ನವದೆಹಲಿ, ನವೆಂಬರ್ 14: ಬಿಹಾರ ವಿಧಾನಸಭಾ ಚುನಾವಣೆ (ಬಿಹಾರ ವಿಧಾನಸಭಾ ಚುನಾವಣೆ) ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಕಂಡಿದೆ. ಬಿಹಾರದಲ್ಲಿ ಐತಿಹಾಸಿಕ ಜಯ ಕಂಡಿರುವ ಬಿಜೆಪಿ ಬಿಹಾರದ ಅತಿ ದೊಡ್ಡ ಪಕ್ಷವಾಗಿ ನಿಂತಿದೆ. ಈ ಬಾರಿ ಬಿಜೆಪಿ ಬೇರೆಲ್ಲ ರಾಜ್ಯಗಳಲ್ಲಿ ಮಾಡಿದ ರೀತಿಯಲ್ಲೇ ಬಿಹಾರದಲ್ಲೂ ಟಿಕೆಟ್ ಘೋಷಣೆ ವೇಳೆ ಹಲವು ಪ್ರಯೋಗಗಳನ್ನು ಮಾಡಿತ್ತು. ಅದರಲ್ಲಿ ಬಿಹಾರದ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಎಂಬ 25 ವರ್ಷದ ಯುವತಿಯನ್ನು ಕಣಕ್ಕೆ ಇಳಿಸಿದ್ದು ಕೂಡ ಒಂದು.
ರಿಯಾಲಿಟಿ ಶೋ ಒಂದರ ರನ್ನರ್ ಅಪ್ ಆಗಿದ್ದ ಮೈಥಿಲಿ ಠಾಕೂರ್ ಕಂಠಕ್ಕೆ ಬಹಳ ಅಭಿಮಾನಿಗಳಿದ್ದರು. ಆದರೆ, ಆ ಅಭಿಮಾನ ಮತವಾಗಿ ಬದಲಾಗುತ್ತಾ? ಎಂಬ ಅನುಮಾನವಂತೂ ಇದ್ದೇ ಇತ್ತು. ಆ ಮೈಥಿಲಿ ಠಾಕೂರ್ ಚುನಾವಣಾ ಕಣಕ್ಕೆ ಇಳಿದ ಮೊದಲ ಪ್ರಯತ್ನದಲ್ಲೇ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಖ್ಯಾತರಾಗಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ ಮಹಿಳೆಯರು ಮತ್ತು ಯುವಜನರು ಎಂಬ ಹೊಸ ಸೂತ್ರ ನೀಡಿದೆ; ವಿಜಯೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ
ಮೈಥಿಲಿ ಠಾಕೂರ್ ಯಾರು?:
ಪಿಯುಸಿ ಓದಿರುವ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಅವರಿಗೆ ಕೇವಲ 25 ವರ್ಷ. ಮೈಥಿಲಿ ದರ್ಭಂಗಾದ ಅಲಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಇದೀಗ ಅವರು 12 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
🔥🔥🔥 ಕಿರಿಯ ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್🔥 ಇದು ಜೆನ್ ಕ್ರಾಂತಿ … 🔥🔥🔥@ಮೈಥಿಲಿತಾಕೂರ್ pic.twitter.com/guZLJsgZXe
– ಟಾಮ್ ಮ್ಯಾಥ್ಯೂಸ್ ಮೂಲಮಟ್ಟಂ (@TMoolamattom) ನವೆಂಬರ್ 14, 2025
ಜಾನಪದ ಗಾಯಕಿಯಾಗಿರುವ ಮೈಥಿಲಿ ಠಾಕೂರ್ 2000ನೇ ಇಸವಿಯ ಜುಲೈ 25 ರಂದು ಮಧುಬನಿಯಲ್ಲಿ ಜನಿಸಿದ ಮೈಥಿಲಿ ಠಾಕೂರ್ ಅವರ ಕುಟುಂಬವು ದೆಹಲಿಯ ನಜಾಫ್‌ಗಢಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರ ತಂದೆ ಕೆಲಸ ಕಳೆದುಕೊಂಡ ಕಾರಣ ಅವರು ಆರ್ಥಿಕ ಸಮಸ್ಯೆಗಳನ್ನು ಎದುರಿಸಿದರು. ಅವರು ತಮ್ಮ ಕುಟುಂಬವನ್ನು ಪೋಷಿಸಲು ಸಂಗೀತದತ್ತ ಮುಖ ಮಾಡಿದರು. ಅವರು ಮೈಥಿಲಿಯ ಮಾರ್ಗದರ್ಶಕರು ಮತ್ತು ಶಿಕ್ಷಕರು ಆಗಿದ್ದರು.
ಇದನ್ನೂ ಓದಿ: ಬಿಹಾರ ಚುನಾವಣಾ ಫಲಿತಾಂಶ: ಬಿಹಾರದಲ್ಲಿ ತನ್ನದೇ ದಾಖಲೆ ಮುರಿದು ದೊಡ್ಡಣ್ಣನಾಗಿ ಉಳಿದ ಬಿಜೆಪಿ!
ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಸಂಗೀತವೆರಡರಲ್ಲೂ ಹೆಸರು ಮಾಡಿರುವ ಮೈಥಿಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಮತ್ತು ಇಂಡಿಯನ್ ಐಡಲ್ ಜೂನಿಯರ್‌ನಂತಹ ಪ್ರಸಿದ್ಧ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯರಾದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಡಿನ ರೀಲ್ಸ್ ಮಾಡುತ್ತಿದ್ದರು.
25 ವರ್ಷದ ಮೈಥಿಲಿ ಠಾಕೂರ್ ಶಾಸಕಿಯಾಗಲಿದ್ದಾರೆ.
ಖೇಸರಿಲಾಲ್ ಯಾದವ್ ಚಾಪ್ರಾದಿಂದ ಸೋತರು.
ಥ್ಯಾಂಕ್ಯೂ ಬಿಹಾರ.#ಬಿಹಾರ ಚುನಾವಣೆ 2025 #ಚುನಾವಣೆ ನವೀಕರಣ
pic.twitter.com/nKrTZSYN5b— 𝑨𝑻10 (@Loyalsachfan10) ನವೆಂಬರ್ 14, 2025
2021ರಲ್ಲಿ ಮೈಥಿಲಿಗೆ ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಶಸ್ತಿ ನೀಡಲಾಯಿತು. ಇದು ಭಾರತದ ಯುವ ಕಲಾವಿದರಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಮೈಥಿಲಿ ಹಿಂದಿ ಮತ್ತು ಭೋಜ್‌ಪುರಿ ಪ್ರದರ್ಶನಗಳಿಗೆ ದೇಶಾದ್ಯಂತ ಹೆಸರಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 9:40 pm, ಶುಕ್ರ, 14 ನವೆಂಬರ್ 25