ಕರ್ಣ ನಿಧಿಯನ್ನೇ ಮದ್ವೆ ಆಗ್ಲೇಬೇಕು ಅಂತಿರೋದ್ಯಾಕೆ?; ವೀಕ್ಷಕರಿಂದಲೇ ಬಂತು ಹೃದಯಸ್ಪರ್ಶಿ ಕಾಮೆಂಟ್ಸ್ | Why Do Viewers Want Karna Nidhi To Get Married

ಇಷ್ಟು ದಿನ ಜನರು ಕಾತುರದಿಂದ ಕಾಯುತ್ತಿದ್ದ ಗಳಿಗೆ ಬಂದಾಯ್ತು. ಈ ಸಮಯಕ್ಕೂ ವೀಕ್ಷಕರು ಕರ್ಣ ನಿಧಿನೇ ಮದ್ವೆ ಆಗಬೇಕು ಅಂತಿದ್ದಾರೆ. raadhya_777 ಎಂಬ ಇನ್‌ಸ್ಟಾ ಪೇಜ್‌ನಿಂದ ಬಂದಿರುವ ಕಾಮೆಂಟ್ಸ್ ಇದಕ್ಕೆಲ್ಲಾ ಉತ್ತರದಂತಿದೆ.

“ಕರ್ಣ ಯಾಕೆ ಎಲ್ಲರ ಮನೆ -ಮನಗಳನ್ನು ಗೆದ್ದಿದ್ದಾನೆ, ಕರ್ಣ ಹೇಗೆ ವಿಶಿಷ್ಟ ಅನ್ನುವುದು ಮತ್ತೆ ಮತ್ತೆ ರುಜುವಾತಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂದರೆ ಇಂದಿನ ಭಾವನಾತ್ಮಕವಾದ ಸಂಚಿಕೆ ಹಾಗೂ ತುಮುಲಗಳ ಅಭಿವ್ಯಕ್ತಿ. ಒಂದು ಕ್ಷಣಕ್ಕೆ ನಾವೇ ಅಲ್ಲಿ ಪಕ್ಕದಲ್ಲಿ ಕುಳಿತು ಆತನನ್ನು ಸಂತೈಸಬೇಕು ಅನ್ನಿಸಿತು; “ಯಾಕೆ ಮನ”ಕಣ್ಣೀರು ಹಾಕದಿರು – ಎಲ್ಲವೂ ಸರಿ ಹೋಗುತ್ತೆ; ನಮ್ಮ ಪ್ರೀತಿ – ಅಭಿಮಾನ ಎಂದಿಗೂ ನಿನ್ನ ಜೊತೆಗಿದೆ” ಎಂದು ಸಮಾಧಾನ ಮಾಡಿ ಮನಃಪೂರ್ವಕವಾಗಿ ಹಾರೈಸಬೇಕು ಎಂದು ಅನ್ನಿಸಿತು. ಒಂದು ಪಾತ್ರವನ್ನು ಎಷ್ಟರಮಟ್ಟಿಗೆ ನಾವು ಹಚ್ಚಿಕೊಂಡಿದ್ದೇವೆ ಎಂಬುದಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕಿಲ್ಲ. ಆದರೆ ಈ ಎಲ್ಲ ಭಾವನೆಗಳ ಹೊಯ್ದಾಟಗಳನ್ನು ಮಾತುಗಳಿಲ್ಲದೇ ಕೇವಲ ಕಣ್ಣೀರಿನ ಮೂಲಕ ವ್ಯಕ್ತಪಡಿಸಿದರೂ, ಹೃದಯಕ್ಕೆ ತಟ್ಟುವಂತೆ, ಆ ಕಣ್ಣಂಚಿನ ಹನಿಗಳೇ ಸಾವಿರ ಮಾತನಾಡುವಂತೆ ಅಭಿನಯಿಸುವುದಿದೆಯಲ್ಲ, ಅದು ಕೇವಲ ಕಿರಣ್ ರವರಿಗೆ ಮಾತ್ರ ಸಾಧ್ಯ. ಕಿರಣ್ ಈ ಪಾತ್ರವನ್ನು ಒಪ್ಪಿಕೊಂಡಿಲ್ಲ, ಬದಲಾಗಿ ಆ ಪಾತ್ರವೇ ಕಿರಣ್ ರವರನ್ನು ಒಪ್ಪಿ- ಅಪ್ಪಿಕೊಂಡಿದೆ ಅಂತ ಅನಿಸಿದ್ದು ಸುಳ್ಳಲ್ಲ! ಅಷ್ಟು ಮನಃಪೂರ್ವಕವಾಗಿ ಶ್ರದ್ದೆ – ವಿಶ್ವಾಸವಿಟ್ಟರೆ ಮಾತ್ರ ಅಂತಹ ಅಭಿನಯವೆನ್ನಿಸದ ಅಭಿನಯ ಸಾಧ್ಯವಾದೀತು. ನಮ್ಮೆಲ್ಲರ ಪ್ರೀತಿಪೂರ್ವಕ ಚಪ್ಪಾಳೆ ಸಲ್ಲಲೇಬೇಕು”.

Source link

Leave a Reply

Your email address will not be published. Required fields are marked *