿಯ ಆಧಿಕ್ಯಕ್ಕೆ ಪ್ರಾರ ಕೊಡುವಿರಿ.

ಇದನ್ನೂ ಓದಿ: ನವೆಂಬರ್ ತಿಂಗಳ ಕೊನೆಯ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

ಕುಂಭ ರಾಶಿ:

ಈ ರಾಶಿಯವರಿಗೆ ಉದ್ಯೋಗಾಧಿಪತಿ ಸ್ವಸ್ಥಾನದಲ್ಲಿ ಹಾಗೂ ಕರ್ಮಾಧಿಪತಿ ದ್ವಿತೀಯದಲ್ಲಿದ್ದು ಸೃಜನಾತ್ಮಕ ಶಕ್ತಿಯು ವಾರವಿಡೀ ಪ್ರಬಲವಾಗಿರುತ್ತದೆ. ಯಂತ್ರ ಹಾಗೂ ಇತರೆ ಉದ್ಯೋಗದಲ್ಲಿ ಮುನ್ನಡೆ. ಈ ವಾರ ಮಧ್ಯದಲ್ಲಿ ತಂತ್ರಜ್ಞಾನಾಧಾರಿತ ಕೆಲಸಗಳಲ್ಲಿ ಯಥಾಶಕ್ತಿ ಕಾರ್ಯ. ನಿಮ್ಮ ಕಲ್ಪನೆಗಳು ಸ್ವೀಕಾರಾರ್ಹ ಪ್ರದರ್ಶನ. ವಾರಾಂತ್ಯದಲ್ಲಿ ಬಾಕಿ ಕೆಲಸಗಳ ಅಂತ್ಯ.

ಮೀನ ರಾಶಿ:

ರಾಶಿ ಚಕ್ರದ ಕೊನೆಯ ರಾಶಿಯವರಿಗೆ ಈ ವಾರ ಮನೋನಿಗ್ರಹ ಅಸಾಧ್ಯ ಎನಿಸಬಹುದು. ಆರಂಭದ ಉತ್ಸಾಹ ಮುಂದಕ್ಕೆ ಇರದು. ವಾರದ ಮಧ್ಯದಲ್ಲಿ ಚರ್ಚೆಗಳಲ್ಲಿ ವಾಕ್ಪಾಟುತ್ವಕ್ಕೆ ಜಯ. ಪ್ರಭಾವಿಗಳಿಂದ ಸ್ಥಾನಮಾನ ಗಟ್ಟಿಯಾಗುವುದು. ವಾರದ ಅಂತ್ಯದಲ್ಲಿ ನಿಯೋಜಿತ ಹುದ್ದೆಗೆ ಹಾಜರಾಗಿ. ಆತ್ಮಸ್ಥೈರ್ಯವಿದ್ದರೂ ಯಶಸ್ಸಿಗೆ ಧಕ್ಕೆ.

– ಲೋಹಿತ ಹೆಬ್ಬಾರ್ – 8762924271 (What’s app only)



Source link

Leave a Reply

Your email address will not be published. Required fields are marked *