U19 World Cup, ಟೀಮ್ ಇಂಡಿಯಾ ಆಟಗಾರರಿಗೆ ICC ಯಿಂದ ಸಿಗ್ತಿಲ್ಲ ಒಂದೇ ಒಂದು ರೂಪಾಯಿ!

U19 World Cup, ಟೀಮ್ ಇಂಡಿಯಾ ಆಟಗಾರರಿಗೆ ICC ಯಿಂದ ಸಿಗ್ತಿಲ್ಲ ಒಂದೇ ಒಂದು ರೂಪಾಯಿ!

U19 World Cup, ಟೀಮ್ ಇಂಡಿಯಾ ಆಟಗಾರರಿಗೆ ICC ಯಿಂದ ಸಿಗ್ತಿಲ್ಲ ಒಂದೇ ಒಂದು ರೂಪಾಯಿ!

U19 World Cup : ಈ ಬಾರಿ ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬ. ಒಂದಾದ್ಮೇಲೆ ಒಂದು ಪ್ರಶಸ್ತಿ ಭಾರತದ ಪಾಲಾಗ್ತಿದೆ. ಮಹಿಳಾ ವಿಶ್ವಕಪ್ ನಂತ್ರ ಅಂಡರ್ 19 ವಿಶ್ವಕಪ್ ಸರದಿ. ಆದ್ರೆ U19 ವಿಶ್ವಕಪ್ ಆಡಿದ ಆಟಗಾರರಿಗೆ ಐಸಿಸಿ ಹಣ ನೀಡ್ತಿಲ್ಲ. ಯಾಕೆ ಗೊತ್ತಾ?

ಭಾರತ ಶುಕ್ರವಾರ ನಡೆದ ಅಂಡರ್-19 ವಿಶ್ವಕಪ್ 2026 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ, ಭಾರತ ತಂಡ ಇಂಗ್ಲೆಂಡ್ ಅನ್ನು 100 ರನ್ಗಳಿಂದ ಸೋಲಿಸಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ. ವೈಭವ್ ಸೂರ್ಯವಂಶಿ 80 ಎಸೆತಗಳಲ್ಲಿ 175 ರನ್ಕಲೆ ಹಾಕಿ, ಐತಿಹಾಸಿಕ ಇನ್ನಿಂಗ್ಸ್ ಗೆಲುವಿಗೆ ಕಾರಣವಾದ್ರು. ಭಾರತ ತಂಡ ಅಂಡರ್ 19 ವಿಶ್ವಕಪ್ ಗೆದ್ದು ಬೀಗಿದ್ರೂ, ಆಟಗಾರರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಂದ ಒಂದೇ ಒಂದು ರೂಪಾಯಿ ಬಹುಮಾನವಾಗಿ ಸಿಗೋದಿಲ್ಲ.

ಆಯುಷ್ ಮ್ಹಾತ್ರೆ ನಾಯಕತ್ವದ ಭಾರತೀಯ ಅಂಡರ್-19 ತಂಡ, ಟೂರ್ನಮೆಂಟ್ ನಲ್ಲಿ ಅದ್ಭುತ ಆಟ ಪ್ರದರ್ಶಿಸಿದೆ. ಆದ್ರೆ ಐಸಿಸಿ ಮಾತ್ರ ಆಟಗಾರರಿಗೆ ಹಣ, ಬಹುಮಾನವನ್ನು ನೀಡ್ತಿಲ್ಲ. ಐಸಿಸಿ ರೂಲ್ಸ್ ಪ್ರಕಾರ, ಅಂಡರ್-19 ವಿಶ್ವಕಪ್ ಅನ್ನು ಡೆವಲಪ್ಮೆಂಟ್ ಟೂರ್ನಮೆಂಟ್ ಎಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ, ಈ ಟೂರ್ನಮೆಂಟ್ ನಲ್ಲಿ ಭಾಗಿಯಾಗುವ ಯಾವುದೇ ಟೀಂಗೆ ಐಸಿಸಿ ಬಹುಮಾನದ ಹಣವನ್ನು ನೀಡೋದಿಲ್ಲ.

ಅಂಡರ್-19 ವಿಶ್ವಕಪ್ ಅನ್ನು ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಮತ್ತು ಅಭಿವೃದ್ಧಿಪಡಿಸಲು ಆಯೋಜಿಸಲಾಗಿದೆ ಎಂದು ಐಸಿಸಿ ನಂಬುತ್ತದೆ. ಮಂಡಳಿಯು ಈಗಾಗಲೇ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕ್ರಿಕೆಟ್ ಅಭಿವೃದ್ಧಿ ನಿಧಿಯ ಅಡಿಯಲ್ಲಿ ಆದಾಯದ ಪಾಲನ್ನು ಒದಗಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯಾವಳಿಗೆ ಪ್ರತ್ಯೇಕ ಬಹುಮಾನದ ಹಣ ನೀಡುವುದನ್ನು ಡಬಲ್ ಬಹುಮಾನವೆಂದು ಪರಿಗಣಿಸಲಾಗುತ್ತದೆ.

ಮೈದಾನದಲ್ಲಿ ಬೆವರಿಳಿಸಿ, ದೇಶಕ್ಕೆ ಕಪ್ ತಂದ್ಕೊಟ್ಟ ಆಟಗಾರರಿಗೆ ಯಾವುದೇ ಬಹುಮಾನ ಸಿಗೋದಿಲ್ಲ ಎಂಬುದು ಇದರರ್ಥವಲ್ಲ. ಐಸಿಸಿ ಬಹುಮಾನದ ಹಣ ನೀಡ್ದೆ ಹೋದ್ರೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಹುಮಾನದ ಮೊತ್ತವನ್ನು ಆಟಗಾರರಿಗೆ ನೀಡುತ್ತದೆ.

2022 ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಯಶ್ ಧುಲ್ ನಾಯಕತ್ವದ ಭಾರತ ತಂಡದ ಪ್ರತಿ ಆಟಗಾರರಿಗೆ ತಲಾ 40 ಲಕ್ಷ ಮತ್ತು ಸಹಾಯಕ ಸಿಬ್ಬಂದಿಗೆ 25 ಲಕ್ಷ ಹಣವನ್ನು ನೀಡಲಾಗಿತ್ತು. 2023 ಮತ್ತು 2025 ರಲ್ಲಿ ಅಂಡರ್-19 ಮಹಿಳಾ ವಿಶ್ವಕಪ್ ಗೆದ್ದ ಭಾರತೀಯ ತಂಡಗಳು ಒಟ್ಟಾರೆಯಾಗಿ 5 ಕೋಟಿ ಬಹುಮಾನವನ್ನು ಪಡೆದಿದ್ದವು.

ಬಿಸಿಸಿಐ, ಈ ಬಾರಿ ಆಟಗಾರರಿಗೆ ಎಷ್ಟು ಹಣ ನೀಡಲಿದೆ ಎಂಬುದನ್ನು ಇನ್ನಷ್ಟೆ ಘೋಷಣೆ ಮಾಡ್ಬೇಕಿದೆ. ವೈಭವ್ ಸೂರ್ಯವಂಶಿ, ಆಯುಷ್ ಮಾತ್ರೆ ಮತ್ತು ಇತರ ಆಟಗಾರರಿಗೆ ಬಿಸಿಸಿಐ ಶೀಘ್ರದಲ್ಲೇ ಬಹುಮಾನಗಳನ್ನು ಘೋಷಿಸುವ ನಿರೀಕ್ಷೆಯಿದೆ.

ಐಸಿಸಿ ಅಂಡರ್-19 ವಿಶ್ವಕಪ್ 2026 ರ ಫೈನಲ್ನಲ್ಲಿ ವೈಭವ್ ಸೂರ್ಯವಂಶಿ ಪ್ಲೇಯರ್ ಆಫ್ ದಿ ಮ್ಯಾಚ್ ಹಾಗೂ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ಭಾಜನರಾದರು. ಇಂಗ್ಲೆಂಡ್ ವಿರುದ್ಧದ ಫೈನಲ್ನಲ್ಲಿ15 ಬೌಂಡರಿ ಮತ್ತು 15 ಸಿಕ್ಸರ್ ಸಿಡಿಸಿ 175 ರನ್ ಕಲೆ ಹಾಕಿದ್ದರು. ಟೂರ್ನಮೆಂಟ್ ನಲ್ಲಿ ವೈಭವ್ ಸೂರ್ಯವಂಶಿ ಒಟ್ಟು 439 ರನ್ ಗಳಿಸಿದ್ದರು. ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಾಗಿದ್ದಾರೆ. ವೈಭವ್ U-19 ವಿಶ್ವಕಪ್ ಇತಿಹಾಸದಲ್ಲಿ ಪ್ಲೇಯರ್ ಆಫ್ ದಿ ಫೈನಲ್ ಮತ್ತು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಎರಡನ್ನೂ ಗೆದ್ದ ಮೊದಲ ಆಟಗಾರರಾಗಿದ್ದಾರೆ.

Source link

Leave a Reply

Your email address will not be published. Required fields are marked *