Headlines

‘ಧುರಂಧರ್ 2’ ಬಳಿಕ ಆದಿತ್ಯ ಧರ್ ಮುಂದೆ ಮೂರು ದಾರಿ

‘ಧುರಂಧರ್ 2’ ಬಳಿಕ ಆದಿತ್ಯ ಧರ್ ಮುಂದೆ ಮೂರು ದಾರಿ


'ಧುರಂಧರ 2' ಬಳಿಕ ಆದಿತ್ಯ ಧರ್ ಮುಂದೆ ಮೂರು ದಾರಿ

ರಣವೀರ್ ಸಿಂಗ್ (ರಣವೀರ್ ಸಿಂಗ್) ನಟನೆಯ ‘ಧುರಂಧರ 2’ ಸಿನಿಮಾ ಭಾರಿ ಹಿಟ್ ಆಗಿದೆ. ಸಿನಿಮಾ, ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ‘ಧುರಂದರ್’ ಮತ್ತು ‘ಧುರಂಧರ 2’ ಸಿನಿಮಾಗಳ ಮೂಲಕ ಆದಿತ್ಯ ಧರ್, ಭಾರತದ ಟಾಪ್ ನಿರ್ದೇಶಕರ ಸಾಲಿಗೆ ಸೇರಿಕೊಂಡಿದ್ದಾರೆ. ಇದೀಗ ಆದಿತ್ಯ ಧರ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಸಿನಿಮಾ ತೆರೆಗೆ ಮೂಡಿದೆ. ಆದಿತ್ಯ ಧರ್ ಅವರ ಮುಂದೆ ಸದ್ಯಕ್ಕೆ ಮೂರು ಹಾದಿ ಇದೆ. ಅವರು ಯಾವುದು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಆದಿತ್ಯ ಧರ್, ಅವರು ಐತಿಹಾಸಿಕ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೌರ್ಯ ಸಾಮ್ರಾಜ್ಯದ ದೊರೆ ಚಂದ್ರಗುಪ್ತ ಮೌರ್ಯನ ಕಥೆ ಸಿನಿಮಾ ಮಾಡುವ ಯೋಜನೆ ಅವರ ಮುಂದಿದೆ. ಚಂದ್ರಗುಪ್ತ ಮೌರ್ಯ ಮತ್ತು ಚಾಣಕ್ಯರ ಕಥೆ ಆದಿತ್ಯ ಧರ್ ತೆರೆ ಮೇಲೆ ತರಲಿದ್ದಾರೆ. ಸಿನಿಮಾದಲ್ಲಿ ಚಂದ್ರಗುಪ್ತ ಮೌರ್ಯನಾಗಿ ರಣವೀರ್ ಸಿಂಗ್ ಮತ್ತು ಚಾಣಕ್ಯನಾಗಿ ಆದಿತ್ಯ ಅವರ ನೆಚ್ಚಿನ ನಟ ಅಕ್ಷಯ್ ಖನ್ನಾ ನಟಿಸಲಿದ್ದಾರಂತೆ.

ಆದಿತ್ಯ ಧರ್ ಅವರಿಗೆ ಅಶ್ವತ್ಥಾಮನ ಕುರಿತು ಸಿನಿಮಾ ಮಾಡುವ ಕನಸು ಹಲವು ವರ್ಷಗಳಿಂದಲೂ ಇದೆ. ಈ ವಿಷಯವನ್ನು ಈ ಹಿಂದೆಯೂ ಸಹ ಅವರು ಹೇಳಿದ್ದರು. ಆದರೆ ಅದಕ್ಕೆ ಅತಿಯಾದ ವಿಎಫ್‌ಎಕ್ಸ್, ಸೆಟ್‌ಗಳ ಅವಶ್ಯಕತೆ ಇದೆ, ಭಾರಿ ಬಂಡವಾಳ ಎಂದು ಆದಿತ್ಯ ಹೇಳಿದ್ದರು. ಇದೀಗ ‘ಧುರಂಧರ’ ಮತ್ತು ‘ಧುರಂಧರ 2’ ಸಿನಿಮಾಗಳು ಭಾರೀ ಹಿಟ್ ಆಗಿದ್ದು, ಎರಡು ಸಿನಿಮಾಗಳಿಗೆ ಆದಿತ್ಯ ಧರ್ ಸಹ ನಿರ್ಮಾಪಕರೂ ಆಗಿರುವ ಕಾರಣ, ಇದೀಗ ‘ಅಶ್ವತ್ಥಾಮ’ ಸಿನಿಮಾ ಮಾಡುವಷ್ಟು ಬಂಡವಾಳ ಕೂಡಿಕೊಂಡಿರುವ ಕಾರಣ ಹಾಗೂ ಆದಿತ್ಯ ಮೇಲೆ ಬಂಡವಾಳ ಹೂಡಲು ದೊಡ್ಡ ನಿರ್ಮಾಣ ಸಂಸ್ಥೆಗಳು ರೆಡಿಯಾಗಿ ಇದೀಗ ಅವರು ‘ಅಶ್ವತ್ಥಾಮ’ ಸಿನಿಮಾಕ್ಕೆ ಕೈ ಹಾಕುವ ಸಾಧ್ಯತೆ ಇದೆ.

ಇದನ್ನೂ ಓದಿ:’ಧುರಂಧರ 2′ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್

ಇನ್ನು ಕೆಲ ಸುದ್ದಿಗಳ ಪ್ರಕಾರ, ಆದಿತ್ಯ ಧರ್ ಅವರ ಮೊದಲ ಸಿನಿಮಾ ಮಾದರಿಯಲ್ಲೇ ಭಾರತೀಯ ಸೇನೆಯ ಆಪರೇಷನ್ ಒಂದರ ಕಥೆ ಸಿನಿಮಾ ಮಾಡಲಿದ್ದಾರೆ. ಆದಿತ್ಯ ಧರ್ ನಿರ್ದೇಶನ ಮಾಡಿದ್ದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ದೊಡ್ಡ ಹಿಟ್ ಆಗುತ್ತಿದೆ. ಇದೀಗ ಭಾರತೀಯ ಸೇನೆಯ ಕುರಿತಾಗಿಯೇ ಮತ್ತೊಂದು ಸಿನಿಮಾವನ್ನು ಆದಿತ್ಯ ಕೈಗೆತ್ತಿಕೊಳ್ಳಲಿದ್ದಾರೆ. ಈ ಮೂರು ಸಿನಿಮಾಗಳಲ್ಲಿ ಆದಿತ್ಯ ಅವರು ಯಾವ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *