Headlines

ಮೊಹಮ್ಮದ್ ಶಮಿ ಯಾಕೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿಲ್ಲ; ಕೊನೆಗೂ ಬಯಲಾಯ್ತು ಸತ್ಯ!

ಮೊಹಮ್ಮದ್ ಶಮಿ ಯಾಕೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿಲ್ಲ; ಕೊನೆಗೂ ಬಯಲಾಯ್ತು ಸತ್ಯ!

ಮೊಹಮ್ಮದ್ ಶಮಿ ಯಾಕೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿಲ್ಲ; ಕೊನೆಗೂ ಬಯಲಾಯ್ತು ಸತ್ಯ!

ಬೆಂಗಳೂರು: ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಜನವರಿ 11ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಶಮಿ ಹೆಸರು ನಾಪತ್ತೆಯಾಗಿದೆ. ಅಷ್ಟಕ್ಕೂ ಶಮಿ ಕೈಬಿಟ್ಟಿದ್ದೇಕೆ ಎನ್ನುವ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.

ಜನವರಿ 11ರಿಂದ ಆರಂಭವಾಗಲಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಶನಿವಾರ 15 ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡ ಪ್ರಕಟಿಸಲಾಗಿದ್ದು, ಶುಭ್‌ಮನ್ ಗಿಲ್‌ ನಾಯಕನಾಗಿ ಕಮ್‌ಬ್ಯಾಕ್ ಮಾಡಿದ್ದಾರೆ.

ಇನ್ನು ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಸೆಲೆಕ್ಟ್ ಮಾಡಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಬೆನ್ನಲ್ಲೇ ಮತ್ತೆ ಏಕದಿನ ತಂಡ ಕೂಡಿಕೊಂಡಿದ್ದಾರೆ.

ಆದರೆ ಅದೇ ರೀತಿ ಬೌಲಿಂಗ್‌ನಲ್ಲಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಮಿಂಚಿದ್ದ ಶಮಿಯನ್ನು ಕೈಬಿಟ್ಟಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಲಯದೊಂದಿಗೆ ಬೌಲಿಂಗ್ ಮಾಡುತ್ತಿರುವ ವೇಗಿ ಮೊಹಮ್ಮದ್ ಶಮಿಯನ್ನು ಕೈಬಿಟ್ಟಿದ್ದೇಕೆ ಎನ್ನುವ ಕುತೂಹಲ ಜೋರಾಗಿರುವ ಬೆನ್ನಲ್ಲೇ ಜಾಗರಣ್.ಕಾಂ ಮಹತ್ವದ ವರದಿಯೊಂದನ್ನು ಪ್ರಕಟಿಸಿದೆ.

ಅನುಭವಿ ವೇಗಿ ಮೊಹಮ್ಮದ್ ಶಮಿ ಬಿಸಿಸಿಐನಿಂದ ಫಿಟ್ನೆಸ್ ಟೆಸ್ಟ್ ಕ್ಲಿಯರ್ ಮಾಡಿಲ್ಲ. ಇದೇ ಕಾರಣದಿಂದ ಶಮಿಯವರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ ಎಂದು ವರದಿಯಾಗಿದೆ.

ಸದ್ಯದ ಆಯ್ಕೆಯನ್ನು ಗಮನಿಸಿದರೆ ವೇಗಿ ಮೊಹಮ್ಮದ್ ಶಮಿ ಅವರ ಏಕದಿನ ಕ್ರಿಕೆಟ್‌ ವೃತ್ತಿ ಬದುಕು ಮುಗಿಯಿತಾ ಎನ್ನುವ ಪ್ರಶ್ನೆಗಳು ಕಾಡಲಾರಂಭಿಸಿವೆ.

Source link

Leave a Reply

Your email address will not be published. Required fields are marked *