ನವದೆಹಲಿ, ಫೆಬ್ರುವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ (ಯೂನಿಯನ್ ಬಜೆಟ್ 2026) ಭಾಷಣದಲ್ಲಿ ಆರೆಂಜ್ ಏಕನಾಮಿ (ಆರೆಂಜ್ ಎಕಾನಮಿ) ಬಗ್ಗೆ ಮಾತನಾಡಿದ್ದಾರೆ. ಆರೆಂಜ್ ಏಕನಾಮಿ ಅಥವಾ ಕಿತ್ತಳೆ ಆರ್ಥಿಕತೆಗೆ ಪುಷ್ಟಿ ಕೊಡುವುದಾಗಿ ಹೇಳಿದ್ದಾರೆ. ಬಜೆಟ್‌ಗೆ ಮುಂಚೆಯೇ ಬಿಡುಗಡೆಯಾದ ಆರ್ಥಿಕ ಸಮೀಕ್ಷೆಯಲ್ಲೂ ಕಿತ್ತಳೆ ಆರ್ಥಿಕತೆಯ ಪ್ರಸ್ತಾಪವಿತ್ತು. ಸರ್ಕಾರ ಯಾಕೆ ಆರೆಂಜ್ ಏಕನಾಮಿ ಬಗ್ಗೆ ಮುತುವರ್ಜಿ ತೋರುತ್ತಿದೆ?
ಆರೆಂಜ್ ಏಕನಾಮಿ ಎಂದರೇನು?
ಅನಿಮೇಶನ್, ಗೇಮಿಂಗ್, ಫಿಲಂ, ಮ್ಯೂಸಿಕ್, ಡಿಸೈನ್, ಡಿಜಿಟಲ್ ಕಾಂಟೆಂಟ್ ಇತ್ಯಾದಿ ಕ್ರಿಯೇಟಿವ್ ಕೆಲಸಗಳಿರುವ ಕ್ಷೇತ್ರವನ್ನು ಆರೆಂಜ್ ಎಕನಾಮಿ ಎಂದು ಬಣ್ಣಿಸಲಾಗುತ್ತದೆ. ಹೊಸ ಕ್ರಿಯೇಟಿವ್ ಐಡಿಯಾಗಳು, ಟೆಕ್ನಾಲಜಿ, ಸಂಸ್ಕೃತಿ ಇತ್ಯಾದಿಗಳಿಂದ ಪ್ರೇರಿತವಾದ ಈ ಉದ್ಯಮದಿಂದ ಉದ್ಯೋಗಸೃಷ್ಟಿ, ನಗರ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಮೌಲ್ಯ ವರ್ಧಿಸಬಲ್ಲದು.
ಜಾಹೀರಾತು, ಅನಿಮೇಷನ್, ಸಾಫ್ಟ್ವೇರ್ ಆಟಗಳು, ಸಿನಿಮಾ, ಫ್ಯಾಷನ್, ಪಬ್ಲಿಷಿಂಗ್ ಇತ್ಯಾದಿ ವಿಭಾಗಗಳು ಈ ಆರ್ಥಿಕ ವರ್ಗಕ್ಕೆ ಸೇರುತ್ತವೆ. ಯೂಟ್ಯೂಬ್ನ ಕಾಂಟೆಂಟ್ ಕ್ರಿಯೇಟರ್ಗಳು, ರೀಲ್ಸ್ ಮಾಡುವವರ ಬ್ಯೂಸಿನೆಸ್ ಕೂಡ ಇದೇ ವರ್ಗಕ್ಕೆ ಸೇರುತ್ತದೆ.
ಇದನ್ನೂ ಓದಿ: ಯೂನಿಯನ್ ಬಜೆಟ್ 2026-27: ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್
‘ಭಾರತದ ಅನಿಮೇಷನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ (ಎವಿಜಿಸಿ) ಸೆಕ್ಟರ್ ಬೆಳೆಯುತ್ತಿರುವ ಉದ್ಯಮವಾಗಿದೆ. 2030ರೊಳಗೆ 20 ಲಕ್ಷ ವೃತ್ತಿಪರರ ಅಗತ್ಯತೆ ಇದೆ. 15,000 ಹೈಸ್ಕೂಲುಗಳು, 500 ಕಾಲೇಜುಗಳಲ್ಲಿ ಎವಿಜಿಸಿ ಕಾಂಟೆಂಟ್ ಕ್ರಿಯೇಟರ್ ಲ್ಯಾಬ್‌ಗಳು ಮುಂಬೈನಲ್ಲಿರುವ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಕಂಟೆಂಟ್ ಟೆಕ್ನಾಲಜೀಸ್‌ಗೆ ನೆರವು ನೀಡುತ್ತವೆ’ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿದ್ದಾರೆ.
ವೇವ್ಸ್ ಸಮಿಟ್ನಲ್ಲೂ ಪ್ರಧಾನಿ ಮೋದಿಯ ಪ್ರಸ್ತಾಪ
2025ರವೇವ್ಸ್ ಶೃಂಗಸಭೆಯಲ್ಲಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಭಾರತದ ಆರೆಂಜ್ ಎಕನಾಮಿ ಬಗ್ಗೆ ಪ್ರಸ್ತಾಪಿಸಿದ್ದರು.
2025-26ರ ಆರ್ಥಿಕ ಸಮೀಕ್ಷೆಯು ಆರೆಂಜ್ ಏಕನಾಮಿ ಬಗ್ಗೆ ಪ್ರಸ್ತಾಪಿಸಿ, ಭಾರತದ ಉದ್ಯೋಗ, ನಗರ ಸೇವೆ ಮತ್ತು ಪ್ರವಾಸೋದ್ಯಮಕ್ಕೆ ಇದು ಪುಷ್ಟಿ ಕೊಡಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬಜೆಟ್ 2026 ಪ್ರಕಟಣೆ; ಬಾಂಗ್ಲಾದೇಶದಿಂದ ಹಿಡಿದು ಮಾರಿಷಸ್ ವರೆಗೆ ವಿವಿಧ ದೇಶಗಳಿಗೆ ಭಾರತ ಮಾಡುವ ಧನಸಹಾಯವೆಷ್ಟು?
ಕ್ರಿಯೇಟಿವ್ ಉದ್ಯಮಗಳನ್ನು ಮನರಂಜನೆಯ ಬ್ಯೂಸಿನೆಸ್ ಎಂದು ನೋಡದೇ ಏಕೀಕೃತ ನಗರ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ತಂತ್ರವನ್ನು ಪರಿಗಣಿಸಬೇಕು. ಡಿಸೈನರ್‌ಗಳು ಮತ್ತು ಕ್ರಿಯೇಟಿವ್ ಪ್ರೊಫೆಷನ್‌ಗಳ ಕೊರತೆಯನ್ನು ನೀಗಿಸಲು ಸೂಕ್ತವಾದ ಕೌಶಲ್ಯ ತರಬೇತಿಯ ವ್ಯವಸ್ಥೆ ಎಂಬಿತ್ಯಾದಿ ಸಲಹೆಗಳನ್ನು ಆರ್ಥಿಕ ಸಮಿಕ್ಷೆಯಲ್ಲಿ ನೀಡಲಾಗಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ