ದೊಡ್ಡ ದೊಡ್ಡ ಅವಕಾಶವಿದ್ರೂ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ ಬೆಂಗಳೂರಿನ ನಟಿ, Lankesh Pathrike ನಾಯಕಿ, ಯಾಕೆ?

ದೊಡ್ಡ ದೊಡ್ಡ ಅವಕಾಶವಿದ್ರೂ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ ಬೆಂಗಳೂರಿನ ನಟಿ, Lankesh Pathrike ನಾಯಕಿ, ಯಾಕೆ?

ದೊಡ್ಡ ದೊಡ್ಡ ಅವಕಾಶವಿದ್ರೂ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ ಬೆಂಗಳೂರಿನ ನಟಿ, Lankesh Pathrike ನಾಯಕಿ, ಯಾಕೆ?

Vasundhara Das: ಬೆಂಗಳೂರಿನ ವಸುಂಧರಾ ದಾಸ್ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಒಂದು ಕಾಲದಲ್ಲಿ ವಸುಂಧರಾ ಅವರು ಬಾಲಿವುಡ್, ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಧ್ವನಿಯ ಮೂಲಕ ಸಂಚಲನ ಮೂಡಿಸಿದ್ದರು. ಕಮಲ್ ಹಾಸನ್ ಎದುರು ನಟಿಸಿ ಮಿಂಚಿದ್ದ ಇವರು ಹಠಾತ್ತನೆ ಚಿತ್ರರಂಗದಿಂದ ದೂರವಾದರು.

ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರಂತಹ ದಿಗ್ಗಜರ ಜೊತೆ ಕೆಲಸ ಮಾಡಿದ್ದರು. ‘ಮುದಲ್ವನ್’ ಚಿತ್ರದ "ಶಕಲಕ ಬೇಬಿ" ಹಾಡು ವಸುಂಧರಾರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದೆ. 2001ರಲ್ಲಿ ಈ ಹಾಡಿಗಾಗಿ ಅವರು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು. ಶಾರುಖ್ ಖಾನ್ ನಟನೆಯ ಸಿನಿಮಾಗಳಲ್ಲಿ ‘ವೇರ್ ಈಸ್ ದ ಪಾರ್ಟಿ ಟುನೈಟ್’, ‘ಇಟ್ಸ್ ದಿ ಟೈಮ್ ಟು ಡಿಸ್ಕೋ’ ನಂತಹ ಜನಪ್ರಿಯ ಹಾಡುಗಳನ್ನು ಕೂಡ ಹಾಡಿದರು. ‘ಜಾನೆ ತೂ ಯಾ ಜಾನೆ ನಾ’ ಸಿನಿಮಾದ ‘ಕಹಿನ್ ತೋ ಹೋಗಿ ವೋ’ ಅನೇಕರ ಫೇವರಿಟ್‌ ಆಗಿದೆ.

ಕಮಲ್ ಹಾಸನ್ ಅವರ ಬಹುಭಾಷಾ ಸಿನಿಮಾ ‘ಹೇ ರಾಮ್’ ಮೂಲಕ ನಟಿಯಾದರು. ‘ಮಾನ್ಸೂನ್ ವೆಡ್ಡಿಂಗ್’, ಮಲಯಾಳಂನ ‘ರಾವಣಪ್ರಭುʼ, ಕನ್ನಡದಲ್ಲಿ ದರ್ಶನ್ ಜೊತೆ ‘ಲಂಕೇಶ್ ಪತ್ರಿಕೆ’ ಸಿನಿಮಾಗಳಲ್ಲಿ ಕೂಡ ನಟಿಸಿದರು.

ಮತ್ತೆ ಚಿತ್ರರಂಗಕ್ಕೆ ಬರ್ತೀರಾ ಎಂದು ಕೇಳಿದಾಗ, ವಸುಂಧರಾ ಖಡಕ್‌ ಆಗಿ "ಇಲ್ಲ" ಎಂದು ಹೇಳಿದ್ದಾರೆ. ಸಿನಿಮಾ ಎಂಬುದು ವಸುಂಧರಾ ಅವರ ಜೀವನದ ಒಂದು ಸುಂದರ ಅಧ್ಯಾಯವಾಗಿತ್ತು, ಆದರೆ ಈಗ ಅವರು ಜೀವನದಲ್ಲಿ ಬೇರೆ ಆಯ್ಕೆಯನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರ ಬಗ್ಗೆ ಅವರಿಗೆ ಯಾವುದೇ ವಿಷಾದವಿಲ್ಲ, ಆದರೆ ಈಗ ಅವರಿಗೆ ಆ ಪ್ರಪಂಚದ ಬಗ್ಗೆ ಯಾವುದೇ ಹಂಬಲವೂ ಇಲ್ಲ.

ವಸುಂಧರಾ ದಾಸ್ ಅವರು ಪತಿ ಜೊತೆ ಸೇರಿ ‘ಡ್ರಮ್‌ಜಾಮ್’ (Drumjam) ಎಂಬ ಬ್ಯಾಂಡ್ ನಡೆಸುತ್ತಿದ್ದಾರೆ. Music Therapy, Sound Healing ಕಡೆಗೆ ಗಮನ ಹರಿಸಿದ್ದಾರೆ. ಕ್ಯಾನ್ಸರ್ ರೋಗಿಗಳು, ಬುದ್ಧಿಮಾಂದ್ಯತೆ ಹೊಂದಿರುವವರು, ವೃದ್ಧರು, ಅಪಾಯದಲ್ಲಿರುವ ಮಕ್ಕಳಿಗೆ ಸಂಗೀತದ ಮೂಲಕ ನೆಮ್ಮದಿ ನೀಡುತ್ತಿದ್ದಾರೆ. ವಸುಂಧರಾ ಅವರು ಬೆಂಗಳೂರಿನಲ್ಲಿ ಜನಿಸಿದ್ದು, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಆರನೇ ವಯಸ್ಸಿನಲ್ಲೇ ಅಜ್ಜಿ ಇಂದಿರಾ ದಾಸ್‌ರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಶುರು ಮಾಡಿದರು.

Source link

Leave a Reply

Your email address will not be published. Required fields are marked *