
ಈ ಮದುವೆಗೆ ಕೇವಲ 100 ಜನ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಚಿತ್ರರಂಗದ ಕೆಲವೇ ಕೆಲವು ನಿರ್ದೇಶಕರು ಮತ್ತು ತೆಲಂಗಾಣದ ಪ್ರಮುಖ ರಾಜಕಾರಣಿಗಳು ಈ ಶುಭ ಕಾರ್ಯಕ್ಕೆ ಸಾಕ್ಷಿಯಾಗಲಿದ್ದಾರೆ.
ತಮ್ಮ ಮದುವೆಯನ್ನು ‘ದಿ ವೆಡ್ಡಿಂಗ್ ಆಫ್ ವಿರೋಶ್’ ಎಂದು ಹೆಸರಿಸಿರುವ ಈ ಜೋಡಿ, ಅಭಿಮಾನಿಗಳ ಪ್ರೀತಿಯಿಂದಲೇ ನಾವು ಒಂದಾಗಿದ್ದೇವೆ ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಮೂಲಕ ತೆರೆಯ ಮೇಲೆ ಮೋಡಿ ಮಾಡಿದ್ದ ಈ ಜೋಡಿ, ಈಗ ನಿಜ ಜೀವನದಲ್ಲಿ ಒಂದಾಗುತ್ತಿರುವುದು ದಕ್ಷಿಣ ಭಾರತದ ಚಿತ್ರರಂಗದ ಈ ವರ್ಷದ ಅತಿದೊಡ್ಡ ಸುದ್ದಿಯಾಗಿದೆ. ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಇವರ ರಿಸೆಪ್ಷನ್‌ಗೆ ಇಡೀ ಚಿತ್ರರಂಗವೇ ಹರಿದುಬರುವ ನಿರೀಕ್ಷೆಯಿದೆ.