
ಕೋಲ್ಕತಾ, ಮಾರ್ಚ್ 31: ಭಾರತೀಯ ಟೆನಿಸ್ನ ಸರ್ವಶ್ರೇಷ್ಠ ಆಟಗಾರನೆಂದು ಪರಿಗಣಿಸಲಾಗಿದೆ ಲಿಯಾಂಡರ್ ಪೇಸ್ (ಲಿಯಾಂಡರ್ ಪೇಸ್) ಅವರು ಬಿಜೆಪಿ ಪಕ್ಷವನ್ನು ಸೇರಿಸಿದ್ದಾರೆ. ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಅಖಾಡಕ್ಕೆ ಪೇಸ್ ಧುಮುಕಿದ್ದಾರೆ. ಇದರೊಂದಿಗೆ, ಬಂಗಾಳದ ಚುನಾವಣಾ ರಂಗು ಮತ್ತಷ್ಟು ಹೆಚ್ಚಿದೆ. ಸೆಲಬ್ರಿಟಿಗಳ ಸಂಖ್ಯೆಯು ಹೆಚ್ಚಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ಪಕ್ಷವಾದ ತೃಣಮೂಲ ಕಾಂಗ್ರೆಸ್ ಇದೀಗ ಪೇಸ್ರ ಬಿಜೆಪಿ ಸೇರ್ಪಡೆಯನ್ನು ಲೇವಡಿ ಮಾಡಿದೆ. ಮತ್ತೊಬ್ಬ ಹೊರಗಿನವರು ಬಿಜೆಪಿಗೆ ಬಂದಿದ್ದಾರೆ ಎಂದು ಟಿಎಂಸಿ ಟೀಕಿಸಿದ್ದಾರೆ.
ಲಿಯಾಂಡರ್ ಪೇಸ್ ಬಂಗಾಳಿಯಲ್ಲವಾ?
ಲಿಯಾಂಡರ್ ಪೇಸ್ ಅವರು ಅರ್ಧ ಬಂಗಾಳಿ, ಅರ್ಧ ಗೋವನ್. ಅವರ ತಂದೆ ವೀಸ್ ಪೇಸ್ ಗೋವಾದವರು. ತಾಯಿ ಬಂಗಾಳಿಯವರು. ಲಿಯಾಂಡರ್ ಪೇಸ್ ಹುಟ್ಟಿ ಬೆಳೆದಿದ್ದೆಲ್ಲಾ ಕೋಲ್ಕತಾದಲ್ಲಿ. ನಂತರದ ಅವರ ಕಾರ್ಯಕ್ಷೇತ್ರ ಗೋವಾಗೆ ವರ್ಗವಾಯಿತು.
ಇದನ್ನೂ ಓದಿ: ಭಾರತದ ನಂ. 1 ಏರ್ಲೈನ್ಸ್ ಸಂಸ್ಥೆ ಇಂಡಿಗೋಗೆ ವಿಲಿಯಂ ವಾಲ್ಷ್ ನೂತನ ಸಿಐಒ
ಅಪ್ಪಟ ಕ್ರೀಡಾ ಕುಟುಂಬ ಪೇಸ್ ರದ್ದು
ಲಿಯಾಂಡರ್ ಪೇಸ್ ಅವರ ತಂದೆ ವೀಸ್ ಪೇಸ್ ಅವರು ಪ್ರಖ್ಯಾತ ಹಾಕಿ ಆಟಗಾರ. 1972ರಲ್ಲಿ ಜರ್ಮನಿಯ ಮ್ಯೂನಿಕ್ನಲ್ಲಿ ನಡೆದ ಲಂಡನ್ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಸದಸ್ಯರಾಗಿದ್ದರು.
ಪೇಸ್ ಅವರ ತಾಯಿ ಜೆನ್ನಿಫರ್ ಅವರು ಬಂಗಾಳಿ ಕವಿ ಮೈಕೆಲ್ ಮಧುಸೂದನ್ ದತ್ತ ಅವರ ಮರಿಮೊಮ್ಮಗಳು. 1980ರ ಏಷ್ಯನ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿದ್ದರು.
ಇದನ್ನೂ ಓದಿ: ಗುಜರಾತ್ನಲ್ಲಿ 3,30 ಕೋಟಿ ರೂ ವೆಚ್ಚದ ಕೇನ್ಸ್ ಸಮಿಕಾನ್ ಘಟಕ ಉದ್ಘಾಟನೆ ಮಾಡಿದ ನರೇಂದ್ರ ಮೋದಿ
ಟೆನಿಸ್ ಮಾಂತ್ರಿಕ ಲಿಯಾಂಡ್ ಪೇಸ್
ಲಿಯಾಂಡರ್ ಪೇಸ್ ಅವರು ಪದಕ ಗೆದ್ದಿರುವ ಹೆಗ್ಗಳಿಕೆ ಹೊಂದಿದ್ಧಾರೆ. ಅನೇಕ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ವಿಶ್ವ ಸಾರ್ವಕಾಲಿಕ ಟೆನಿಸ್ ಡಬಲ್ಸ್ ಆಟಗಾರರಲ್ಲಿ ಅವರೂ ಒಬ್ಬರು. ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ ವಿಶ್ವ ಟೆನಿಸ್ ಡಬಲ್ಸ್ ನಲ್ಲಿ ಅದ್ವಿತೀಯ ಎನಿಸಿತ್ತು. 1986 ರಿಂದ 2020 ರವರೆಗೂ ಅವರು ಟೆನಿಸ್ನಲ್ಲಿ ಸಕ್ರಿಯವಾಗಿದ್ದರು. 47ರ ವಯಸ್ಸಿನಲ್ಲಿ ನಿವೃತ್ತಿಯಾಗುವ ಮುನ್ನ 18 ಗ್ರ್ಯಾನ್ ಸ್ಲಾಂ ಜಯಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಹೊರಟಿರುವ ಬಿಜೆಪಿಗೆ ಪೇಸ್ ಸೇರ್ಪಡೆ ಎಷ್ಟು ಸಹಾಯವಾಯಿತು? ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಮೇ 4 ರಂದು ಫಲಿತಾಂಶ ಪ್ರಕಟವಾಗುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ