ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?


ಜನವರಿ, ಮಾರ್ಚ್ 2: ಪಶ್ಚಿಮ ಏಷ್ಯನ್ ಪ್ರದೇಶದಲ್ಲಿ ಯುದ್ಧದ ವಾತಾವರಣ ಹೀಗೇ ಮುಂದುವರಿದರೆ ಚಿನ್ನದ ಬೆಲೆ (ಚಿನ್ನದ ದರಗಳು) ಹೈಜಂಪ್ ಮಾಡಿಕೊಂಡು ಸಾಗಬಹುದು ಎಂದು ಪರಿಣಿತರು ಗಮನಿಸಿದ್ದಾರೆ. ಹೂಡಿಕೆದಾರರು ಗೋಲ್ಡ್ ಇಟಿಎಫ್‌ಗಳನ್ನು ಹಣ ಹಾಕುವುದನ್ನು ಹೆಚ್ಚಿಸಿದ್ದಾರೆ. ಇದು ಇನ್ನೂ ಹೆಚ್ಚಾಗಿರುತ್ತದೆ. ಡಾಲರ್ ಎದುರು ರುಪಾಯಿ ಮೌಲ್ಯದ ಕುಸಿತದ ಪರಿಣಾಮವೂ ಚಿನ್ನದ ಬೆಲೆ ಮೇಲೆ ಆಗಲಿದೆ.

20,000 ರೂ ಸಮೀಪಕ್ಕೆ ಚಿನ್ನದ ಬೆಲೆ?

ಸ್ಪಾಟ್ ಗೋಲ್ಡ್ ಬೆಲೆ ಒಂದು ಔನ್ಸ್‌ಗೆ 5,400 ಯುಎಸ್ ಡಾಲರ್ ಇದೆ. ಅಂದರೆ, ಅಂತರರಾಷ್ಟ್ರೀಯ ಒಂದು ಗ್ರಾಮಕ್ಕೆ 17,434 ರೂ ಬೆಲೆ ಇದೆ. ಈಗ ಜಾಗತಿಕವಾಗಿ ಭಯದ ವಾತಾವರಣ ತೀವ್ರಗೊಳ್ಳುತ್ತಿದೆ, ಇಂತಹ ಚಿನ್ನದ ಮೇಲೆ ಹೂಡಿಕೆಗಳು ಹೆಚ್ಚುತ್ತಿವೆ ಸ್ವಾಭಾವಿಕ. ಈಗ ಅದೇ ಆಗುತ್ತಿದೆ. ತಜ್ಞರು ಮಾಡಿರುವ ಅಂದಾಜು ಪ್ರಕಾರ, ಒಂದು ಔನ್ಸ್‌ಗೆ 5,400 ಡಾಲರ್ ಇರುವ ಚಿನ್ನದ ಬೆಲೆ ಕೆಲವು ದಿನಗಳಲ್ಲಿ 6,000 ಡಾಲರ್ ತಲುಪಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 19,400 ರೂ ಮುಟ್ಟಬಹುದು.

ಇದನ್ನೂ ಓದಿ: ಇರಾನ್ ಯುದ್ಧ; ಭಾರತದ ಬಾಸ್ಮತಿ ಅಕ್ಕಿ ರಫ್ತುದಾರರಿಗೆ 50,000 ಕೋಟಿ ರೂ ಬ್ಯುಸಿನೆಸ್ ಕೈತಪ್ಪುವ ಚಿಂತೆ

ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿಯನ್ನು ಹೆಚ್ಚಿಸಲಿವೆ. ಚಿನ್ನದ ಐಟಿಎಫ್‌ಗಳ ಮೇಲೆ ಹೂಡಿಕೆ ಹೆಚ್ಚಲಿವೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿದೆ. ಈ ಮೂರು ಅಂಶಗಳು ಚಿನ್ನದ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಬಹುದು. ಚಿನ್ನ, ಬೆಳ್ಳಿ ಬೆಲೆಯೂ ಜಂಪ್ ಪಡೆಯಬಹುದು.

ಭಾರತದಲ್ಲಿ ಚಿನ್ನದ ಬೆಲೆ ಸೋಮವಾರ ಬೆಳಗ್ಗೆ ಭರ್ಜರಿ ಇಳಿಕೆ ಕಂಡು ನಂತರ ಮತ್ತೆ ಶೇ. 4.37ರಷ್ಟು ಮೇಲೇರಿದೆ. ಅಪರಂಜಿ ಚಿನ್ನದ ಬೆಲೆ 17,000 ರೂ ಸಮೀಪಕ್ಕೆ ಹೋಗಿದೆ. ಬೆಳ್ಳಿ ಬೆಲೆ ಗ್ರಾಮಕ್ಕೆ 296 ರೂ ದಾಟಿದೆ.

ಇದನ್ನೂ ಓದಿ: ಯುದ್ಧದಿಂದ ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಗತಿ ಏನು? ದೇಶದಲ್ಲಿರುವ ಪೆಟ್ರೋಲ್ ಎಷ್ಟು ದಿನಕ್ಕೆ ಆಗುತ್ತೆ?

ತೈಲ ಬೆಲೆ ಏರಿಕೆ

ಇರಾನ್ ಯುದ್ಧದ ಪರಿಣಾಮ ತೈಲ ಬೆಲೆ ಏರಿಕೆ ಆಗುವ ಭೀತಿ ಇದೆ. ಹೆಚ್ಚಿನ ಮಟ್ಟದಲ್ಲಿರುವ ತೈಲ ಬೆಲೆ ಬ್ಯಾರಲ್‌ಗೆ 90 ಡಾಲರ್‌ಗಳಷ್ಟು ಹೆಚ್ಚಿನ ಕಾಲ ಮುಂದುವರಿದರೆ ಭಾರತದ ಆರ್ಥಿಕತೆಗೆ ತುಸು ಹಿನ್ನಡೆ ತರಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *