Headlines

ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ? ಇಲ್ಲಿದೆ ಅಧ್ಯಾತ್ಮಿಕ ಕಾರಣ

ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ? ಇಲ್ಲಿದೆ ಅಧ್ಯಾತ್ಮಿಕ ಕಾರಣ


ಮಾನಸಿಕ ವ್ಯಥೆ ಮತ್ತು ಜೀವನದ ಜಂಜಾಟಗಳು ಎದುರಾದಾಗ, ಭಗವಂತನಲ್ಲಿ ನಮ್ಮ ಕೋರಿಕೆಗಳನ್ನು ಹೇಳಿಕೊಳ್ಳುವುದು ವಾಡಿಕೆ. ದೇವಸ್ಥಾನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಎಂಬುದು ಪ್ರತೀತಿ. ದೇವಸ್ಥಾನದಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿಸುವುದು ತಪ್ಪಲ್ಲ, ಆದರೆ ಯಾವುದೇ ದೇವಸ್ಥಾನಕ್ಕೆ ಒಂಟಿ ತೆಂಗಿನಕಾಯಿ ತೆಗೆದುಕೊಳ್ಳಬಾರದು. ಅದರಲ್ಲೂ ಮನೆದೇವರು, ಇಷ್ಟದೇವರು, ಕುಲದೇವರಿಗೆ ಒಂಟಿ ತೆಂಗಿನಕಾಯಿ ಅರ್ಪಿಸಲೇಬಾರದು ಎಂಬ ನಂಬಿಕೆ ಇದೆ. ಇದರ ಆಧ್ಯಾತ್ಮಿಕ ಮಹತ್ವ ಏನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ನಿಬಂಧನೆ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

ಯಾವುದೇ ದೇವಸ್ಥಾನಕ್ಕೆ ಹೋದರೂ ಜೋಡಿ ತೆಂಗಿನಕಾಯಿಗಳನ್ನು ತೆಗೆದುಕೊಂಡು ಹೋಗುವುದು ಪೂರ್ಣ ಫಲವನ್ನು ನೀಡುತ್ತದೆ. ಎರಡು ತೆಂಗಿನಕಾಯಿಗಳಲ್ಲಿ ಒಂದನ್ನು ಒಡೆಯಲು ಹೇಳಲಾಗಿದೆ. ತೆಂಗಿನಕಾಯಿಯನ್ನು ಒಡೆಯುವುದು ನಮ್ಮ ಅಹಂ, ಕರ್ಮ, ಕೋಪ ಮತ್ತು ತಾಮಸ ಗುಣಗಳನ್ನು ಭಗವಂತನಿಗೆ ಅರ್ಪಿಸುವ ಸಂಕೇತವಾಗಿದೆ. ಇನ್ನೊಂದು ತೆಂಗಿನಕಾಯಿಯನ್ನು ಅರ್ಚಕರಿಗೆ ನೀಡಿ ದೇವರ ಪಾದಗಳಿಗೆ ಮುಟ್ಟಿಸಿ ನಮಗೆ ವಾಪಸ್ಸು ಕೊಡಲು ಕೇಳಬೇಕು. ಈ ಕಾಯಿಯನ್ನು ತೀರ್ಥಕಾಯಿ ಎಂದು ಕರೆಯಲಾಗುತ್ತದೆ ಎಂದು ಗುರೂಜಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *