
ವರದಿಗಳ ಪ್ರಕಾರ ಕಳೆದ 43 ವರ್ಷಗಳಲ್ಲಿ ಅಂದರೆ 1983 ರ ಬಳಿಕ ವಾರವೊಂದರಲ್ಲಿ ಚಿನ್ನದ ದರ ಈ ಪ್ರಮಾಣದಲ್ಲಿ ಕುಸಿದಿದ್ದು ಇದೇ ಮೊದಲು. 7 ದಿನದಲ್ಲೇ ಶೇ. 11 ರಷ್ಟು ಇಳಿಕೆ ಕಂಡಿದೆ. 1979-1980 ರ ನಡುವೆ ಇರಾನ್ ಕ್ರಾಂತಿಯ ಸಮಯದಲ್ಲಿ ತೈಲ ಪೂರೈಕೆಯಲ್ಲಿ ಅಡ್ಡಿ, ಶೀತಲ ಸಮರದಿಂದಾಗಿ ಚಿನ್ನದ ಬೆಲೆ ಶೇ.15-20 ರಷ್ಟು ಕುಸಿದಿತ್ತು. ಆ ಬಳಿಕ ವಾರವೊಂದರಲ್ಲಿ ಎಂದಿಗೂ ಶೇ. 10ಕ್ಕಿಂತ ಕುಸಿದ ನಿದರ್ಶನವಿಲ್ಲ.
ಹಿಂದಿನ ಯುದ್ಧದಲ್ಲಿ ಚಿನ್ನದ ದರ ಹೇಗಿತ್ತು?
ಮೊದಲ ಮಹಾಯುದ್ಧ: ಈ ಅವಧಿಯಲ್ಲಿ ಚಿನ್ನದ ದರ ಒಂದು ದಿನ್ 20.67 ಅಮೆರಿಕನ್ ಡಾಲರ್‌ಗಷ್ಟಿತ್ತು.
ಎರಡನೇ ಮಹಾಯುದ್ಧ : 1934 ರಲ್ಲಿ ಒಂದು ಔನ್ಸ್‌ಗೆ 35 ಡಾಲರ್ ಇತ್ತು. ಆಗ ನಾಗರಿಕರ ಚಿನ್ನ ಖರೀದಿಗೆ ಮಿತಿ ಹೇರಲಾಗಿತ್ತು.
ವಿಯೆಟ್ನಾಂ ಯುದ್ಧ: ಯುದ್ಧದ ಭಯದಿಂದ ಚಿನ್ನ ಖರೀದಿಗೆ ಬೇಡಿಕೆ ಹೆಚ್ಚಾಯಿತು. ಪರಿಣಾಮ 1968ರ ವೇಳೆಗೆ 40.20 ಡಾಲರ್‌ಗೆ ಏರಿಕೆಯಾಗಿತ್ತು. ಯುದ್ಧ ಮುಗಿಯುವ ವೇಳೆ ಸುಮಾರು 5 ಪಟ್ಟು ಏರಿಕೆ ಕಂಡಿತ್ತು.