Headlines

ಸ್ಟಾರ್‌ ನಟರಿಗೆ ಡಬಲ್‌ ಸ್ಟಾಂಡರ್ಡ್‌ ಯಾಕೆ? ಈ ವ್ಯವಸ್ಥೆ ನಟಿಯರಿಗೆ ಯಾಕಿಲ್ಲ: ದೀಪಿಕಾ ಪಡುಕೋಣೆ

ಸ್ಟಾರ್‌ ನಟರಿಗೆ ಡಬಲ್‌ ಸ್ಟಾಂಡರ್ಡ್‌ ಯಾಕೆ? ಈ ವ್ಯವಸ್ಥೆ ನಟಿಯರಿಗೆ ಯಾಕಿಲ್ಲ: ದೀಪಿಕಾ ಪಡುಕೋಣೆ

ಸ್ಟಾರ್‌ ನಟರಿಗೆ ಡಬಲ್‌ ಸ್ಟಾಂಡರ್ಡ್‌ ಯಾಕೆ? ಈ ವ್ಯವಸ್ಥೆ ನಟಿಯರಿಗೆ ಯಾಕಿಲ್ಲ: ದೀಪಿಕಾ ಪಡುಕೋಣೆ

ಸ್ಟಾರ್‌ ನಟರು, ಹೀರೋಗಳ ಬಗ್ಗೆ ನಟಿಯರು ಮಾತಾಡಿದ ಕೂಡಲೇ ಅದು ದೊಡ್ಡ ಸುದ್ದಿಯಾಗುತ್ತದೆ, ಇಂಥಾ ಡಬಲ್‌ ಸ್ಟಾಂಡರ್ಡ್‌ ಯಾಕೆ? ಇದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ನೇರ ಪ್ರಶ್ನೆ.

ನನಗೆ ತಿಳಿದಿರುವಂತೆ ಹಿಂದಿನಿಂದ ಇಂದಿನವರೆಗೂ ಸ್ಟಾರ್‌ ನಟರು, ಹೀರೋಗಳು ಎಂಟು ಗಂಟೆ ಮಾತ್ರ ಶೂಟಿಂಗ್‌ನಲ್ಲಿರುತ್ತಾರೆ. ಅವರ ಬಗ್ಗೆ ಇದುವರೆಗೆ ಯಾರೂ ಪ್ರಶ್ನೆ ಮಾಡಿಲ್ಲ.

ಆದರೆ ನಟಿಯರು ಈ ಬಗ್ಗೆ ಮಾತಾಡಿದ ಕೂಡಲೇ ಅದು ದೊಡ್ಡ ಸುದ್ದಿಯಾಗುತ್ತದೆ, ಇಂಥಾ ಡಬಲ್‌ ಸ್ಟಾಂಡರ್ಡ್‌ ಯಾಕೆ? ಇದು ದೀಪಿಕಾ ಪಡುಕೋಣೆ ಅವರ ನೇರ ಪ್ರಶ್ನೆ.

ಕೆಲವು ಸಮಯದ ಹಿಂದೆ ದೀಪಿಕಾ ಪಡುಕೋಣೆ 8 ಗಂಟೆ ಕೆಲಸದ ಅವಧಿಗೆ ಬೇಡಿಕೆ ಇಟ್ಟದ್ದನ್ನೇ ಮುಖ್ಯವಾಗಿಸಿಕೊಂಡು ಅವರನ್ನು ‘ಸ್ಪಿರಿಟ್‌’ ಚಿತ್ರದಿಂದ ಹೊರಹಾಕಲಾಗಿತ್ತು.

ಬಳಿಕ ‘ಕಲ್ಕಿ’ ಚಿತ್ರತಂಡವೂ ‘ಬದ್ಧತೆ’ಯ ಕಾರಣ ನೀಡಿ ಅವರನ್ನು ಚಿತ್ರದಿಂದ ಹೊರಗಿಟ್ಟಿತ್ತು. ಇದು ದೇಶಾದ್ಯಂತ ಪರ ವಿರೋಧದ ಚರ್ಚೆಗೆ ಕಾರಣವಾಗಿತ್ತು.

ಈ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿರುವ ದೀಪಿಕಾ, ಹಲವು ನಾಯಕ ನಟರು 8 ಗಂಟೆಯಷ್ಟೇ ಕೆಲಸ ಮಾಡುತ್ತಾರೆ. ಜೊತೆಗೆ ಅವರ ಕೆಲಸ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಇರುತ್ತದೆ. ವೀಕೆಂಡ್‌ನಲ್ಲಿ ಅವರು ಕೆಲಸ ಮಾಡೋದಿಲ್ಲ.

ಆ ಬಗ್ಗೆ ಯಾಕೆ ಯಾರೂ ತಕರಾರು ತೆಗೆಯೋದಿಲ್ಲ ಎಂದೂ ಪ್ರಶ್ನೆ ಮಾಡಿದ್ದಾರೆ. ಸದ್ಯ ಶಾರೂಖ್‌ ಖಾನ್‌ ಜೊತೆಗೆ ‘ಕಿಂಗ್‌’, ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್‌ ನಾಯಕನಾಗಿರುವ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *