ಮೊಟ್ಟೆ ತಿನ್ನಲ್ಲ ಆದ್ರೂ 60ನೇ ವಯಸಲ್ಲಿ ಮಿಲಿಂದ್ ಸೋಮನ್ ಇಷ್ಟೊಂದು Fit & Hot ಹೇಗೆ?

ಮೊಟ್ಟೆ ತಿನ್ನಲ್ಲ ಆದ್ರೂ 60ನೇ ವಯಸಲ್ಲಿ ಮಿಲಿಂದ್ ಸೋಮನ್ ಇಷ್ಟೊಂದು Fit & Hot ಹೇಗೆ?

ಮೊಟ್ಟೆ ತಿನ್ನಲ್ಲ ಆದ್ರೂ 60ನೇ ವಯಸಲ್ಲಿ ಮಿಲಿಂದ್ ಸೋಮನ್ ಇಷ್ಟೊಂದು Fit & Hot ಹೇಗೆ?

ಮಿಲಿಂದ್ ಸೋಮನ್ ಅವರಿಗೆ 60 ವರ್ಷ ವಯಸ್ಸಾಗಿದ್ದರೂ, ಇಂದಿಗೂ ಅವರು 21 ವರ್ಷದ ನಟರಿಗೆ ಕಾಂಪಿಟೀಶನ್ ನೀಡುವಂತೆ ಫಿಟ್ ಆಗಿದ್ದಾರೆ. ಈ ವಯಸ್ಸಲ್ಲೂ ನಟ ಇಷ್ಟೊಂದು ಫಿಟ್ ಹಾಗೂ ಹಾಟ್ ಆಗಿರಲು ಕಾರಣ ಏನು? ಅವರು ಆಹಾರದಲ್ಲಿ ಏನು ಸೇವಿಸುತ್ತಾರೆ ಇಲ್ಲಿದೆ ಮಾಹಿತಿ.

ಮಿಲಿಂದ್ ಸೋಮನ್ ಅವರಿಗೆ 60 ವರ್ಷ ವಯಸ್ಸಾಗಿದ್ದರೂ ಇನ್ನೂ ಕೂಡ ಯಂಗ್ ಆಂಡ್ ಹ್ಯಾಂಡ್ಸಮ್. ಅವರ ಫಿಟ್ನೆಸ್ ನೋಡಿ ಜನರಿಗೆ ಅಚ್ಚರಿಯಾಗೋದು ಖಚಿತಾ. ಅವರು ಈ ವಯಸ್ಸಿನಲ್ಲಿ ಹೇಗೆ ಇಷ್ಟೊಂದು ಫಿಟ್ ಆಗಿದ್ದಾರೆ ಎಂದು ಜನರಿಗೆ ಅಚ್ಚರಿಯಾಗುತ್ತದೆ. ಈ ವಯಸ್ಸಿನಲ್ಲೂ ಅವರ ದೇಹವು ಯುವಕರಷ್ಟೇ ದೃಢವಾಗಿದೆ. ಇಂದಿಗೂ, ಅವರ ಸಿಕ್ಸ್ ಪ್ಯಾಕ್ ಅಬ್ಸ್, ಬಲವಾದ ಭುಜಗಳು ಮತ್ತು ಹೊಳೆಯುವ ಮುಖ ನೋಡಿದ್ರೆ ಅವರಿಗೆ ಇನ್ನೂ ವಯಸ್ಸಾಗಿಲ್ಲ ಎಂದೆನಿಸುತ್ತದೆ. ಹಾಗಿದ್ರೆ ಅವರು ಫಿಟ್ ಆಗಿರಲು ಏನು ಮಾಡುತ್ತಾರೆ? ಇಲ್ಲಿದೆ ಮಿಲಿಂದ್ ಸೋಮನ್ ಫಿಟ್ನೆಸ್ ಸೀಕ್ರೆಟ್.

ಮಿಲಿಂದ್ ಸದೃಢ ದೇಹವನ್ನು ನೋಡಿ ಜನರು ಸಾಮಾನ್ಯವಾಗಿ ಅವರು ಮೊಟ್ಟೆ ಮತ್ತು ಕೋಳಿ ಮಾಂಸ ತಿನ್ನುತ್ತಾರೆ ಎಂದುಕೊಂಡಿದ್ದಾರೆ. ಆದರೆ ಅವರು ನಾನ್ ವೆಜ್ ತಿನ್ನೋದೆ ಇಲ್ಲವಂತೆ. ಅವರು ಹೆಚ್ಚಾಗಿ ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಾರೆ ಮತ್ತು ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಸ್ವಲ್ಪ ಕೋಳಿ ಅಥವಾ ಮಟನ್ ತಿನ್ನುತ್ತಾರೆ.

ಪಪ್ಪಾಯಿ

ಕಲ್ಲಂಗಡಿ

ಋತುವಿಗೆ ಅನುಗುಣವಾಗಿ ಮಾವು ಕಲ್ಲಂಗಡಿ, ಅನಾನಸ್ ಮುಂತಾದ ಯಾವುದೇ ಸೀಸನಲ್ ಹಣ್ಣುಗಳನ್ನು ಸೇವಿಸುತ್ತಾರೆ.

ಇವರು ತಮ್ಮ ಆಹಾರದಲ್ಲಿ, ಬಾದಾಮಿ, ವಾಲ್ನಟ್ಸ್ ಮೊದಲಾದ ಡ್ರೈ ಫ್ರುಟ್ಸ್ ಅಥವಾ ನಟ್ಸ್ ಕೂಡ ಸೇವಿಸುತ್ತಾರೆ. ಇದಲ್ಲದೆ, ಅವರು ಬೆಳಿಗ್ಗೆ ಚಹಾ ಅಥವಾ ಕಾಫಿಯನ್ನು ಸೇವಿಸೋದಿಲ್ಲ. ಅದರ ಬದಲಾಗಿ ರೊಟ್ಟಿ, ಪ್ರೊಟೀನ್ ಭರಿತ ಆಹಾರ ಸೇವಿಸುತ್ತಾರೆ. ಇನ್ನು ಹೆವಿ ಬ್ರೇಕ್ ಫಾಸ್ಟ್ ಮಾಡೋದಿಲ್ಲ. ಹಣ್ಣುಗಳು ದೇಹಕ್ಕೆ ನೈಸರ್ಗಿಕ ಶಕ್ತಿ, ನೀರು ಮತ್ತು ನಾರನ್ನು ಒದಗಿಸುವುದರಿಂದ ಅವುಗಳನ್ನು ಹೆಚ್ಚಾಗಿ ಸೇವಿಸುತ್ತಾರೆ.

ಅವರು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಆರೋಗ್ಯಕರ ಊಟ ಮಾಡುತ್ತಾರೆ. ಸಾಮನ್ಯವಾಗಿ ಬೇಳೆ, ಅನ್ನ, ತರಕಾರಿಗಳು ಮತ್ತು ಖಿಚಡಿಯಂತಹ ಸರಳವಾದ ಮನೆಯಲ್ಲಿ ತಯಾರಿಸಿದ ಊಟಗಳನ್ನು ಸೇವಿಸುತ್ತಾರೆ, ಕನಿಷ್ಠ ಎಣ್ಣೆ ಮತ್ತು ಕನಿಷ್ಠ ಮಸಾಲೆ ಭರಿತ ಆಹಾರ ಸೇವಿಸುತ್ತಾರೆ. ಇನ್ನು ಜಂಕ್ ಫುಡ್, ಸಂಸ್ಕರಿಸಿದ ಆಹಾರಗಳನ್ನು ಮಿಲಿಂದ್ ಸೇವಿಸೋದೆ ಇಲ್ಲ.

Source link

Leave a Reply

Your email address will not be published. Required fields are marked *