
ಅಮೆರಿಕಾದ ಸೇನಾನೆಲೆಗಳು ಪ್ರಪಂಚದಾದ್ಯಂತ ವಿಸ್ತರಿಸಿದ್ದು, ಪ್ರಸ್ತುತ 70ಕ್ಕೂ ಹೆಚ್ಚು ದೇಶಗಳಲ್ಲಿ 750ಕ್ಕೂ ಅಧಿಕ ಸೇನಾ ನೆಲೆಗಳನ್ನು ಹೊಂದಿದೆ. ಈ ನೆಲೆಗಳು 195 ರಾಷ್ಟ್ರಗಳ ಮೇಲೆ 360 ಡಿಗ್ರಿ ಕಣ್ಗಾವಲು ಇಡುವ ಅಮೆರಿಕದ ಕಾರ್ಯಸೂಚಿಯ ಭಾಗವಾಗಿದೆ. 1898ರಲ್ಲಿ ಕ್ಯೂಬಾದಲ್ಲಿ ಮೊದಲ ವಿದೇಶಿ ನೆಲೆ ಸ್ಥಾಪಿಸಿದ ಅಮೆರಿಕಾ, ನಂತರ ಹಂತ ಹಂತವಾಗಿ ತನ್ನ ಸೇನಾನೆಲೆಗಳನ್ನು ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಿಗೆ ವಿಸ್ತರಿಸಲಾಗಿದೆ. ಈ ನೆಲೆಗಳು ಮೈತ್ರಿ ರಾಷ್ಟ್ರಗಳ ರಕ್ಷಣೆಯ ಜೊತೆಗೆ ಶತ್ರುಗಳ ಮೇಲೆ ಕಣ್ಣಿಡಲು ಮತ್ತು ಭವಿಷ್ಯದ ಯುದ್ಧಗಳಿಗೆ ಪೂರ್ವಸಿದ್ಧತೆಗಾಗಿ ನಿರ್ಮಿತವಾಗಿದೆ ಎಂದು ತಿಳಿಯಲಾಗಿದೆ. ಇದೀಗ ಮಧ್ಯಪ್ರಾಚ್ಯ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಸೇನಾನೆಲೆಗಳನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸುತ್ತಿರುವುದು ಗಮನಾರ್ಹವಾಗಿದೆ.
ಆದರೆ, ಭಾರತವು ಅಮೆರಿಕಕ್ಕೆ ತನ್ನ ನೆಲದಲ್ಲಿ ಯಾವುದೇ ಸೇನಾನೆಲೆ ಸ್ಥಾಪಿಸಲು ಅವಕಾಶ ನೀಡಿಲ್ಲ. ಅಲಿಪ್ತ ನೀತಿ ಮತ್ತು ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುವ ಭಾರತವು, ಸೇನಾನೆಲೆಗಳು ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆ ಮತ್ತು ಭೂಭಾಗದ ಹಿಡಿತವನ್ನು ಕಡಿಮೆ ಮಾಡುತ್ತವೆ ಎಂಬ ನಿಲುವನ್ನು 1947 ರಲ್ಲಿ ಹೊಂದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ