ದಿಢೀರ್ ಮದುವೆಯಾದ ವೈರಲ್ ಹುಡುಗಿ ಮೊನಾಲಿಸಾ ಗಂಡ ಫರ್ಮಾನ್ ಖಾನ್ ಯಾರು? ಕೇರಳದಲ್ಲೇ ಮದುವೆಯಾಗಿದ್ಯಾಕೆ?

ದಿಢೀರ್ ಮದುವೆಯಾದ ವೈರಲ್ ಹುಡುಗಿ ಮೊನಾಲಿಸಾ ಗಂಡ ಫರ್ಮಾನ್ ಖಾನ್ ಯಾರು? ಕೇರಳದಲ್ಲೇ ಮದುವೆಯಾಗಿದ್ಯಾಕೆ?

ದಿಢೀರ್ ಮದುವೆಯಾದ ವೈರಲ್ ಹುಡುಗಿ ಮೊನಾಲಿಸಾ ಗಂಡ ಫರ್ಮಾನ್ ಖಾನ್ ಯಾರು? ಕೇರಳದಲ್ಲೇ ಮದುವೆಯಾಗಿದ್ಯಾಕೆ?

ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಿ ವೈರಲ್ ಆಗಿದ್ದ ಮೊನಾಲಿಸಾ, ಇದೀಗ ತಮ್ಮ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಜೊತೆ ಕೇರಳದ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಕುಟುಂಬದ ವಿರೋಧ ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ವಿವಾದಗಳ ನಡುವೆ  ಈ ಮದುವೆ ನಡೆದಿದೆ.

ಪ್ರಯಾಗರಾಜ್ ಮಹಾಕುಂಭ ಮೇಳದ ಸಂದರ್ಭದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದ ವಿಡಿಯೋ ವೈರಲ್ ಆದ ನಂತರ ದೇಶದಾದ್ಯಂತ ಗಮನ ಸೆಳೆದಿದ್ದ ಮೊನಾಲಿಸಾ ಇದೀಗ ತಮ್ಮ ಮದುವೆಯ ವಿಚಾರದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ‘ಕುಂಭ್ ವೈರಲ್ ಗರ್ಲ್’ ಎಂದು ಪ್ರಸಿದ್ಧಿಯಾಗಿದ್ದ ಈ ಯುವತಿ ಮುಸ್ಲಿಂ ಬಾಯ್‌ಪ್ರೆಂಡ್‌ ಜೊತೆಗೆ ಮದುವೆಯಾದ ಸುದ್ದಿ ಹೊರಬಿದ್ದ ನಂತರ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಮಧ್ಯಪ್ರದೇಶದ ಮಹೇಶ್ವರ ಮೂಲದ ಮೊನಾಲಿಸಾ 2025ರಲ್ಲಿ ನಡೆದ ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದಾಗ ತೆಗೆದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ವಿಶೇಷವಾಗಿ ಅವರ ಕಂದು ಬಣ್ಣದ ಕಣ್ಣುಗಳು ಮತ್ತು ಸರಳ ವ್ಯಕ್ತಿತ್ವ ಜನರ ಗಮನ ಸೆಳೆದಿತ್ತು. ಈ ವಿಡಿಯೋಗಳು ವೈರಲ್ ಆದ ಬಳಿಕ ಮೊನಾಲಿಸಾ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಜನಪ್ರಿಯತೆ ಗಳಿಸಿದರು. ಇದೇ ಸಮಯದಲ್ಲಿ ಅನೇಕರು ಅವರನ್ನು ‘ಕುಂಭ ವೈರಲ್ ಗರ್ಲ್’ ಎಂದು ಕರೆಯಲು ಪ್ರಾರಂಭಿಸಿದರು.

ಮೊನಾಲಿಸಾ ತಮ್ಮ ಗೆಳೆಯ ಫರ್ಮಾನ್ ಖಾನ್ ಅವರನ್ನು ಕೇರಳದ ತಿರುವನಂತಪುರಂನಲ್ಲಿರುವ  ಪೂವಾರ್‌ನ ಅರುಮಾನೂರ್ ನೈನಾರ್ ದೇಗುಲದಲ್ಲಿ  ಮಾರ್ಚ್‌  11ರ ಸಂಜೆ 5:30ರ ಹೊತ್ತಿಗೆ  ವಿವಾಹವಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ, ಮದುವೆಯ ಬಗ್ಗೆ ಮಾತನಾಡಿರುವ ಈ ದಂಪತಿಗಳು ಕೇರಳದ ಪರಿಸರ ಮತ್ತು ಸ್ಥಳವನ್ನು ಇಷ್ಟಪಟ್ಟ ಕಾರಣವೇ ಇಲ್ಲಿ ಮದುವೆಯಾಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಮದುವೆಯ ನಂತರ ಕೆಲವು ಕಾಲ ಕೇರಳದಲ್ಲೇ ಉಳಿಯುವ ಯೋಜನೆಯೂ ಅವರದ್ದಾಗಿದೆಯಂತೆ ಕೇರಳವೆಂದರೆ ಇಷ್ಟ ಎಂದಿದ್ದಾರೆ.

ಫರ್ಮಾನ್ ಖಾನ್ ಮಹಾರಾಷ್ಟ್ರ ಮೂಲದವರಾಗಿದ್ದು, ಅವರು ನಟನೆ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಫರ್ಮಾನ್ ತಮ್ಮನ್ನು ನಟ ಎಂದು ಪರಿಚಯಿಸಿಕೊಂಡಿದ್ದಾರೆ. ಮೊನಾಲಿಸಾ ಅವರನ್ನು ಮೊದಲ ಬಾರಿ ಸಿನಿಮಾ ಸೆಟ್‌ನಲ್ಲಿ ಭೇಟಿಯಾದೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಸ್ನೇಹವಾಗಿ ಆರಂಭವಾದ ಪರಿಚಯ, ನಂತರ ಪ್ರೀತಿಯಾಗಿ ರೂಪಾಂತರಗೊಂಡಿತು. ಈ ಸಂಬಂಧದಲ್ಲಿ ಮೊನಾಲಿಸಾ ಅವರೇ ಮೊದಲು ಪ್ರಪೋಸ್ ಮಾಡಿದರು ಎಂದು ಫರ್ಮಾನ್ ತಿಳಿಸಿದ್ದಾರೆ. ಆರಂಭದಲ್ಲಿ ನಾನು ಈ ಪ್ರಸ್ತಾವವನ್ನು ನಿರಾಕರಿಸಿದ್ದೆ, ಆದರೆ ನಂತರ ಆಕೆಯ ಒತ್ತಾಯದ ಮೇರೆಗೆ ಮದುವೆಗೆ ಒಪ್ಪಿಕೊಂಡೆ ಎಂದಿದ್ದಾರೆ.

ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಇಬ್ಬರ ಧರ್ಮ ಬೇರೆಯಾಗಿದ್ದರಿಂದ ಈ ಸಂಬಂಧಕ್ಕೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು ಎನ್ನಲಾಗಿದೆ. ವರದಿಗಳ ಪ್ರಕಾರ, ಮೊನಾಲಿಸಾಳ ತಂದೆ ಜೈ ಸಿಂಗ್ ಭೋಸ್ಲೆ ಅವರು ತಮ್ಮ ಮಗಳ ಮದುವೆಯನ್ನು ಮತ್ತೊಬ್ಬರೊಂದಿಗೆ ನಿಶ್ಚಯಿಸಲು ಪ್ರಯತ್ನಿಸಿದ್ದರು. ಆದರೆ ಈ ಪರಿಸ್ಥಿತಿಯಲ್ಲಿ ಮೊನಾಲಿಸಾ ಮತ್ತು ಫರ್ಮಾನ್ ಇಬ್ಬರೂ ಕೇರಳಕ್ಕೆ ತೆರಳಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

ಮೊನಾಲಿಸಾಳ ಮದುವೆಯ ಸುದ್ದಿ ಹೊರಬಿದ್ದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆ ಮತ್ತು ವಿವಾದವೂ ಹುಟ್ಟಿಕೊಂಡಿದೆ. ಕೆಲವರು ಈ ಮದುವೆಯನ್ನು ಪ್ರಶ್ನಿಸುತ್ತಿದ್ದು, ಮೊನಾಲಿಸಾಳ ವಯಸ್ಸಿನ ಕುರಿತು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಬಳಕೆದಾರರು ಅವಳಿಗೆ ಕೇವಲ 17 ವರ್ಷ ವಯಸ್ಸು ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಈ ಸಂಬಂಧವನ್ನು ‘ಲವ್ ಜಿಹಾದ್’ ಎಂದು ಆರೋಪಿಸುತ್ತಿದ್ದಾರೆ. ಇದಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬಳಕೆದಾರರು ತೀವ್ರ ಮತ್ತು ಆಕ್ರೋಶಭರಿತ ಕಾಮೆಂಟ್‌ಗಳನ್ನು ಕೂಡ ಮಾಡಿದ್ದಾರೆ. ಕೆಲವು ಕಾಮೆಂಟ್‌ಗಳಲ್ಲಿ ಆಕೆಯ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದ್ದರೆ, ಇನ್ನೂ ಕೆಲವು ಕಾಮೆಂಟ್‌ಗಳು ಕಠಿಣ ಟೀಕೆಗಳನ್ನೂ ಒಳಗೊಂಡಿವೆ. ಈ ಕಾರಣದಿಂದಾಗಿ ಮೊನಾಲಿಸಾ ಮದುವೆ ವಿಚಾರವು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಮಹಾಕುಂಭ ಮೇಳದಲ್ಲಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದ ಸರಳ ಹುಡುಗಿಯಾಗಿ ಗುರುತಿಸಿಕೊಂಡಿದ್ದ ಮೊನಾಲಿಸಾ, ಈಗ ಚಲನಚಿತ್ರ ಕ್ಷೇತ್ರದಲ್ಲೂ ಅವಕಾಶಗಳನ್ನು ಪಡೆಯುತ್ತಿರುವುದು ವಿಶೇಷವಾಗಿದೆ. ಅವರ ವೈರಲ್ ಖ್ಯಾತಿಯೇ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಆಕೆಯನ್ನು ತಮ್ಮ ‘ದಿ ಡೈರಿ ಆಫ್ ಮಣಿಪುರ’ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆ ಮಾಡಲು ಪ್ರೇರೇಪಿಸಿತು. ಬಂಜಾರ ಸಮುದಾಯಕ್ಕೆ ಸೇರಿದ ಮೊನಾಲಿಸಾ ಈಗಾಗಲೇ ತೆಲುಗು ಭಾಷೆಯ ‘ಲೈಫ್’ ಮತ್ತು ಮಲಯಾಳಂ ಭಾಷೆಯ ‘ನಗ್ಮಾ’ ಎಂಬ ಚಿತ್ರಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಅವರ ಸಿನಿ ಪ್ರವೇಶಕ್ಕೂ ದಾರಿ ತೆರೆದಿದೆ.

ಕೇರಳದ ಸಚಿವ ವಿ.ಶಿವನ್ ಕುಟ್ಟಿ, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ವಿವಾಹದಲ್ಲಿ ಭಾಗಿಯಾಗಿದ್ದರು. ನಟ ಹಾಗೂ ಮಾಡೆಲ್‌ ಮಹಾರಾಷ್ಟ್ರದ ಫರ್ಮಾನ್ ಖಾನ್ . ಮಧ್ಯಪ್ರದೇಶದ ಮೊನಾಲಿಸಾಗೆ ಒಂದೂವರೆ ವರ್ಷದ ಹಿಂದೆ ಪರಿಚಯವಾಗಿದ್ದ. ಪೂವಾರ್‌ನಲ್ಲಿ ಈಗ ಮೊನಾಲಿಸಾ ಅಭಿನಯದ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಶೂಟಿಂಗ್‌ ಸ್ಪಾಟ್‌ನಿಂದಲೇ ತಂಬಾನೂರು ಠಾಣೆಗೆ ಬಂದು ತನ್ನ ತಂದೆ ವಿರುದ್ಧ ಮೊನಾಲಿಸಾ ದೂರು ಕೊಟ್ಟಿದ್ದಳು. ಸಂಬಂಧಿ ಜೊತೆ ಮದುವೆ ಮಾಡಿಕೊಳ್ಳುವಂತೆ ತಂದೆ ಒತ್ತಾಯಿಸುತ್ತಿದ್ದಾರೆ ಇದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಪ್ರಿಯಕರನ ಜೊತೆ ಠಾಣೆಗೆ ಬಂದು ದೂರು ನೀಡಿದ್ದಳು. ದೂರಿನ ಹಿನ್ನೆಲೆಯಲ್ಲಿ ಮೊನಾಲಿಸಾ ತಂದೆ ಜೈಸಿಂಗ್ ಭೋಂಸ್ಲೆಯನ್ನು ಕೇರಳದ ತಂಬಾನೂರು ಠಾಣೆಗೆ ಪೊಲೀಸರು ಕರೆಸಿದ್ದರು. ಯಾರ ಜೊತೆ ಜೀವನ ಮಾಡಬೇಕು ಎಂದು ನಿರ್ಧರಿಸುವ ಹಕ್ಕು ಮೊನಾಲಿಸಾಗಿದೆ ಎಂದು ತಂದೆಗೆ ಪೊಲೀಸರು ಮನವರಿಕೆ ಮಾಡಿದ ಬಳಿಕ ಪ್ರಿಯಕರನ ಜೊತೆ ಹೋಗಲು ಮೊನಾಲಿಸಾಗೆ ಅನುಮತಿ ಕೊಟ್ಟರು. ಈ ಹಿನ್ನೆಲೆಯಲ್ಲಿ ಸಂಜೆ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದೆ.

ಒಟ್ಟಾರೆ, ಮಹಾಕುಂಭ ಮೇಳದಲ್ಲಿ ಸಾಮಾನ್ಯವಾಗಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದ ಯುವತಿ ಮೊನಾಲಿಸಾ, ಸಾಮಾಜಿಕ ಮಾಧ್ಯಮದ ಮೂಲಕ ದೇಶವ್ಯಾಪಿ ಖ್ಯಾತಿ ಪಡೆದಿದ್ದು, ಇದೀಗ ಮದುವೆ ಮತ್ತು ಸಿನಿಮಾ ಅವಕಾಶಗಳ ಕಾರಣದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಜೀವನದಲ್ಲಿ ನಡೆದ ಈ ಅಚ್ಚರಿಯ ಬದಲಾವಣೆ ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

Source link

Leave a Reply

Your email address will not be published. Required fields are marked *