
ರಣವೀರ್ ಸಿಂಗ್ ನಟನೆಯ ‘ಧುರಂಧರ 2’ (ಧುರಂದರ್ 2) ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ. ಆದಿತ್ಯ ಧರ್ ನಿರ್ದೇಶಿಸುತ್ತಿರುವ ಈ ಸಿನಿಮಾ ಭಾರತದ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಅಲ್ಲಿ ಉಗ್ರರ ವಿರುದ್ಧ ಏಕಾಂಗಿಯಾಗಿ ಹೋರಾಡುವ ಕತೆ ಇದೆ. ಖಂಡಿತ ಸಿನಿಮಾದ ಇಡೀ ಕತೆ ನಡೆಯುವುದು ಪಾಕಿಸ್ತಾನದಲ್ಲಿಯೇ. ಅದರಲ್ಲೂ ಪಾಕಿಸ್ತಾನದ ಕರಾಚಿಯ ಲಾಯಾರಿ ಎಂಬ ಸ್ಥಳದಲ್ಲಿ. ಸಿನಿಮಾ ನೋಡಿದವರು, ನಿರ್ದೇಶಕ ಆದಿತ್ಯ ಧರ್, ಪಾಕಿಸ್ತಾನವನ್ನು ಇರುವ ಹಾಗೆಯೇ ತೋರಿಸುತ್ತಿದ್ದಾರೆ ಎನ್ನುತ್ತಿದ್ದಾರೆ. ಸಿನಿಮಾದ ಕತೆ ನಡೆಯುವುದು ಪಾಕಿಸ್ತಾನದಲ್ಲಿ ಆದರೆ ಸಿನಿಮಾ ಚಿತ್ರೀಕರಣ ಆಗಿರುವುದು ಎಲ್ಲಿ?
ಗೊತ್ತಿರುವಂತೆ ಪಾಕಿಸ್ತಾನದಲ್ಲಿ ಭಾರತದ ಎಲ್ಲರಿಗೂ ಸಿನಿಮಾಗಳಿಗೆ ಅವಕಾಶ, ಅನುಮತಿ ನೀಡಲಾಗುವುದಿಲ್ಲ. ಜೊತೆಗೆ ಭದ್ರತಾ ಸಮಸ್ಯೆಯೂ ಇದ್ದೇ ಇರುತ್ತದೆ. ಇದೇ ಕಾರಣಕ್ಕೆ ನಿರ್ದೇಶಕ ಆದಿತ್ಯ ಧರ್ ಅವರು ಸಿನಿಮಾದ ಚಿತ್ರೀಕರಣವನ್ನು ಬೇರೆ ಬೇರೆ ಕಡೆ ಮಾಡಿದ್ದಾರೆ. ವಿಶೇಷವಾಗಿ ಭಾರತದ ಕೆಲವು ಭಾಗಗಳು ಮತ್ತು ಥೈಲ್ಯಾಂಡ್‌ಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಅದರಲ್ಲೂ ಭಾರತದಲ್ಲಿ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಕೆಲವು ಸಮಸ್ಯೆಗಳನ್ನು ಸಹ ಚಿತ್ರತಂಡ ಎದುರಿಸಿದೆ.
ಪಂಜಾಬ್ನ ಲುಧಿಯಾನದ ಸಮೀಪವಿರುವ ಖೇರಾ ಗ್ರಾಮದ ಪ್ರಮುಖ ಭಾಗಗಳನ್ನು ಚಿತ್ರೀಕರಿಸಲಾಗಿದೆ. ಅಲ್ಲಿನ ಕೆಲವು ಗಲ್ಲಿಗಳನ್ನು ಪಾಕಿಸ್ತಾನದ ‘ಲ್ಯಾರಿ’ ಪ್ರದೇಶದಂತೆ ಕಾಣುವಂತೆ ಹೊಂದಿಸಲಾಗಿದೆ. ಚಿತ್ರಕ್ಕಾಗಿ ಇಲ್ಲಿ ಪಾಕಿಸ್ತಾನಿ ಧ್ವಜಗಳನ್ನು ಹಾಕಿದಾಗ ಸ್ಥಳೀಯರಲ್ಲಿ ಕುತೂಹಲ ಮತ್ತು ಸ್ವಲ್ಪ ಗೊಂದಲವೂ ಉಂಟಾಗಿತ್ತು. ಕೆಲವು ಪ್ರಶ್ನೆ ಸಹ ಮಾಡಿದ್ದರಂತೆ. ಜೊತೆಗೆ, ಅಮೃತಸರದ ಸುವರ್ಣ ಮಂದಿರ ಮತ್ತು ಲುಧಿಯಾನದ ಸಾಹ್ನೆವಾಲ್ ವಿಮಾನ ನಿಲ್ದಾಣದ ಚಿತ್ರೀಕರಣ ನಡೆಯಿತು.
ಪಾಕಿಸ್ತಾನದ ಕರಾಚಿಯ ಕೆಲವು ದೃಶ್ಯಗಳನ್ನು ಮತ್ತು ಚಿತ್ರದ ಸಿನಿಮಾದ ಸಾಹಸ ಮತ್ತು ಕೆಲ ಚೇಸ್ ದೃಶ್ಯಗಳನ್ನು ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಮುಂಬೈನ ಫಿಲ್ಮಿಸ್ಟಾನ್ ಸ್ಟುಡಿಯೋ ಮತ್ತು ಮಡ್ ಐಲ್ಯಾಂಡ್‌ನಲ್ಲಿ ಚಿತ್ರದ ಒಳಾಂಗಣ ಮತ್ತು ಕೆಲವು ಕರಾವಳಿ ತೀರದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ದೋಂಬಿವಲಿ-ಮಂಕೋಲಿ ಸೇತುವೆಯ ಮೇಲೂ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯಿತು. ಕೆಲವು ಸಸ್ಪೆನ್ಸ್ ದೃಶ್ಯಗಳಿಗಾಗಿ ಲಡಾಖ್ನ ಹಿಮಪರ್ವ ಚಿತ್ರಗಳು ಮತ್ತು ಹಿಮಾಚಲ ಪ್ರದೇಶದ ಕಸೌಲಿ ಎಂಬ ಸುಂದರ ಪ್ರದೇಶಗಳನ್ನು ಬಳಸಿಕೊಳ್ಳಲಾಗಿದೆ.
ಇದನ್ನೂ ಓದಿ:’ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ
ನಿರ್ದೇಶಕ ಆದಿತ್ಯ ಧರ್ ಅವರು ಪಾಕಿಸ್ತಾನಕ್ಕೆ ಹೋಗದೆ ಪಾಕಿಸ್ತಾನವನ್ನು ಸೃಷ್ಟಿಸಿದ್ದಾರೆ. ಮಾರ್ಚ್ 19 ರಂದು ಬಿಡುಗಡೆ ಆಗಿರುವ ಈ ಸಿನಿಮಾ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಣವೀರ್ ಸಿಂಗ್ ಅವರು ‘ಜಸ್ಕಿರತ್ ಸಿಂಗ್ ರಂಗಿ’ ಅಲಿಯಾಸ್ ಹಮ್ಜಾ ಅಲಿ ಮಜಾರಿ ಎಂಬ ಗೂಢಚಾರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಅವರ ಜೊತೆಗೆ ಸಂಜಯ್ ದತ್ (ಚೌಧರಿ ಅಸ್ಲಂ), ಅರ್ಜುನ್ ರಾಂಪಾಲ್ (ಮೇಜರ್ ಇಕ್ಬಾಲ್), ಆರ್ ಮಾಧವನ್ (ಅಜಯ್ ಸನ್ಯಾಲ್) ಮತ್ತು ಅಕ್ಷಯ್ ಖನ್ನಾ (ರಹಮಾನ್ ಡಕೈತ್) ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು 3 ಗಂಟೆ 49 ನಿಮಿಷಗಳು ದೀರ್ಘವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ದೊಡ್ಡ ಸಾಹಸಮಯ ಚಿತ್ರಗಳು ಒಂದೆನಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ