
‘ಧುರಂಧರ’ (ಧುರಂಧರ) ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿದ ಸಿನಿಮಾ. 2025ರಲ್ಲಿ ಬಿಡುಗಡೆ ಆದ ಈ ಸಿನಿಮಾ ನಿರ್ದೇಶಿಸಿದ್ದು ಆದಿತ್ಯ ಧರ್. ‘ಧುರಂಧರ್’ ಅಂಥಾ ಬ್ಲಾಕ್ ಬಸ್ಟರ್ ಸಿನಿಮಾ ನಿರ್ದೇಶಿಸುವುದಕ್ಕೆ ಮುಂಚೆ ಆದಿತ್ಯ ನಿರ್ದೇಶಿಸಿದ್ದು ಒಂದೇ ಒಂದು ಸಿನಿಮಾ, ಅದೂ ಸಹ ಬ್ಲಾಕ್ ಬಸ್ಟರ್ ಆಗುತ್ತಿದೆ. ಅದುವೇ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’. ಆದರೆ ಎರಡು ಸೂಪರ್ ಹಿಟ್ ಸಿನಿಮಾ ನೀಡಿ, ಇದೀಗ ‘ಧುರಂಧರ 2’ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ನೀಡಲು ಸಜ್ಜಾಗಿರುವ ಆದಿತ್ಯ ಧರ್, ಚಿತ್ರರಂಗಕ್ಕೆ ಬಂದಿದ್ದೇ ಆಕಸ್ಮಿಕ. ಅಸಲಿಗೆ ಅವರ ಕ್ರಿಕೆಟರ್ ಆಗಬೇಕು ಎಂದಿದ್ದೆ.
ಆದಿತ್ಯ ಧರ್, ಮೂಲತಃ ಕಾಶ್ಮೀರಿ ಪಂಡಿತ್. ಎಳವೆಯಲ್ಲಿ ಡಿಸ್ಲೆಕ್ಸಿಯಾದಿಂದ ಬಳಲುತ್ತಿದ್ದ ಆದಿತ್ಯಗೆ ವಿದ್ಯೆ ಸುಲಭವಾಗಿ ತಲೆಗೆ ಹತ್ತುತ್ತಿತ್ತು. ಆದರೆ ಬಳಿಕ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಆದಿತ್ಯ, ಕ್ರಿಕೆಟರ್ ಆಗಬೇಕೆಂಬ ಕನಸು ಕಂಡಿದ್ದರು. ಆದಿತ್ಯ ಅವರು ಕ್ರಿಕೆಟ್ ಕೋಚಿಂಗ್ ಸಹ ಇದ್ದರು. ಭಾರತದ ಪರವಾಗಿ ಕ್ರಿಕೆಟ್ ಆಡಬೇಕು ಎಂಬ ಕನಸು ಹೊತ್ತು ಅಂಡರ್ 19 ಗೆ ಟ್ರಯಲ್ಸ್ ಸಹ ನೀಡಿದ್ದರು. ಆದರೆ ಅವರೇ ಹೇಳಿಕೊಂಡಿರುವ ಪ್ರಕಾರ, ಕೆಲ ರಾಜಕೀಯದ ಕಾರಣಕ್ಕೆ ಅವರಿಗೆ ಭಾರತದ ಅಂಡರ್ 19 ತಂಡದಲ್ಲಿ ಸ್ಥಾನ ಸಿಗಲಿಲ್ಲ. ಅದೇ ಬೇಸರದಲ್ಲಿ ಅವರು ಕ್ರಿಕೆಟಿನಿಂದಲೇ ದೂರಾಗಿಬಿಟ್ಟರು.
ಆದರೆ ಆದಿತ್ಯ ಅವರ ಜೀವನ ಬದಲಾಗಿದ್ದು 1993 ರಲ್ಲಿ ಬಿಡುಗಡೆ ಆದ ‘ಗರ್ದಿಶ್’ ಸಿನಿಮಾ ಮೂಲಕ. ಜಾಕಿ ಶ್ರಾಫ್ ನಟಿಸಿ ಪ್ರಿಯದರ್ಶನ್ ನಿರ್ದೇಶನ ಮಾಡಿದ್ದ ‘ಗರ್ದಿಶ್’ ಸಿನಿಮಾ ನೋಡಿ ತುಂಬಾ ಪ್ರಭಾವಕ್ಕೆ ಒಳಗಾದ ಆದಿತ್ಯ ಧರ್, ತಾನು ಆದರೆ ಸಿನಿಮಾ ನಿರ್ದೇಶಕನೇ ಆಗಬೇಕು, ಎಂದು ನಿರ್ಣಯಿಸಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಿರ್ದೇಶಕ ಪ್ರಿಯದರ್ಶನ್ ಬಳಿ ಸಹಾಯಕ ನಿರದೇಶಕನಾಗಿ ಅವರ ಜೊತೆಗಿದ್ದರು. ಆರಂಭದಲ್ಲಿ ಕೆಲವು ಕತೆಗಳನ್ನು ಸಹ ಬರೆದರು ಆದರೆ ಅಲ್ಲಿಯೂ ಅವರು ಕೆಲವು ಅನ್ಯಾಯಗಳನ್ನು ಎದುರಿಸಬೇಕಾಯ್ತು. ನಿರ್ದೇಶಕ ಪ್ರಿಯದರ್ಶನ್ ಹೇಳಿರುವಂತೆ ಅವರ ಕತೆಗಳನ್ನು ಬೇರೆಯವರು ಕದ್ದು ಬಿಟ್ಟರಂತೆ. ಅವರು ಮಾಡಿದ ಕೆಲಸಕ್ಕೆ ಅವರಿಗೆ ಗುರುತು ಸಹ ನೀಡುವಂತೆ.
ಇದನ್ನೂ ಓದಿ:’ಧುರಂಧರ 2′ ಚಿತ್ರಕ್ಕೆ ಶಾಕ್; ಬ್ಯಾನ್ ಆಗುತ್ತಾ ಆದಿತ್ಯ ಧಾರ್ ನಿರ್ಮಾಣ ಸಂಸ್ಥೆ?
ಆದರೆ ಪ್ರಿಯದರ್ಶನ್ ಅವರ ಬಳಿ ಮಾಡಿದ ಕೆಲಸದಿಂದ ಅವರಿಗೆ ಗುರುತು ಸಿಕ್ಕಿತು. ಪ್ರಿಯದರ್ಶನ್ ಅವರ ಸಿನಿಮಾಗಳಿಗೆ ಸಂಭಾಷಣೆಗಳನ್ನು ಬರೆದರು. ಪ್ರಿಯದರ್ಶನ್ ಅವರ ಸಂದರ್ಶನದಲ್ಲಿ ಹೇಳಿರುವ ಆದಿತ್ಯ ಬಹಳ ಒಳ್ಳೆಯ ಬರಹಗಾರ ಆಗಿದ್ದರು, ನನ್ನ ಸಿನಿಮಾಗಳಿಗೆ ಒಳ್ಳೆಯ ಸಂಭಾಷಣೆಗಳನ್ನು ಬರೆದುಕೊಡುವಂತೆ ಏರ್ಪಡಿಸಿದ್ದರು.
ಆದಿತ್ಯ ಧರ್ ಅವರು ಮೊದಲು ನಿರ್ದೇಶಕನಾಗಲು ಬೆಂಬಲ ನೀಡಿದ್ದು ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್. ಆದಿತ್ಯ ಧರ್ ‘ರಾತ್ ಬಾಕಿ’ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದರು. ಅದಕ್ಕೆ ನಿರ್ಮಾಪಕ ಆಗಿದ್ದು ಕರಣ್ ಜೋಹರ್. ಸಿನಿಮಾದಲ್ಲಿ ಕತ್ರಿನಾ ಕೈಫ್ ನಾಯಕಿ, ಪಾಕಿಸ್ತಾನಿ ನಟ ಫಹಾದ್ ಖಾನ್ ನಾಯಕ. ಆದರೆ ಅದೇ ಸಮಯದಲ್ಲಿ ಉರಿ ದಾಳಿ. ಪಾಕಿಸ್ತಾನಿ ನಟರನ್ನು ಕೈಬಿಡಬೇಕೆಂಬ ಒತ್ತಾಯ ಕರಣ್ ಮೇಲೆ ಬಂತು. ಇದೇ ಆದಿತ್ಯ ನಿರ್ದೇಶಿಸಬೇಕಿದ್ದ ‘ರಾತ್ ಬಾಕಿ’ ಸಿನಿಮಾ ನಿಂತೇ ಹೋಯ್ತು.
ಆದರೆ ಇದರಿಂದ ಎದೆಗುಂದದೆ ಸ್ಪೂರ್ತಿಯನ್ನೇ ಪಡೆದ ಆದಿತ್ಯ ಧರ್, ‘ಉರಿ’ ದಾಳಿ ಹಾಗೂ ಅದರ ಬಳಿಕ ಭಾರತೀಯ ಸೇನೆ ಮಾಡಿದ ಸರ್ಜಿಕಲ್ ಸ್ಟ್ರೈಕ್ ಅನ್ನೇ ವಸ್ತುವಾಗಿ ಇರಿಸಿಕೊಂಡು ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಮಾಡಿದರು. ‘ಉರಿ’ ಸಿನಿಮಾಕ್ಕೆ ವಿಕ್ಕಿ ಕೌಶಲ್ ನಾಯಕನಾಗಿ ಆಯ್ಕೆ ಮಾಡಿಕೊಂಡಾಗಲೂ ಆದಿತ್ಯ ಅವರನ್ನು ಟೀಕಿಸಿದವರೇ ಹೆಚ್ಚು. ಏಕೆಂದರೆ ಆಗ ವಿಕ್ಕಿ ಕೌಶಲ್ ಕಮರ್ಶಿಯಲ್ ನಾಯಕ ಎನಿಸಿಕೊಂಡಿರಲಿಲ್ಲ. ಆದರೆ ಆದಿತ್ಯಗೆ ವಿಕ್ಕಿ ಮೇಲೆ ನಂಬಿಕೆ ಇಟ್ಟು ಪಾತ್ರ ಕೊಟ್ಟರು, ಆ ಪಾತ್ರಕ್ಕೆ ವಿಕ್ಕಿ ಜೀವ ತುಂಬಿದರು. ನಂತರದ್ದು ಇತಿಹಾಸ.
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಆದರೆ ಅದಾದ ಬಳಿಕ ಕೆಲವು ಸಿನಿಮಾಗಳಿಗೆ ಕತೆ ಬರೆದು ಸಿನಿಮಾ ಸಹ ನಿರ್ಮಾಣ ಮಾಡಿದ ಆದಿತ್ಯ, ಆರು ವರ್ಷಗಳ ಬಳಿಕ ‘ಧುರಂಧರ’ ಸಿನಿಮಾ ಮಾಡಿದರು. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಇದೀಗ ಅದೇ ಸಿನಿಮಾದ ಸೀಕ್ವೆಲ್ ‘ಧುರಂಧರ 2’ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾ ಇದೇ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ, ಬಾಕ್ಸ್ ಆಫೀಸ್ ಚಿಂದಿ ಆಗುವುದು ಪಕ್ಕಾ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ