Headlines

‘ಟಾಕ್ಸಿಕ್’ ಚಿತ್ರದಲ್ಲಿ ಕಾಣಿಸೋ ಈ ಜೋಕರ್ ಯಾರು? ಇನ್ನೂ ಎಷ್ಟು ಟ್ವಿಸ್ಟ್ ಇದ್ಯಪ್ಪ?

‘ಟಾಕ್ಸಿಕ್’ ಚಿತ್ರದಲ್ಲಿ ಕಾಣಿಸೋ ಈ ಜೋಕರ್ ಯಾರು? ಇನ್ನೂ ಎಷ್ಟು ಟ್ವಿಸ್ಟ್ ಇದ್ಯಪ್ಪ?


‘ಟಾಕ್ಸಿಕ್’ ಚಿತ್ರ (ವಿಷಕಾರಿ ಚಲನಚಿತ್ರ) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿಯಾಗಿದೆ. ಟೀಸರ್ ರಿಲೀಸ್ ಆದ ಬಳಿಕ ಜನರು ಥ್ರಿಲ್ ಆಗಿದ್ದಾರೆ. ಈ ಸಿನಿಮಾದ ಟೀಸರ್ ಸಂಪೂರ್ಣವಾಗಿ ಯಶ್ ಅವರ ಮೇಲೆ ಸಾಗಿದೆ. ಟೀಸರ್ ನಲ್ಲಿ ಹಲವು ತಿಳಿಯದ ವಿಷಯಗಳಿವೆ. ಅದನ್ನು ಅಭಿಮಾನಿಗಳು ರಿವೀಲ್ ಮಾಡುತ್ತಿದ್ದಾರೆ. ಈಗ ಟೀಸರ್ ಅಲ್ಲಿ ಕಾಣಿಸೋ ಜೋಕರ್ ಯಾರು ಎಂಬುದು ರಿವೀಲ್ ಆಗೋ ಸಮಯ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ.

‘ಟಾಕ್ಸಿಕ್’ ಸಿನಿಮಾದ ಕಥೆ ಸಾಗೋದು 70 ಹಾಗೂ 80 ರಷ್ಟಿದೆ. ಆ ಸಂದರ್ಭದಲ್ಲಿ ಸರ್ಕಸ್ ಸಾಕಷ್ಟು ಪ್ರಚಲಿತದಲ್ಲಿತ್ತು. ಮನರಂಜನೆಗೆ ಹೆಚ್ಚಿನ ಆಯ್ಕೆ ಇಲ್ಲದ ಕಾರಣ ಜನರು ಮುಗಿಬಿದ್ದು ಸರ್ಕಸ್ ವೀಕ್ಷಣೆ ಮಾಡುತ್ತಿದ್ದರು. ‘ಟಾಕ್ಸಿಕ್’ ಚಿತ್ರದ ಕಥೆ ಆ ಘಟ್ಟದಲ್ಲೇ ಸಾಗುವುದರಿಂದ ‘ಟಾಕ್ಸಿಕ್’ ಚಿತ್ರದಲ್ಲಿ ಇದೇ ವಿಷಯವನ್ನು ಪ್ರಮುಖವಾಗಿ ತೆಗೆದುಕೊಳ್ಳಲಾಗಿದೆ.

ಮೊಟ್ಟ ಮೊದಲು ರಿಲೀಸ್ ಆದ ಗ್ಲಿಂಪ್ಸ್ ಅಲ್ಲಿ ಸರ್ಕಸ್ ಸೆಟ್ ತೋರಿಸಲಾಗಿದೆ. ಇತ್ತೀಚೆಗೆ ಬಿಡುಗಡೆ ಆದ ಟೀಸರ್ ಜೊತೆಗೆ ಸರ್ಕಸ್ ವಿಷಯವನ್ನು ತೋರಿಸಲಾಗಿದೆ. ಅದರಲ್ಲಿ ಜೋಕರ್ನನ್ನು ತೋರಿಸಲಾಗಿದೆ. ಇದು ಯಶ್ ಅವರೇ ಎಂದು ಹೇಳಲಾಗುತ್ತಿದೆ. ಟಿಕೆಟ್ ಹಾಗೂ ರಾಯ ಹೆಸರಿನ ಎರಡು ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಅಂದರೆ ಯಶ್ ಅವರದ್ದು ದ್ವಿಪಾತ್ರ. ಟಿಕೆಟ್ ಪಾತ್ರಧಾರಿಯೇ ಜೋಕರ್ ಎನ್ನುತ್ತಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ಯಾವ ರಾಜ್ಯಗಳಲ್ಲಿ ಯಾರು ಹಂಚಿಕೆ ಮಾಡ್ತಾರೆ? ಇಲ್ಲಿದೆ ಸಂಪೂರ್ಣ ಪಟ್ಟಿ

ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಹರಿದಾಡಿವೆ. ಇದಕ್ಕೆ ಸಾಕ್ಷಿಗಳನ್ನು ಕೂಡ ಒದಗಿಸಲಾಗಿದೆ. ಈ ಸಿನಿಮಾದಲ್ಲಿ ಇನ್ನೂ ಯಾವ ರೀತಿಯ ಟ್ವಿಸ್ಟ್‌ಗಳು ಇರಲಿವೆ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿದೆ. ಸಿನಿಮಾ ಡ್ರಗ್ಸ್ ಬಗ್ಗೆಯೂ ಇದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ಗ್ಯಾಂಗ್‌ಸ್ಟರ್ ಕಥೆ ಗಮನ ಸೆಳೆಯುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.





Source link

Leave a Reply

Your email address will not be published. Required fields are marked *