
ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಭಾನುವಾರ (ಡಿಸೆಂಬರ್ 7) ಅಭಿಷೇಕ್ ಅವರು ಎಲಿಮಿನೇಟ್ ಆದರು. ಅವರ ಎಲಿಮಿನೇಷನ್ ಆಗಿದ್ದು ಸರಿ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದು ಕಂಡುಬಂದಿದೆ. ಬಿಗ್ ಬಾಸ್ ಮನೆಯಲ್ಲಿ ಅವರು ಸೈಲೆಂಟ್ ಆಗಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಪ್ರಶ್ನೆ ಅನೇಕರಿಗೆ ಇತ್ತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಅದು ನನ್ನ ಪರ್ಸಾನಲಿಟಿ. ನಾನು ಏನೇ ಆದರೂ ಬದಲಾಗಬಾರದು ಎಂದು ನಿರ್ಧರಿಸಿದ್ದೆ. ಈ ಕಾರಣಕ್ಕೆ ನಾನು ಬದಲಾಗಿಲ್ಲ. ಸೈಲೆಂಟ್ ಯಾಕೆ ಆಗಿದ್ದೆ ಎಂದರೆ ಅದು ನನ್ನ ಪರ್ಸನಾಲಿಟಿ. ಎಲ್ಲ ಕಡೆಗಳಲ್ಲಿ ಕೂಗಾಡಿಕೊಂಡಿರೋದು ನನಗೆ ಇಷ್ಟ ಆಗುವುದಿಲ್ಲ’ ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.