ಬೆಂಗಳೂರು, ಫೆಬ್ರವರಿ 22: ಪ್ರಧಾನಿ ನರೇಂದ್ರ ಮೋದಿ ಅವರು 131ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಅಂಗಾಂಗ ದಾನದ ಕುರಿತು ಪ್ರಸ್ತಾಪಿಸಿದ್ದಾರೆ. ಈ ಕುರಿತಾಗಿವರ್ ಟ್ರಾನ್ಸ್‌ಪ್ಲಾಂಟ್ ತಜ್ಞ ಡಾ. ಸೋನಲ್ ಅಸ್ಥಾನ ಅವರು ಹೇಳಿಕೆ ನೀಡಿದ್ದು, ‘ಇದು ಅತ್ಯಂತ ಗಂಭೀರ ಮತ್ತು ಮಹತ್ವದ ವಿಷಯ. ಪ್ರತಿವರ್ಷ ಸುಮಾರು ಐದು ಲಕ್ಷ ಭಾರತೀಯರು ಕೊನೆ ಹಂತದಲ್ಲಿ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಅಂಗಾಂಗ ದಾನ ಒಂದೇ ಜೀವ ಉಳಿಸಲು ಪರಿಹಾರವಾಗಿದೆ. ನಮ್ಮ ದೇಶದ ಜನಸಂಖ್ಯೆ ಅಪಾರವಾಗಿದ್ದರೂ, ಶೇಕಡಾ ಒಂದು ಪ್ರತಿಶತಕ್ಕೂ ಕಡಿಮೆ ಜನರು ಮಾತ್ರ ಅಂಗಾಂಗ ದಾನ ಮಾಡುತ್ತಿದ್ದಾರೆ. ವಾಸ್ತವವಾಗಿ ವರ್ಷಕ್ಕೆ ದಾನಿಗಳ ಸಂಖ್ಯೆ 1500ಕ್ಕೂ ಕಡಿಮೆಯಾಗಿದೆ. ದೇಶದ ಪ್ರತಿಯೊಂದು ಮೂಲೆಗೂ ಅಂಗಾಂಗ ದಾನವನ್ನು ಉತ್ತೇಜಿಸುವ ರಾಷ್ಟ್ರೀಯ ಮಟ್ಟದ ಚಳುವಳಿ ಅಗತ್ಯವಿದೆ. ಈ ಮಹತ್ವದ ಸಂದೇಶದ ಬಗ್ಗೆ ಬೆಳಕು ಚೆಲ್ಲುವ ಪ್ರಧಾನಿ ಮೋದಿ ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಮ್ಮ ಇನ್ನಷ್ಟು ಸಹೋದರ ಸಹೋದರಿಯರು ಅಂಗಾಂಗ ದಾನ ಮಾಡಲು ಮುಂದೆ ಬರಲಿ ಎಂಬುದು ನನ್ನ ಆಸೆ’ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.