
ಮಧ್ಯಮ ಓವರ್‌ಗಳಲ್ಲಿ ರನ್ ನಿಯಂತ್ರಿಸುವಲ್ಲಿ ಭಾರತೀಯ ಸ್ಪಿನ್ನರ್‌ಗಳು ವಿಫಲರಾದರು. ವರುಣ್ ಚಕ್ರವರ್ತಿ ದುಬಾರಿಯಾದರೆ, ವಾಷಿಂಗ್ಟನ್ ಸುಂದರ್‌ಗೆ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ವರುಣ್ ಮತ್ತು ಸುಂದರ್ ಇಬ್ಬರೂ ಸೇರಿ 6 ಓವರ್‌ಗಳಲ್ಲಿ 64 ರನ್ ನೀಡಿ, ಕೇವಲ ಒಂದು ವಿಕೆಟ್ ಪಡೆದರು. ಅಹಮದಾಬಾದ್ ಪಿಚ್‌ನಲ್ಲಿ ಸರಿಯಾದ ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಲು ಭಾರತದ ಸ್ಪಿನ್ನರ್‌ಗಳು ವಿಫಲರಾದರು.
ಉಪನಾಯಕ ಅಕ್ಷರ್ ಪಟೇಲ್ ಬದಲು ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಂಡ ನಿರ್ಧಾರವು ಸಂಪೂರ್ಣವಾಗಿ ವಿಫಲವಾಯಿತು. ಕ್ವಿಂಟನ್ ಡಿ ಕಾಕ್, ರಿಯಾನ್ ರಿಕೆಲ್ಟನ್, ಡೇವಿಡ್ ಮಿಲ್ಲರ್ ಅವರಂತಹ ಎಡಗೈ ಬ್ಯಾಟರ್‌ಗಳನ್ನು ನಿಯಂತ್ರಿಸಲು ಆಫ್ ಸ್ಪಿನ್ನರ್ ಸುಂದರ್ ಅವರನ್ನು ಕರೆತರಲಾಗಿತ್ತು. ಆದರೆ, ಸುಂದರ್ ಬೌಲಿಂಗ್‌ಗೆ ಬರುವ ಮೊದಲೇ ಡಿ ಕಾಕ್ ಮತ್ತು ರಿಕೆಲ್ಟನ್ ಔಟಾಗಿದ್ದರು. ಹೀಗಾಗಿ ಸುಂದರ್ ಅವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೇವಲ 2 ಓವರ್ ಬೌಲ್ ಮಾಡಿ 17 ರನ್ ನೀಡಿದರೂ ವಿಕೆಟ್ ಪಡೆಯಲಿಲ್ಲ. ಬ್ಯಾಟಿಂಗ್‌ನಲ್ಲಿ 5ನೇ ಕ್ರಮಾಂಕದಲ್ಲಿ ಬಂದು 11 ಎಸೆತಗಳಲ್ಲಿ 11 ರನ್ ಗಳಿಸಲಷ್ಟೇ ಶಕ್ತರಾದರು.